إعدادات العرض
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) 'ಜನಾಬತ್' (ದೊಡ್ಡ ಅಶುದ್ಧಿ) ಸ್ನಾನ ಮಾಡಲು ಒಂದು 'ಸಾಅ್'…
ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) 'ಜನಾಬತ್' (ದೊಡ್ಡ ಅಶುದ್ಧಿ) ಸ್ನಾನ ಮಾಡಲು ಒಂದು 'ಸಾಅ್' ನೀರನ್ನು, ಮತ್ತು ವುಧೂ ಮಾಡಲು ಒಂದು 'ಮುದ್ದ್' ನೀರನ್ನು ಬಳಸುತ್ತಿದ್ದರು
ಸಫೀನಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: "ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) 'ಜನಾಬತ್' (ದೊಡ್ಡ ಅಶುದ್ಧಿ) ಸ್ನಾನ ಮಾಡಲು ಒಂದು 'ಸಾಅ್' ನೀರನ್ನು, ಮತ್ತು ವುಧೂ ಮಾಡಲು ಒಂದು 'ಮುದ್ದ್' ನೀರನ್ನು ಬಳಸುತ್ತಿದ್ದರು."
الترجمة
العربية Português دری Македонски Magyar ქართული Tiếng Việt বাংলা Kurdî ไทย অসমীয়া Indonesia Nederlands ਪੰਜਾਬੀ Tagalog Kiswahili Hausa ភាសាខ្មែរ English ગુજરાતી Русский मराठी മലയാളംالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜನಾಬತ್ ಸ್ನಾನಕ್ಕಾಗಿ ಒಂದು 'ಸಾಅ್' ಮತ್ತು ವುಧೂಗಾಗಿ ಒಂದು 'ಮುದ್ದ್' ಪ್ರಮಾಣದ ನೀರನ್ನು ಬಳಸುತ್ತಿದ್ದರು. 'ಸಾಅ್' ಎಂದರೆ, ನಾಲ್ಕು 'ಮುದ್ದ್'ಗಳು. 'ಮುದ್ದ್' ಎಂದರೆ, ಸಾಧಾರಣ ಮೈಕಟ್ಟು ಇರುವ ಮನುಷ್ಯನ ಎರಡೂ ಬೊಗಸೆ ತುಂಬುವಷ್ಟು ಪ್ರಮಾಣ.فوائد الحديث
ವುಧೂ ಮತ್ತು ಸ್ನಾನದ ನೀರಿನಲ್ಲಿ ಮಿತವ್ಯಯ ಮಾಡುವುದು ನಿಯಮಗೊಳಿಸಲಾಗಿದೆ. ನೀರು ಸುಲಭವಾಗಿ ಲಭ್ಯವಿದ್ದರೂ ಸರಿ, ಅದನ್ನು ಪೋಲು ಮಾಡಬಾರದು.
ಅಗತ್ಯಕ್ಕೆ ತಕ್ಕಷ್ಟು ನೀರನ್ನು ಮಿತವಾಗಿ ಬಳಸುವುದು ಮುಸ್ತಹಬ್ (ಅಪೇಕ್ಷಿತ) ಆಗಿದೆ. ಇದೇ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತೋರಿಸಿದ ಮಾದರಿ.;
ನೀರನ್ನು ಪೋಲು ಮಾಡದೆ ಮತ್ತು ಜಿಪುಣತನವನ್ನೂ ಮಾಡದೆ, ಸುನ್ನತ್ ಮತ್ತು ಶಿಷ್ಟಾಚಾರಗಳನ್ನು ಪಾಲಿಸಿಕೊಂಡು ವುಧೂ ಮತ್ತು ಸ್ನಾನವನ್ನು ಪೂರ್ತಿಗೊಳಿಸುವುದು ಇದರ ಉದ್ದೇಶ. ಸಮಯ, ನೀರಿನ ಲಭ್ಯತೆ (ಹೆಚ್ಚು ಅಥವಾ ಕಡಿಮೆ) ಮತ್ತು ಇತರ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಜನಾಬತ್: ವೀರ್ಯ ಸ್ಖಲನವಾದ ಅಥವಾ ಪತ್ನಿಯೊಂದಿಗೆ ಸಂಭೋಗ ನಡೆಸಿದ ಪ್ರತಿಯೊಬ್ಬರಿಗೂ 'ಜನಾಬತ್' (ದೊಡ್ಡ ಅಶುದ್ಧಿ) ಸ್ಥಿತಿಯಲ್ಲಿದ್ದಾರೆ ಎಂದು ಹೇಳಲಾಗುತ್ತದೆ. ಅವರು ಶುದ್ಧಿಯಾಗುವವರೆಗೆ ನಮಾಝ್ ಮತ್ತು ಆರಾಧನೆಗಳಿಂದ ದೂರವಿರಬೇಕಾದ್ದರಿಂದ ಇದನ್ನು ಹಾಗೆ (ಜನಾಬತ್ ಎಂದು) ಕರೆಯಲಾಗಿದೆ.
ಸಾಅ್: ಇದು ಒಂದು ಪ್ರಸಿದ್ಧ ಅಳತೆಯಾಗಿದೆ. ಇಲ್ಲಿ ಪ್ರವಾದಿಯವರ ಕಾಲದ ಸಾಅ್ ಉದ್ದೇಶವಾಗಿದೆ. ಇದರ ತೂಕ 480 ಮಿಸ್ಕಾಲ್ ಉತ್ತಮ ಗೋಧಿ. ಲೀಟರ್ ಲೆಕ್ಕದಲ್ಲಿ 3 ಲೀಟರ್‌ಗಳು.
ಮುದ್ದ್: ಇದು ಧಾರ್ಮಿಕ ಅಳತೆಯ ಮಾನದಂಡ. ಸಾಧಾರಣ ಮೈಕಟ್ಟು ಇರುವ ವ್ಯಕ್ತಿಯು ತನ್ನ ಕೈಗಳನ್ನು ಚಾಚಿ ಬೊಗಸೆ ತುಂಬಿದರೆ ಹಿಡಿಸುವಷ್ಟು ಪ್ರಮಾಣ. ಎಲ್ಲಾ ಕರ್ಮಶಾಸ್ತ್ರಜ್ಞರ ಒಮ್ಮತದ ಪ್ರಕಾರ, ಒಂದು 'ಮುದ್ದ್' ಎಂದರೆ 'ಸಾಅ್'ನ ನಾಲ್ಕನೇ ಒಂದು ಭಾಗ. ಇದರ ಪ್ರಮಾಣ 750 ಮಿಲಿ ಲೀಟರ್.
