إعدادات العرض
ಹಸಿದವನಿಗೆ ಉಣಿಸಿರಿ, ರೋಗಿಯನ್ನು ಸಂದರ್ಶಿಸಿರಿ, ಮತ್ತು ಸೆರೆಯಾಳನ್ನು ಬಿಡಿಸಿರಿ
ಹಸಿದವನಿಗೆ ಉಣಿಸಿರಿ, ರೋಗಿಯನ್ನು ಸಂದರ್ಶಿಸಿರಿ, ಮತ್ತು ಸೆರೆಯಾಳನ್ನು ಬಿಡಿಸಿರಿ
ಅಬೂ ಮೂಸಾ ಅಲ್-ಅಶ್‌ಅರೀ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಹಸಿದವನಿಗೆ ಉಣಿಸಿರಿ, ರೋಗಿಯನ್ನು ಸಂದರ್ಶಿಸಿರಿ, ಮತ್ತು ಸೆರೆಯಾಳನ್ನು ಬಿಡಿಸಿರಿ".
[صحيح] [رواه البخاري]
الترجمة
العربية বাংলা Bosanski English Español فارسی Français Indonesia Русский Tagalog Türkçe اردو 中文 हिन्दी Tiếng Việt Hausa Kurdî دری Português ไทย Македонски Magyar ქართული অসমীয়া Nederlands ਪੰਜਾਬੀ Kiswahili ગુજરાતી ភាសាខ្មែរ සිංහල मराठी മലയാളംالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಒಬ್ಬ ಮುಸ್ಲಿಂ ತನ್ನ ಸಹೋದರ ಮುಸ್ಲಿಂನ ಮೇಲೆ ಹೊಂದಿರುವ ಹಕ್ಕುಗಳಲ್ಲಿ, ಹಸಿದವನಿಗೆ ಊಟ ನೀಡುವುದು, ರೋಗಿಯನ್ನು ಭೇಟಿ ಮಾಡುವುದು ಮತ್ತು ಕೈದಿಯನ್ನು (ಸೆರೆಯಿಂದ) ಬಿಡಿಸುವುದು ಸೇರಿವೆ.فوائد الحديث
ಮುಸ್ಲಿಮರ ನಡುವೆ ಪರಸ್ಪರ ಸಹಕಾರವನ್ನು ಪ್ರೋತ್ಸಾಹಿಸಲಾಗಿದೆ.
ಆಹಾರದ ಅಗತ್ಯವಿರುವ ಹಸಿದವನಿಗೆ ಉಣಿಸಲು ಪ್ರೋತ್ಸಾಹಿಸಲಾಗಿದೆ ಮತ್ತು ಅವನಿಗೆ ಉಣಿಸಲು ಆದೇಶಿಸಲಾಗಿದೆ.
ರೋಗಿಯನ್ನು ಸಂದರ್ಶಿಸುವುದು ನಿಯಮಗೊಳಿಸಲಾಗಿದೆ. ಇದರಿಂದ ರೋಗಿಯ ಮನಸ್ಸಿಗೆ ನೆಮ್ಮದಿ ನೀಡಲು, ಅವನಿಗಾಗಿ ಪ್ರಾರ್ಥಿಸಲು, ಮತ್ತು ಪುಣ್ಯವನ್ನು ಪಡೆಯಲು ಸಾಧ್ಯವಾಗುತ್ತದೆ.
ಕೈದಿಯು ಸತ್ಯನಿಷೇಧಿಗಳಿಂದ ಸೆರೆಹಿಡಿಯಲ್ಪಟ್ಟಿದ್ದರೆ ಅವನನ್ನು ಬಿಡಿಸಲು ಆಸಕ್ತಿ ವಹಿಸಬೇಕು. ಇದು ಒಂದೋ ಅವನನ್ನು ಬಿಡಿಸಲು ಪರಿಹಾರ (ಹಣ) ನೀಡುವ ಮೂಲಕ, ಅಥವಾ ಸತ್ಯನಿಷೇಧಿಗಳ ಕೈದಿಯೊಂದಿಗೆ ಅವನನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಆಗಿರಬಹುದು.
التصنيفات
Praiseworthy Morals