إعدادات العرض
ಪರಿಪಾಲಕನಾಗಿ ಅಲ್ಲಾಹನಲ್ಲಿ, ಧರ್ಮವಾಗಿ ಇಸ್ಲಾಮಿನಲ್ಲಿ ಮತ್ತು ಪ್ರವಾದಿಯಾಗಿ ಮುಹಮ್ಮದ್‌ರಲ್ಲಿ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು…
ಪರಿಪಾಲಕನಾಗಿ ಅಲ್ಲಾಹನಲ್ಲಿ, ಧರ್ಮವಾಗಿ ಇಸ್ಲಾಮಿನಲ್ಲಿ ಮತ್ತು ಪ್ರವಾದಿಯಾಗಿ ಮುಹಮ್ಮದ್‌ರಲ್ಲಿ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಂಪೂರ್ಣ ಸಂತೃಪ್ತಿಯಿರುವವರು ಸತ್ಯವಿಶ್ವಾಸದ ಮಾಧುರ್ಯವನ್ನು ಸವಿಯುವರು
ಅಬ್ಬಾಸ್ ಬಿನ್ ಅಬ್ದುಲ್ ಮುತ್ತಲಿಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ಅವರು ಕೇಳಿದ್ದರು: "ಪರಿಪಾಲಕನಾಗಿ ಅಲ್ಲಾಹನಲ್ಲಿ, ಧರ್ಮವಾಗಿ ಇಸ್ಲಾಮಿನಲ್ಲಿ ಮತ್ತು ಪ್ರವಾದಿಯಾಗಿ ಮುಹಮ್ಮದ್‌ರಲ್ಲಿ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಂಪೂರ್ಣ ಸಂತೃಪ್ತಿಯಿರುವವರು ಸತ್ಯವಿಶ್ವಾಸದ ಮಾಧುರ್ಯವನ್ನು ಸವಿಯುವರು."
الترجمة
العربية অসমীয়া Bahasa Indonesia Kiswahili Tagalog Tiếng Việt ગુજરાતી Nederlands සිංහල Hausa پښتو नेपाली Кыргызча മലയാളം English Svenska Română Kurdî Bosanski తెలుగు ქართული Moore Српски Magyar اردو Português Македонски Čeština فارسی Русский Українська हिन्दी Azərbaycan አማርኛ Malagasy Kinyarwanda Wolof ไทย मराठी ਪੰਜਾਬੀ دری Türkçe বাংলা ភាសាខ្មែរ Lietuviųالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ನಿಜವಾದ ಸತ್ಯವಿಶ್ವಾಸವನ್ನು ಹೊಂದಿರುವ ಮತ್ತು ಅದರಲ್ಲಿ ಹೃದಯವು ನೆಮ್ಮದಿಯಾಗಿರುವ ಸತ್ಯವಿಶ್ವಾಸಿಯು ತನ್ನ ಹೃದಯದಲ್ಲಿ ವಿಶಾಲತೆಯನ್ನು, ಸಂತೋಷವನ್ನು, ಮಾಧುರ್ಯವನ್ನು ಮತ್ತು ಅಲ್ಲಾಹನಿಗೆ ಸಮೀಪವಾಗುವ ಸವಿಯನ್ನು ಅನುಭವಿಸುತ್ತಾನೆ. ಅವನು ಮೂರು ವಿಷಯಗಳ ಬಗ್ಗೆ ಸಂತೃಪ್ತನಾಗಿದ್ದರೆ: ಒಂದು: ಪರಿಪಾಲಕನಾಗಿ ಅಲ್ಲಾಹನಲ್ಲಿ ಸಂತೃಪ್ತನಾಗುವುದು. ಅಂದರೆ ಅಲ್ಲಾಹು ಅವನ ಪ್ರಭುತ್ವವು ಆವಶ್ಯಪಡುವ ರೀತಿಯಲ್ಲಿ ವಿಭಾಗಿಸಿಕೊಟ್ಟ ಉಪಜೀವನ ಮತ್ತು ಪರಿಸ್ಥಿತಿಗಳಲ್ಲಿ ತನ್ನ ಪಾಲಿಗೆ ಏನು ಬಂದಿದೆಯೋ ಅದರಲ್ಲಿ ಮನಸಂತೃಪ್ತಿಯನ್ನು ಹೊಂದಿರುವುದು. ಅದರ ಬಗ್ಗೆ ಯಾವುದೇ ಆಕ್ಷೇಪವು ಅವನ ಮನಸ್ಸಿನಲ್ಲಿರುವುದಿಲ್ಲ. ಅಲ್ಲಾಹನ ಹೊರತು ಬೇರೆಯವರನ್ನು ಅವನು ಪರಿಪಾಲಕನಾಗಿ ಹುಡುಕುವುದೂ ಇಲ್ಲ. ಎರಡು: ಧರ್ಮವಾಗಿ ಇಸ್ಲಾಂನಲ್ಲಿ ಸಂತೃಪ್ತನಾಗುವುದು. ಅಂದರೆ ಇಸ್ಲಾಂ ಧರ್ಮದಲ್ಲಿರುವ ನಿಯಮಗಳು ಮತ್ತು ಕಡ್ಡಾಯ ಕರ್ತವ್ಯಗಳ ಬಗ್ಗೆ ಮನಸಂತೃಪ್ತಿಯನ್ನು ಹೊಂದಿರುವುದು. ಇಸ್ಲಾಂ ಅಲ್ಲದ ದಾರಿಯಲ್ಲಿ ಚಲಿಸದಿರುವುದು. ಮೂರು: ಪ್ರವಾದಿಯಾಗಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರಲ್ಲಿ ಸಂತೃಪ್ತನಾಗುವುದು. ಅಂದರೆ ಅವರು ಏನು ತಂದಿದ್ದಾರೋ ಅದರಲ್ಲಿ ಯಾವುದೇ ಹಿಂಜರಿಕೆ ಅಥವಾ ಸಂಶಯವನ್ನು ಇಟ್ಟುಕೊಳ್ಳದೆ ಮನಸಂತೃಪ್ತಿಯಿಂದ ಮತ್ತು ಸಂತೋಷದಿಂದ ಸ್ವೀಕರಿಸುವುದು. ಅವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಚರ್ಯೆಯಲ್ಲದ ಬೇರೆ ಚರ್ಯೆಗಳನ್ನು ಸ್ವೀಕರಿಸದಿರುವುದು.فوائد الحديث
ಸತ್ಯವಿಶ್ವಾಸಕ್ಕೆ ಮಾಧುರ್ಯ ಮತ್ತು ರುಚಿಯಿದ್ದು ಅದನ್ನು ಹೃದಯದ ಮೂಲಕ ಅನುಭವಿಸಬಹುದು. ಬಾಯಿಯ ಮೂಲಕ ಆಹಾರ ಪಾನೀಯಗಳ ರುಚಿಯನ್ನು ಅನುಭವಿಸುವಂತೆ.
ದೇಹವು ಆರೋಗ್ಯದಲ್ಲಿದ್ದರೆ ಮಾತ್ರ ಆಹಾರ ಪಾನೀಯಗಳ ರುಚಿಯನ್ನು ಅನುಭವಿಸುತ್ತದೆ. ಅದೇ ರೀತಿ ಹೃದಯವು ಕೂಡ ದುರ್ಮಾರ್ಗಕ್ಕೆ ಸಾಗಿಸುವ ಸ್ವೇಚ್ಛೆಗಳು ಮತ್ತು ನಿಷೇಧಿತ ಮೋಹಗಳೆಂಬ ರೋಗಗಳಿಂದ ಮುಕ್ತವಾಗಿದ್ದರೆ ಮಾತ್ರ ಸತ್ಯವಿಶ್ವಾಸದ ಮಾಧುರ್ಯವನ್ನು ಅನುಭವಿಸುತ್ತದೆ. ಅದು ಅನಾರೋಗ್ಯಕ್ಕೆ ಒಳಗಾದರೆ ಸತ್ಯವಿಶ್ವಾಸದ ಮಾಧುರ್ಯವನ್ನು ಅನುಭವಿಸುವುದಿಲ್ಲ. ಬದಲಿಗೆ, ಕೆಲವೊಮ್ಮೆ ಅದು ನಾಶಕ್ಕೆ ಹೇತುವಾಗುವ ಸ್ವೇಚ್ಛೆ ಮತ್ತು ಪಾಪಗಳ ರುಚಿಯನ್ನು ಬಯಸುತ್ತದೆ.
ಮನುಷ್ಯನಿಗೆ ಒಂದು ಕಾರ್ಯವು ಇಷ್ಟವಾದರೆ ಮತ್ತು ಅಂಗೀಕಾರವಾದರೆ ಅದು ಅವನಿಗೆ ಸುಲಭವಾಗುತ್ತದೆ. ಅದರ ಯಾವುದೇ ಭಾಗವೂ ಅವನಿಗೆ ಸ್ವಲ್ಪವೂ ಕಷ್ಟವಾಗುವುದಿಲ್ಲ. ಅದರೊಂದಿಗೆ ಬರುವ ಎಲ್ಲವನ್ನೂ ಅವನು ಸಂತೋಷದಿಂದ ಸ್ವೀಕರಿಸುತ್ತಾನೆ, ಅವನ ಹೃದಯವು ಆನಂದಭರಿತವಾಗುತ್ತದೆ. ಅದೇ ರೀತಿ, ಸತ್ಯವಿಶ್ವಾಸಿಯ ಹೃದಯಕ್ಕೆ ಸತ್ಯವಿಶ್ವಾಸವು ಪ್ರವೇಶಿಸಿದರೆ, ಅಲ್ಲಾಹನ ಆರಾಧನೆ ಮಾಡಲು ಅವನಿಗೆ ಸುಲಭವಾಗುತ್ತದೆ ಮತ್ತು ಅವನ ದೇಹವು ಅದಕ್ಕಾಗಿ ಹಾತೊರೆಯುತ್ತದೆ. ಅದಕ್ಕಾಗಿ ಕಷ್ಟಪಡುವುದು ಅವನಿಗೆ ಕಷ್ಟವಾಗುವುದಿಲ್ಲ.
ಇಬ್ನುಲ್ ಕಯ್ಯಿಮ್ ಹೇಳಿದರು: "ಈ ಹದೀಸ್ ಅಲ್ಲಾಹನ ಪ್ರಭುತ್ವ ಮತ್ತು ದೈವಿಕತೆಯಲ್ಲಿ ಸಂತೃಪ್ತನಾಗುವುದು, ಅವನ ಸಂದೇಶವಾಹಕರಲ್ಲಿ ಮತ್ತು ಅವರನ್ನು ಅನುಸರಿಸುವುದರಲ್ಲಿ ಸಂತೃಪ್ತನಾಗುವುದು ಮತ್ತು ಅವನ ಧರ್ಮದಲ್ಲಿ ಮತ್ತು ಅದಕ್ಕೆ ಶರಣಾಗುವುದರಲ್ಲಿ ಸಂತೃಪ್ತನಾಗುವುದನ್ನು ಒಳಗೊಂಡಿದೆ."
التصنيفات
Increase and Decrease of Faith