إعدادات العرض
ಪರಸ್ಪರ ಉಡುಗೊರೆಗಳನ್ನು ನೀಡಿರಿ, (ಆಗ) ನೀವು ಪರಸ್ಪರ ಪ್ರೀತಿಸುವಿರಿ
ಪರಸ್ಪರ ಉಡುಗೊರೆಗಳನ್ನು ನೀಡಿರಿ, (ಆಗ) ನೀವು ಪರಸ್ಪರ ಪ್ರೀತಿಸುವಿರಿ
ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುತ್ತಿದ್ದರು: "ಪರಸ್ಪರ ಉಡುಗೊರೆಗಳನ್ನು ನೀಡಿರಿ, (ಆಗ) ನೀವು ಪರಸ್ಪರ ಪ್ರೀತಿಸುವಿರಿ".
[حسن] [رواه البخاري في الأدب المفرد وأبو يعلى والبيهقي]
الترجمة
العربية বাংলা دری Português Македонски ไทย Tiếng Việt Magyar ქართული Indonesia Kurdî Hausa Tagalog অসমীয়া മലയാളം English ગુજરાતી Nederlands Kiswahili ਪੰਜਾਬੀ ភាសាខ្មែរ සිංහල Русский मराठीالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಬ್ಬ ಮುಸ್ಲಿಂ ತನ್ನ ಮುಸ್ಲಿಂ ಸಹೋದರನೊಂದಿಗೆ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವುದನ್ನು ಪ್ರೋತ್ಸಾಹಿಸಿದ್ದಾರೆ. ಉಡುಗೊರೆಯು ಪ್ರೀತಿಗೆ ಮತ್ತು ಹೃದಯಗಳನ್ನು ಬೆಸೆಯಲು ಕಾರಣವಾಗುತ್ತದೆ.فوائد الحديث
ಉಡುಗೊರೆ ನೀಡುವುದು ಅಪೇಕ್ಷಿತವಾಗಿದೆ; ಏಕೆಂದರೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದನ್ನು ಆದೇಶಿಸಿದ್ದಾರೆ.
ಉಡುಗೊರೆಯು ಪ್ರೀತಿಗೆ ಒಂದು ಕಾರಣವಾಗಿದೆ.
ಮನುಷ್ಯನು ತನ್ನ ಮತ್ತು ಇತರರ ನಡುವೆ ಪ್ರೀತಿಯನ್ನು ತರುವಂತಹ ಪ್ರತಿಯೊಂದು ಕಾರ್ಯವನ್ನೂ ಮಾಡಬೇಕು. ಅದು ಉಡುಗೊರೆಯ ಮೂಲಕವಾಗಿರಬಹುದು, ಮೃದು ಸ್ವಭಾವದ ಮೂಲಕವಾಗಿರಬಹುದು, ಒಳ್ಳೆಯ ಮಾತಿನ ಮೂಲಕವಾಗಿರಬಹುದು, ಅಥವಾ ಪ್ರಸನ್ನ ಮುಖದ ಮೂಲಕವಾಗಿರಬಹುದು, ತನಗೆ ಸಾಧ್ಯವಾದಷ್ಟು ಮಟ್ಟಿಗೆ (ಅವನು ಮಾಡಬೇಕು).
التصنيفات
Gift