ಯಾರು ಈ ಹೆಣ್ಣು ಮಕ್ಕಳ ಜವಾಬ್ದಾರಿಯನ್ನು ವಹಿಸುತ್ತಾನೋ ಮತ್ತು ಅವರಿಗೆ ಉತ್ತಮವಾಗಿ ಉಪಚರಿಸುತ್ತಾನೋ, ಅವರು (ಹೆಣ್ಣು ಮಕ್ಕಳು)…

ಯಾರು ಈ ಹೆಣ್ಣು ಮಕ್ಕಳ ಜವಾಬ್ದಾರಿಯನ್ನು ವಹಿಸುತ್ತಾನೋ ಮತ್ತು ಅವರಿಗೆ ಉತ್ತಮವಾಗಿ ಉಪಚರಿಸುತ್ತಾನೋ, ಅವರು (ಹೆಣ್ಣು ಮಕ್ಕಳು) ಅವನಿಗೆ ನರಕಕ್ಕೆ (ಹೋಗದಂತೆ) ಒಂದು ತಡೆಯಾಗುತ್ತಾರೆ

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪತ್ನಿ ಹಾಗೂ ಸತ್ಯವಿಶ್ವಾಸಿಗಳ ಮಾತೆ ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: "ಒಬ್ಬ ಮಹಿಳೆ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ನನ್ನ ಬಳಿಗೆ (ಸಹಾಯ) ಕೇಳಲು ಬಂದಳು. ಆಗ ನನ್ನ ಬಳಿ ಒಂದು ಖರ್ಜೂರವನ್ನು ಹೊರತುಪಡಿಸಿ ಬೇರೇನೂ ಇರಲಿಲ್ಲ. ನಾನು ಅದನ್ನು ಅವಳಿಗೆ ಕೊಟ್ಟೆನು. ಅವಳು ಅದನ್ನು ತನ್ನ ಇಬ್ಬರು ಹೆಣ್ಣು ಮಕ್ಕಳ ನಡುವೆ ಹಂಚಿದಳು (ತಾನು ತಿನ್ನಲಿಲ್ಲ). ನಂತರ ಅವಳು ಎದ್ದು ಹೊರಟುಹೋದಳು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) (ಮನೆಗೆ) ಪ್ರವೇಶಿಸಿದರು. ನಾನು ಅವರಿಗೆ (ನಡೆದದ್ದನ್ನು) ತಿಳಿಸಿದೆನು. ಆಗ ಅವರು ಹೇಳಿದರು: "ಯಾರು ಈ ಹೆಣ್ಣು ಮಕ್ಕಳ ಜವಾಬ್ದಾರಿಯನ್ನು ವಹಿಸುತ್ತಾನೋ ಮತ್ತು ಅವರಿಗೆ ಉತ್ತಮವಾಗಿ ಉಪಚರಿಸುತ್ತಾನೋ, ಅವರು (ಹೆಣ್ಣು ಮಕ್ಕಳು) ಅವನಿಗೆ ನರಕಕ್ಕೆ (ಹೋಗದಂತೆ) ಒಂದು ತಡೆಯಾಗುತ್ತಾರೆ".

[صحيح] [متفق عليه]

الشرح

ಸತ್ಯವಿಶ್ವಾಸಿಗಳ ಮಾತೆ ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ, ಒಮ್ಮೆ ಒಬ್ಬ ಮಹಿಳೆ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಅವರ ಬಳಿಗೆ ಬಂದು ತಿನ್ನಲು ಏನಾದರೂ ಕೊಡಿ ಎಂದು ಕೇಳಿದಳು. ಆಯಿಷಾ ರವರ ಬಳಿ ಒಂದು ಖರ್ಜೂರವನ್ನು ಹೊರತುಪಡಿಸಿ ಬೇರೇನೂ ಇರಲಿಲ್ಲ. ಅವರು ಅದನ್ನು ಅವಳಿಗೆ ಕೊಟ್ಟರು. ಆಗ ಆ ಮಹಿಳೆ ಖರ್ಜೂರವನ್ನು ತನ್ನ ಇಬ್ಬರು ಹೆಣ್ಣು ಮಕ್ಕಳ ನಡುವೆ ಹಂಚಿದಳು ಮತ್ತು ಅದರಿಂದ ತಾನು ಏನನ್ನೂ ತಿನ್ನಲಿಲ್ಲ. ನಂತರ ಅವಳು ಎದ್ದು ಹೊರಟುಹೋದಳು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) (ಮನೆಗೆ) ಪ್ರವೇಶಿಸಿದಾಗ, ಆಯಿಷಾ ಅವರಿಗೆ (ನಡೆದದ್ದನ್ನು) ತಿಳಿಸಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ಯಾರು ಈ ಹೆಣ್ಣು ಮಕ್ಕಳ ಜವಾಬ್ದಾರಿಯನ್ನು ವಹಿಸಿ, ಅವರಿಗೆ ಉತ್ತಮವಾಗಿ ಉಪಚರಿಸುತ್ತಾನೋ, ಅವರಿಗೆ ಶಿಷ್ಟಾಚಾರ ಕಲಿಸುತ್ತಾನೋ, ಅವರಿಗೆ ಉಣ್ಣಲು-ಕುಡಿಯಲು ಕೊಡುತ್ತಾನೋ, ಅವರಿಗೆ ಬಟ್ಟೆ-ಬರೆಗಳನ್ನು ನೀಡುತ್ತಾನೋ ಮತ್ತು ಅವರ ವಿಷಯದಲ್ಲಿ ತಾಳ್ಮೆಯಿಂದಿರುತ್ತಾನೋ, ಅವರು (ಹೆಣ್ಣು ಮಕ್ಕಳು) ಅವನಿಗೆ ನರಕಕ್ಕೆ (ಹೋಗದಂತೆ) ಒಂದು ತಡೆ ಮತ್ತು ರಕ್ಷಾಕವಚವಾಗುತ್ತಾರೆ.

فوائد الحديث

ಹೆಣ್ಣು ಮಕ್ಕಳ ಪಾಲನೆ ಮಾಡುವುದು ಮತ್ತು ಅವರಿಗಾಗಿ ಶ್ರಮಿಸುವುದು ನರಕದಿಂದ ರಕ್ಷಣೆ ಪಡೆಯುವ ಅತ್ಯುತ್ತಮ ಸತ್ಕರ್ಮಗಳಲ್ಲಿ ಒಂದಾಗಿದೆ.

ಮನುಷ್ಯನು ತನಗೆ ಸಾಧ್ಯವಾದಷ್ಟನ್ನು, ಅದು ಅತ್ಯಲ್ಪವಾಗಿದ್ದರೂ ಸಹ, ದಾನ ಮಾಡಲು ಪ್ರೋತ್ಸಾಹಿಸಲಾಗಿದೆ.

ಪೋಷಕರಿಗೆ ತಮ್ಮ ಮಕ್ಕಳ ಮೇಲಿರುವ ತೀವ್ರವಾದ ವಾತ್ಸಲ್ಯವನ್ನು ತಿಳಿಸಲಾಗಿದೆ.

ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮನೆಗಳ ಪರಿಸ್ಥಿತಿಯನ್ನು, ಮತ್ತು ಅವರ ಜೀವನೋಪಾಯವು ಕೇವಲ ಅಂದಿನ ದಿನಕ್ಕೆ ಸಾಕಾಗುವಷ್ಟು ಮಾತ್ರವಾಗಿತ್ತು ಎಂದು ತಿಳಿಸಲಾಗಿದೆ.

'ಈಸಾರ್' (ಪರಹಿತಚಿಂತನೆ) ನ ಶ್ರೇಷ್ಠತೆಯನ್ನು ವಿವರಿಸಲಾಗಿದೆ ಮತ್ತು ಅದು ಸತ್ಯವಿಶ್ವಾಸಿಗಳ ಲಕ್ಷಣಗಳಲ್ಲಿ ಒಂದಾಗಿದೆ ಎಂದು ತಿಳಿಸಲಾಗಿದೆ. ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ತನಗಿಂತಲೂ ಆ ಮಹಿಳೆ ಮತ್ತು ಅವಳ ಹೆಣ್ಣು ಮಕ್ಕಳ ಹಿತವನ್ನು ಪರಿಗಣಿಸಿದರು. ಇದು ಅವರ ತೀವ್ರ ಬಡತನದ ಹೊರತಾಗಿಯೂ ಅವರ ಔದಾರ್ಯ ಮತ್ತು ದೊಡ್ಡ ಮನಸ್ಸನ್ನು ಸೂಚಿಸುತ್ತದೆ.

ಹೆಣ್ಣು ಮಕ್ಕಳನ್ನು (ಪೋಷಿಸುವ ಜವಾಬ್ದಾರಿಯನ್ನು) 'ಇಬ್ತಿಲಾಅ್' (ಪರೀಕ್ಷೆ) ಎಂದು ಕರೆಯಲಾಗಿದೆ. ಅವರ ಪಾಲನೆಯಲ್ಲಿ ಕಷ್ಟ ಮತ್ತು ಶ್ರಮವಿರುವುದು, ಅಥವಾ ಕೆಲವು ಜನರು ಅವರನ್ನು ಇಷ್ಟಪಡದಿರುವುದು ಇದಕ್ಕೆ ಕಾರಣವಾಗಿರಬಹುದು. ಅಥವಾ ಅವರಿಗೆ ಸಾಮಾನ್ಯವಾಗಿ ತಮ್ಮದೇ ಆದ ಆದಾಯ ಮತ್ತು ಜೀವನೋಪಾಯದ ಮೂಲವಿರುವುದಿಲ್ಲ ಎಂಬ ಕಾರಣದಿಂದಾಗಿರಬಹುದು.

ಇಸ್ಲಾಮ್ ಅಜ್ಞಾನ ಕಾಲದ (ಜಾಹಿಲಿಯ್ಯ ಕಾಲದ) ನಿಂದನೀಯ ಪದ್ಧತಿಗಳನ್ನು ನಿರ್ಮೂಲನೆ ಮಾಡಲು ಬಂದಿದೆ. ಅದು ಹೆಣ್ಣು ಮಕ್ಕಳ ಬಗ್ಗೆ (ಉತ್ತಮವಾಗಿ ನೋಡಿಕೊಳ್ಳಲು) ಉಪದೇಶಿಸಿದ್ದು ಅವುಗಳಲ್ಲಿ ಒಂದಾಗಿದೆ.

ಕೆಲವು ವರದಿಗಳಲ್ಲಿ ಬಂದಿರುವಂತೆ, ಒಬ್ಬಳೇ ಮಗಳಿದ್ದರೂ ಸಹ ಈ ಪ್ರತಿಫಲವು ದೊರೆಯುತ್ತದೆ.

التصنيفات

Praiseworthy Morals, Voluntary Charity