ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಂಗಗಳನ್ನು ಎರಡೆರಡು ಬಾರಿ ತೊಳೆಯುವ ಮೂಲಕ ವುದೂ ನಿರ್ವಹಿಸಿದರು

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಂಗಗಳನ್ನು ಎರಡೆರಡು ಬಾರಿ ತೊಳೆಯುವ ಮೂಲಕ ವುದೂ ನಿರ್ವಹಿಸಿದರು

ಅಬ್ದುಲ್ಲಾ ಬಿನ್ ಝೈದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಂಗಗಳನ್ನು ಎರಡೆರಡು ಬಾರಿ ತೊಳೆಯುವ ಮೂಲಕ ವುದೂ ನಿರ್ವಹಿಸಿದರು."

[صحيح] [رواه البخاري]

الشرح

ಕೆಲವು ಸಂದರ್ಭಗಳಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವುದೂವಿನ ಅಂಗಗಳನ್ನು ಎರಡೆರಡು ಬಾರಿ ತೊಳೆಯುತ್ತಾ ವುದೂ ನಿರ್ವಹಿಸುತ್ತಿದ್ದರು. ಅವರು ಮುಖ—ಬಾಯಿ ಮುಕ್ಕಳಿಸುವುದು ಮತ್ತು ಮೂಗಿಗೆ ನೀರೆಳೆಯುವುದು ಅದರಲ್ಲಿ ಒಳಪಡುತ್ತದೆ—, ಕೈಗಳು ಮತ್ತು ಕಾಲುಗಳನ್ನು ಎರಡೆರಡು ಬಾರಿ ತೊಳೆಯುತ್ತಿದ್ದರು.

فوائد الحديث

ವುದೂವಿನ ಅಂಗಗಳನ್ನು ಒಂದು ಬಾರಿ ತೊಳೆಯುವುದು ಕಡ್ಡಾಯವಾಗಿದೆ. ಅದಕ್ಕಿಂತ ಹೆಚ್ಚು ತೊಳೆಯುವುದು ಅಪೇಕ್ಷಣೀಯವಾಗಿದೆ.

ಕೆಲವೊಮ್ಮೆ ಅಂಗಗಳನ್ನು ಎರಡೆರಡು ಬಾರಿ ತೊಳೆಯುವ ಮೂಲಕ ವುದೂ ನಿರ್ವಹಿಸಬೇಕು.

ತಲೆಯನ್ನು ಒಂದು ಬಾರಿ ಮಾತ್ರ ಸವರಬೇಕು.

التصنيفات

Recommended Acts and Manners of Ablution, Method of Ablution