ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಾವು 'ಜುನುಬ್' (ಅಶುದ್ಧ) ಆಗಿರದಿದ್ದ ಹೊರತು, ಉಳಿದೆಲ್ಲಾ…

ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಾವು 'ಜುನುಬ್' (ಅಶುದ್ಧ) ಆಗಿರದಿದ್ದ ಹೊರತು, ಉಳಿದೆಲ್ಲಾ ಸ್ಥಿತಿಗಳಲ್ಲೂ ನಮಗೆ ಕುರ್‌ಆನ್ ಓದಿ ಕೊಡುತ್ತಿದ್ದರು

ಅಲಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: "ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಾವು 'ಜುನುಬ್' (ಅಶುದ್ಧ) ಆಗಿರದಿದ್ದ ಹೊರತು, ಉಳಿದೆಲ್ಲಾ ಸ್ಥಿತಿಗಳಲ್ಲೂ ನಮಗೆ ಕುರ್‌ಆನ್ ಓದಿ ಕೊಡುತ್ತಿದ್ದರು."

[حسن] [رواه أبو داود والترمذي والنسائي وابن ماجه وأحمد]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಹಚರರಿಗೆ ಕುರ್‌ಆನ್ ಕಲಿಸುತ್ತಿದ್ದರು ಮತ್ತು ಅದನ್ನು ಓದಿ ಹೇಳುತ್ತಿದ್ದರು. ಅವರು ತಮ್ಮ ಪತ್ನಿಯೊಂದಿಗೆ ಸೇರಿದ ಕಾರಣದಿಂದ ಉಂಟಾಗುವ 'ಜನಾಬತ್' (ದೊಡ್ಡ ಅಶುದ್ಧಿ) ಸ್ಥಿತಿಯಲ್ಲಿ ಇಲ್ಲದಿದ್ದರೆ, ಉಳಿದೆಲ್ಲಾ ಸಂದರ್ಭಗಳಲ್ಲೂ ಅವರು ಹೀಗೆ ಮಾಡುತ್ತಿದ್ದರು.

فوائد الحديث

ದೊಡ್ಡ ಅಶುದ್ಧಿ ಇರುವವರು ಸ್ನಾನ ಮಾಡುವವರೆಗೆ ಕುರ್‌ಆನ್ ಪಠಿಸುವುದು ಅನುಮತಿಸಲಾಗುವುದಿಲ್ಲ.

ಪ್ರಾಯೋಗಿಕವಾಗಿ ಬೋಧಿಸಬೇಕೆಂದು ತಿಳಿಸಲಾಗಿದೆ.

التصنيفات

ಕುರ್ ಆನ್ ಮತ್ತು ಮುಸ್ಹಫ್‌ಗಳಿಗೆ ಸಂಬಂಧಿಸಿದ ನಿಯಮಗಳು, ಕುರ್ ಆನ್ ಓದುವ ಮತ್ತು ಅದರ ಸಂರಕ್ಷಣೆಗೆ ಸಂಬಂಧಿಸಿದ ಜನರ ಶಿಷ್ಟಾಚಾರ, ಗುಸ್ಲ್ ( ಸ್ನಾನ)