إعدادات العرض
ಜನರು ಜುಮುಅ (ಶುಕ್ರವಾರದ) ನಮಾಝ್‌ಗಳನ್ನು ಬಿಡುವುದನ್ನು ಖಂಡಿತವಾಗಿಯೂ ನಿಲ್ಲಿಸಬೇಕು. ಇಲ್ಲದಿದ್ದರೆ, ಅಲ್ಲಾಹು ಅವರ ಹೃದಯಗಳ ಮೇಲೆ…
ಜನರು ಜುಮುಅ (ಶುಕ್ರವಾರದ) ನಮಾಝ್‌ಗಳನ್ನು ಬಿಡುವುದನ್ನು ಖಂಡಿತವಾಗಿಯೂ ನಿಲ್ಲಿಸಬೇಕು. ಇಲ್ಲದಿದ್ದರೆ, ಅಲ್ಲಾಹು ಅವರ ಹೃದಯಗಳ ಮೇಲೆ ಖಂಡಿತವಾಗಿಯೂ ಮೊಹರು ಹಾಕುವನು. ನಂತರ ಅವರು ಖಂಡಿತವಾಗಿಯೂ ನಿರ್ಲಕ್ಷ್ಯರಾಗಿ ಬಿಡುವರು
ಅಬ್ದುಲ್ಲಾ ಇಬ್ನ್ ಉಮರ್ ಮತ್ತು ಅಬೂ ಹುರೈರಾ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರಿಬ್ಬರು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಮಿಂಬರ್ (ಪ್ರವಚನ ಪೀಠ) ನ ಮರದ ಮೆಟ್ಟಿಲುಗಳ ಮೇಲೆ (ನಿಂತು) ಹೇಳುತ್ತಿರುವುದನ್ನು ಕೇಳಿದರು: "ಜನರು ಜುಮುಅ (ಶುಕ್ರವಾರದ) ನಮಾಝ್‌ಗಳನ್ನು ಬಿಡುವುದನ್ನು ಖಂಡಿತವಾಗಿಯೂ ನಿಲ್ಲಿಸಬೇಕು. ಇಲ್ಲದಿದ್ದರೆ, ಅಲ್ಲಾಹು ಅವರ ಹೃದಯಗಳ ಮೇಲೆ ಖಂಡಿತವಾಗಿಯೂ ಮೊಹರು ಹಾಕುವನು. ನಂತರ ಅವರು ಖಂಡಿತವಾಗಿಯೂ ನಿರ್ಲಕ್ಷ್ಯರಾಗಿ ಬಿಡುವರು".
الترجمة
العربية Tiếng Việt Indonesia Nederlands Kiswahili অসমীয়া English ગુજરાતી සිංහල Magyar ქართული Hausa Română ไทย Português मराठी ភាសាខ្មែរ دری አማርኛ বাংলা Kurdî Македонски Tagalog తెలుగు Українська ਪੰਜਾਬੀ മലയാളം Moore پښتوالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) - ತಮ್ಮ ಮಿಂಬರ್ ಮೇಲೆ ನಿಂತು - ಯಾವುದೇ ಕಾರಣವಿಲ್ಲದೆ, ಉದಾಸೀನತೆ ಮತ್ತು ಸೋಮಾರಿತನದಿಂದ ಜುಮುಅ ನಮಾಝ್ ಗೆ ಬರದಿರುವವರ ಬಗ್ಗೆ ಎಚ್ಚರಿಸಿದರು. (ಅವರು ಜುಮುಅಗೆ ಬರದಿದ್ದರೆ) ಅಲ್ಲಾಹು ಅವರ ಹೃದಯಗಳ ಮೇಲೆ ಮುದ್ರೆ ಒತ್ತುತ್ತಾನೆ ಮತ್ತು ಅವುಗಳನ್ನು ಮುಚ್ಚಿಬಿಡುತ್ತಾನೆ, ಹಾಗೂ ಅವು ಸತ್ಯವನ್ನು ಅನುಸರಿಸದಂತೆ ಅವುಗಳ ಮೇಲೆ ಒಂದು ತಡೆಯನ್ನು ಮಾಡುತ್ತಾನೆ. ನಂತರ ಅವರು ಒಳಿತಿನ ಕಾರ್ಯಗಳ ಬಗ್ಗೆ ನಿರ್ಲಕ್ಷ್ಯರಾಗುತ್ತಾರೆ, ಮತ್ತು ಅವರ ಮನಸ್ಸುಗಳು ವಿಧೇಯತೆಯ ಕಾರ್ಯಗಳಿಂದ ವಿಮುಖವಾಗುತ್ತವೆ ಎಂದು ತಿಳಿಸಿದರು.فوائد الحديث
ಜುಮುಅ ನಮಾಝ್‌ಗೆ ಗೈರುಹಾಜರಾಗುವುದರ ಬಗ್ಗೆ ಕಟ್ಟುನಿಟ್ಟಾದ ಎಚ್ಚರಿಕೆ, ಮತ್ತು ಅದು ಮಹಾಪಾಪಗಳಲ್ಲಿ ಒಂದಾಗಿದೆ ಎಂದು ತಿಳಿಸಲಾಗಿದೆ.
ಇಮಾಮ್ ನವವಿ ಹೇಳುತ್ತಾರೆ: “ಜುಮುಅ ನಮಾಝ್ 'ಫರ್ಝ್ ಐನ್' (ಪ್ರತಿಯೊಬ್ಬ ವ್ಯಕ್ತಿಯ ಮೇಲೂ ಕಡ್ಡಾಯ) ಆಗಿದೆ ಎಂದು ಇದರಿಂದ ತಿಳಿಯಬಹುದು.”
ಖುತ್ಬಾ (ಪ್ರವಚನ) ನೀಡಲು ಮಿಂಬರ್ (ಪೀಠ) ಅನ್ನು ಉಪಯೋಗಿಸುವುದು ನಿಯಮಗೊಳಿಸಲಾಗಿದೆ.
ಸಿಂದಿ ಹೇಳುತ್ತಾರೆ: ಇದರ ಅರ್ಥವೇನೆಂದರೆ, ಎರಡು ವಿಷಯಗಳಲ್ಲಿ ಒಂದು ಖಂಡಿತವಾಗಿಯೂ ಸಂಭವಿಸುತ್ತದೆ: ಒಂದೋ ಅವರು ಜುಮುಅಕ್ಕೆ ಹಾಜರಾಗದಿರುವುದನ್ನು ನಿಲ್ಲಿಸಬೇಕು, ಅಥವಾ ಅಲ್ಲಾಹು ಅವರ ಹೃದಯಗಳ ಮೇಲೆ ಮೊಹರು ಹಾಕುವನು. ಏಕೆಂದರೆ ಜುಮುಅಕ್ಕೆ ಬರದಿರುವುದನ್ನು ರೂಢಿ ಮಾಡಿಕೊಳ್ಳುವುದರಿಂದ ಹೃದಯಕ್ಕೆ ತುಕ್ಕು ಉಂಟಾಗಲು ಕಾರಣವಾಗುತ್ತದೆ ಮತ್ತು ವಿಧೇಯತೆಯ ಕಾರ್ಯಗಳಲ್ಲಿ ಮನಸ್ಸಿಗೆ ಆಸಕ್ತಿಯಿಲ್ಲದಂತೆ ಮಾಡುತ್ತದೆ.
ಉಪದೇಶ ನೀಡುವವರು ಮತ್ತು ನೆನಪಿಸುವವರು, ತಾವು ಯಾರಿಗೆ ಉಪದೇಶ ನೀಡಲು ಬಯಸುತ್ತಾರೋ ಅವರ ಹೆಸರನ್ನು ಪ್ರಸ್ತಾಪಿಸದೆ ಅಸ್ಪಷ್ಟವಾಗಿ (ಮೊತ್ತವಾಗಿ) ಹೇಳಬೇಕು; ಏಕೆಂದರೆ ಇದು ಉಪದೇಶವನ್ನು ಸ್ವೀಕರಿಸಲು ಮತ್ತು ಆದೇಶಗಳನ್ನು ಪಾಲಿಸಲು ಹೆಚ್ಚು ಪ್ರೇರಕವಾಗುತ್ತದೆ.
التصنيفات
Virtue of Friday