ಓ ಹಕೀಮ್, ಖಂಡಿತವಾಗಿಯೂ ಈ ಸಂಪತ್ತು ಹಸಿರು ಮತ್ತು ಸಿಹಿಯಾಗಿದೆ

ಓ ಹಕೀಮ್, ಖಂಡಿತವಾಗಿಯೂ ಈ ಸಂಪತ್ತು ಹಸಿರು ಮತ್ತು ಸಿಹಿಯಾಗಿದೆ

ಹಕೀಮ್ ಇಬ್ನ್ ಹಿಝಾಮ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ನಾನು ಅಲ್ಲಾಹನ ಸಂದೇಶವಾಹಕರಲ್ಲಿ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) (ಸಂಪತ್ತನ್ನು) ಕೇಳಿದೆನು, ಅವರು ನನಗೆ ಕೊಟ್ಟರು. ನಂತರ ನಾನು ಅವರಲ್ಲಿ ಮತ್ತೆ ಕೇಳಿದೆನು, ಅವರು ನನಗೆ ಮತ್ತೆ ಕೊಟ್ಟರು. ನಂತರ ಅವರು ಹೇಳಿದರು: "ಓ ಹಕೀಮ್, ಖಂಡಿತವಾಗಿಯೂ ಈ ಸಂಪತ್ತು ಹಸಿರು ಮತ್ತು ಸಿಹಿಯಾಗಿದೆ. ಯಾರು ಅದನ್ನು ತೃಪ್ತ ಮನಸ್ಸಿನಿಂದ ತೆಗೆದುಕೊಳ್ಳುತ್ತಾರೋ, ಅವನಿಗೆ ಅದರಲ್ಲಿ ಬರಕತ್ (ಸಮೃದ್ಧಿ) ನೀಡಲಾಗುವುದು. ಮತ್ತು ಯಾರು ಅದನ್ನು ದುರಾಸೆಯ ಮನಸ್ಸಿನಿಂದ ತೆಗೆದುಕೊಳ್ಳುತ್ತಾರೋ, ಅವನಿಗೆ ಅದರಲ್ಲಿ ಬರಕತ್ ನೀಡಲಾಗುವುದಿಲ್ಲ. ಅವನು ಆಹಾರ ಸೇವಿಸಿದರೂ ತೃಪ್ತಿಯಾಗದವನಂತೆ ಇರುವನು. ಮೇಲಿನ ಕೈಯು ಕೆಳಗಿನ ಕೈಗಿಂತ ಉತ್ತಮವಾಗಿದೆ". ಹಕೀಮ್ ಹೇಳಿದರು: ಆಗ ನಾನು ಹೇಳಿದೆನು: "ಓ ಅಲ್ಲಾಹನ ಸಂದೇಶವಾಹಕರೇ, ನಿಮ್ಮನ್ನು ಸತ್ಯದೊಂದಿಗೆ ಕಳುಹಿಸಿದವನ ಮೇಲೆ ಆಣೆಯಿಟ್ಟು ಹೇಳುತ್ತೇನೆ. ನಾನು ಈ ಪ್ರಪಂಚವನ್ನು ಬಿಟ್ಟುಹೋಗುವವರೆಗೆ ನಿಮ್ಮ ನಂತರ ಯಾರಿಂದಲೂ ಏನನ್ನೂ ಕೇಳಿ ಅವರ ಸಂಪತ್ತನ್ನು ಕಡಿಮೆ ಮಾಡುವುದಿಲ್ಲ". (ಖಲೀಫರಾದ) ಅಬೂ ಬಕ್ರ್ ರವರು ಹಕೀಮ್‌ಗೆ ಕೊಡುಗೆಯನ್ನು ನೀಡಲು ಕರೆಯುತ್ತಿದ್ದರು, ಆದರೆ ಅವರು ಅವರಿಂದ ಏನನ್ನೂ ಸ್ವೀಕರಿಸಲು ನಿರಾಕರಿಸುತ್ತಿದ್ದರು. ನಂತರ ಉಮರ್ ರವರು ಅವರಿಗೆ (ಅವರ ಪಾಲನ್ನು) ನೀಡಲು ಕರೆದರು, ಆಗಲೂ ಅವರು ಅದನ್ನು ಸ್ವೀಕರಿಸಲು ನಿರಾಕರಿಸಿದರು. ಆಗ ಉಮರ್ ಹೇಳಿದರು: "ಓ ಮುಸ್ಲಿಮರ ಸಮೂಹವೇ, ಈ 'ಫೈಅ್' (ಯುದ್ಧವಿಲ್ಲದೆ ಪಡೆದ ಸೊತ್ತು) ನಿಂದ ಅಲ್ಲಾಹು ಅವರಿಗೆ ವಿಧಿಸಿರುವ ಅವರ ಹಕ್ಕನ್ನು ನಾನು ಅವರಿಗೆ ನೀಡುತ್ತಿದ್ದೇನೆ, ಆದರೆ ಅವರು ಅದನ್ನು ತೆಗೆದುಕೊಳ್ಳಲು ನಿರಾಕರಿಸುತ್ತಿದ್ದಾರೆ". ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಂತರ ಹಕೀಮ್ ರವರು ಮರಣ ಹೊಂದುವವರೆಗೆ ಜನರಲ್ಲಿ ಯಾರಿಂದಲೂ ಏನನ್ನೂ ಕೇಳಿ ಅವರ ಸಂಪತ್ತನ್ನು ಕಡಿಮೆ ಮಾಡಲಿಲ್ಲ (ಅಲ್ಲಾಹು ಅವರ ಮೇಲೆ ಕರುಣೆ ತೋರಲಿ).

[صحيح] [متفق عليه]

الشرح

ಹಕೀಮ್ ಇಬ್ನ್ ಹಿಝಾಮ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ಪ್ರವಾದಿಯವರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಲೌಕಿಕ ವಸ್ತುಗಳನ್ನು ಕೇಳಿದರು, ಅವರು ಕೊಟ್ಟರು. ನಂತರ ಅವರು ಮತ್ತೊಮ್ಮೆ ಕೇಳಿದರು, ಅವರು ಮತ್ತೆ ಕೊಟ್ಟರು. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರಿಗೆ ಹೇಳಿದರು: ಓ ಹಕೀಮ್, ಖಂಡಿತವಾಗಿಯೂ ಈ ಸಂಪತ್ತು ಅಪೇಕ್ಷಣೀಯ ಮತ್ತು ಬಯಸಲ್ಪಡುವಂಥದ್ದು. ಯಾರಿಗೆ ಅದು ಕೇಳದೆ ಬರುತ್ತದೆಯೋ ಮತ್ತು ಯಾರು ಅದನ್ನು ಆತ್ಮದ ದುರಾಸೆ ಮತ್ತು ಹಠಮಾರಿತನವಿಲ್ಲದೆ ತೆಗೆದುಕೊಳ್ಳುತ್ತಾರೋ, ಅವನಿಗೆ ಅದರಲ್ಲಿ ಬರಕತ್ ನೀಡಲಾಗುವುದು. ಮತ್ತು ಯಾರು ಅದನ್ನು ಆತ್ಮದ ಹಂಬಲ ಮತ್ತು ದುರಾಸೆಯಿಂದ ತೆಗೆದುಕೊಳ್ಳುತ್ತಾರೋ, ಅವನಿಗೆ ಅದರಲ್ಲಿ ಬರಕತ್ ನೀಡಲಾಗುವುದಿಲ್ಲ. ಅವನು ಆಹಾರ ಸೇವಿಸಿದರೂ ತೃಪ್ತಿಯಾಗದವನಂತೆ ಇರುವನು. ನೀಡುವ ಮೇಲಿನ ಕೈಯು, ಕೇಳುವ ಕೆಳಗಿನ ಕೈಗಿಂತ ಅಲ್ಲಾಹನ ಬಳಿ ಉತ್ತಮವಾಗಿದೆ. ಹಕೀಮ್ ಹೇಳಿದರು: ಆಗ ನಾನು ಹೇಳಿದೆನು: ಓ ಅಲ್ಲಾಹನ ಸಂದೇಶವಾಹಕರೇ, ನಿಮ್ಮನ್ನು ಸತ್ಯದೊಂದಿಗೆ ಕಳುಹಿಸಿದವನ ಮೇಲೆ ಆಣೆಯಿಟ್ಟು ಹೇಳುತ್ತೇನೆ, ನಾನು ಈ ಪ್ರಪಂಚವನ್ನು ಬಿಟ್ಟುಹೋಗುವವರೆಗೆ ನಿಮ್ಮ ನಂತರ ಯಾರಿಂದಲೂ ಏನನ್ನೂ ಕೇಳಿ ಅವರ ಸಂಪತ್ತನ್ನು ಕಡಿಮೆ ಮಾಡುವುದಿಲ್ಲ. ಅಲ್ಲಾಹನ ಸಂದೇಶವಾಹಕರ ಖಲೀಫರಾದ ಅಬೂ ಬಕ್ರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ಹಕೀಮ್‌ಗೆ ಕೊಡುಗೆಯನ್ನು ನೀಡಲು ಕರೆಯುತ್ತಿದ್ದರು, ಆದರೆ ಅವರು ಸ್ವೀಕರಿಸಲು ನಿರಾಕರಿಸುತ್ತಿದ್ದರು. ನಂತರ ವಿಶ್ವಾಸಿಗಳ ನಾಯಕ ಉಮರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ಅವರಿಗೆ (ಅವರ ಪಾಲನ್ನು) ನೀಡಲು ಕರೆದರು, ಆಗಲೂ ಅವರು ಅದನ್ನು ಸ್ವೀಕರಿಸಲು ನಿರಾಕರಿಸಿದರು. ಆಗ ಉಮರ್ ಹೇಳಿದರು: ಓ ಮುಸ್ಲಿಮರ ಸಮೂಹವೇ, ಮುಸ್ಲಿಮರಿಗೆ ಸತ್ಯನಿಷೇಧಿಗಳಿಂದ ಯುದ್ಧವಿಲ್ಲದೆ ಮತ್ತು ಹೋರಾಟವಿಲ್ಲದೆ ಸಿಕ್ಕಿದ 'ಫೈಅ್' ಸಂಪತ್ತಿನಿಂದ ಅಲ್ಲಾಹು ಅವರಿಗೆ ವಿಧಿಸಿರುವ ಅವರ ಹಕ್ಕನ್ನು ನಾನು ಅವರಿಗೆ ನೀಡುತ್ತಿದ್ದೇನೆ, ಆದರೆ ಅವರು ಅದನ್ನು ತೆಗೆದುಕೊಳ್ಳಲು ನಿರಾಕರಿಸುತ್ತಿದ್ದಾರೆ. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಂತರ ಹಕೀಮ್ ರವರು ಮರಣ ಹೊಂದುವವರೆಗೆ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಯಾರಿಂದಲೂ ಏನನ್ನೂ ಕೇಳಿ ಅವರ ಸಂಪತ್ತನ್ನು ಕಡಿಮೆ ಮಾಡಲಿಲ್ಲ.

فوائد الحديث

ನಿಯಮಾನುಸೃತ ಮಾರ್ಗಗಳಲ್ಲಿ ಸಂಪತ್ತನ್ನು ಗಳಿಸುವುದು ಮತ್ತು ಸಂಗ್ರಹಿಸುವುದು ಇಹಲೋಕದ ಬಗ್ಗೆ 'ಝುಹ್ದ್' (ವೈರಾಗ್ಯ) ಹೊಂದುವುದಕ್ಕೆ ವಿರುದ್ಧವಾಗಿಲ್ಲ; ಏಕೆಂದರೆ ಝುಹ್ದ್ ಎಂದರೆ ಆತ್ಮದ ತೃಪ್ತಿ ಮತ್ತು ಹೃದಯವು ಸಂಪತ್ತಿಗೆ ಅಂಟಿಕೊಳ್ಳದಿರುವುದು.

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಹಾನ್ ಔದಾರ್ಯವನ್ನು ವಿವರಿಸಲಾಗಿದೆ, ಮತ್ತು ಅವರು ಎಂದಿಗೂ ಬಡತನಕ್ಕೆ ಹೆದರದವನು ನೀಡುವಂತೆ ನೀಡುತ್ತಿದ್ದರು ಎಂದು ತಿಳಿಸಲಾಗಿದೆ.

ಸಹಾಯವನ್ನು ನೀಡುವಾಗ ಉಪದೇಶ ನೀಡಬೇಕು ಮತ್ತು ಸಹೋದರರಿಗೆ ಪ್ರಯೋಜನವಾಗಲೆಂದು ಆಸಕ್ತಿ ವಹಿಸಬೇಕು; ಏಕೆಂದರೆ (ಸಹಾಯ ಪಡೆದ) ಆತ್ಮವು ಉತ್ತಮವಾದ ಮಾತುಗಳಿಂದ ಪ್ರಯೋಜನ ಪಡೆಯಲು ಸಿದ್ಧವಾಗಿರುತ್ತದೆ.

ಜನರ ಮುಂದೆ ಕೈಯೊಡ್ಡುವುದರಿಂದ - ವಿಶೇಷವಾಗಿ ಅಗತ್ಯವಿಲ್ಲದಿದ್ದಾಗ - ದೂರವಿರಬೇಕೆಂದು ಮತ್ತು ಅದರಿಂದ ದೂರವಿರಲು ಪ್ರೇರೇಪಿಸಬೇಕೆಂದು ತಿಳಿಸಲಾಗಿದೆ.

ಇದರಲ್ಲಿ ಸಂಪತ್ತಿನ ದುರಾಸೆ ಮತ್ತು ಅತಿಯಾಗಿ ಕೇಳುವುದನ್ನು ಖಂಡಿಸಲಾಗಿದೆ.

ಕೇಳುವವನು ಹಠ ಹಿಡಿದರೆ, ಅವನನ್ನು ಹಿಂದಕ್ಕೆ ಕಳುಹಿಸುವುದು, ಅವನಿಗೆ ನೀಡದಿರುವುದು, ಅವನಿಗೆ ಉಪದೇಶ ನೀಡುವುದು, ಮತ್ತು ಆತ್ಮಸಂಯಮ ಪಾಲಿಸಲು ಹಾಗೂ ಬೇಡುವುದನ್ನು ಬಿಡಲು ಆದೇಶಿಸುವುದು ಅನುಮತಿಸಲಾಗಿದೆ.

ಇಮಾಮ್ ನೀಡುವವರೆಗೆ ಸಾರ್ವಜನಿಕ ಖಜಾನೆಯಿಂದ (ಬೈತುಲ್ ಮಾಲ್) ಏನನ್ನೂ ತೆಗೆದುಕೊಳ್ಳಲು ಯಾರಿಗೂ ಅರ್ಹತೆಯಿಲ್ಲ. ಯುದ್ಧದ ಸೊತ್ತನ್ನು ಹಂಚುವ ಮೊದಲು, ಅದು ಯಾರಿಗೂ ಅರ್ಹವಾಗಿರುವುದಿಲ್ಲ.

ಅಗತ್ಯ ಬಂದರೆ ಕೇಳಲು ಅನುಮತಿಯಿದೆ.

ಇಬ್ನ್ ಹಜರ್ ಹೇಳುತ್ತಾರೆ: "ಇಮಾಮರು ಬೇಡುವವನಿಗೆ ಅವನ ಅಗತ್ಯವನ್ನು ಪೂರೈಸಿದ ನಂತರವೇ ಅವನ ಕೋರಿಕೆಯಲ್ಲಿರುವ ಕೆಡುಕನ್ನು ವಿವರಿಸಬೇಕು. ಇದರಿಂದ ಅವರು ನೀಡುವ ಉಪದೇಶವು ಸರಿಯಾದ ಪರಿಣಾಮವನ್ನು ಬೀರುತ್ತದೆ, ಮತ್ತು ಅದು ಅವನ ಅಗತ್ಯವನ್ನು ನಿರಾಕರಿಸಲು ಒಂದು ಕಾರಣವೆಂದು ಅವನು ಭಾವಿಸುವುದಿಲ್ಲ."

ಹಕೀಮ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಶ್ರೇಷ್ಠತೆಯನ್ನು ಮತ್ತು ಅವರು ಅಲ್ಲಾಹನೊಂದಿಗೆ ಹಾಗೂ ಅವನ ಸಂದೇಶವಾಹಕರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಾಡಿದ ಪ್ರತಿಜ್ಞೆಗೆ ಅವರು ಬದ್ಧತೆ ತೋರಿದ್ದನ್ನು ವಿವರಿಸಲಾಗಿದೆ.

ಇಸ್‌ಹಾಖ್ ಇಬ್ನ್ ರಾಹವೈಹ್ ಹೇಳುತ್ತಾರೆ: "ಹಕೀಮ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಮರಣ ಹೊಂದಿದಾಗ, ಅವರು ಖುರೈಶರಲ್ಲಿ ಅತ್ಯಂತ ಶ್ರೀಮಂತರಲ್ಲಿ ಒಬ್ಬರಾಗಿದ್ದರು."

التصنيفات

Condemning Love of the World