إعدادات العرض
ನಿಮ್ಮಲ್ಲೊಬ್ಬನಿಗೆ ಪ್ರತಿದಿನ ಒಂದು ಸಾವಿರ ಪುಣ್ಯಗಳನ್ನು ಗಳಿಸಲು ಸಾಧ್ಯವಿಲ್ಲವೇ?
ನಿಮ್ಮಲ್ಲೊಬ್ಬನಿಗೆ ಪ್ರತಿದಿನ ಒಂದು ಸಾವಿರ ಪುಣ್ಯಗಳನ್ನು ಗಳಿಸಲು ಸಾಧ್ಯವಿಲ್ಲವೇ?
ಸ'ಅದ್ ಇಬ್ನ್ ಅಬೀ ವಖ್ಖಾಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ನಾವು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿ ಇದ್ದೆವು. ಆಗ ಅವರು ಹೇಳಿದರು: "ನಿಮ್ಮಲ್ಲೊಬ್ಬನಿಗೆ ಪ್ರತಿದಿನ ಒಂದು ಸಾವಿರ ಪುಣ್ಯಗಳನ್ನು ಗಳಿಸಲು ಸಾಧ್ಯವಿಲ್ಲವೇ?" ಆಗ ಅವರೊಂದಿಗೆ ಕುಳಿತಿದ್ದವರಲ್ಲಿ ಒಬ್ಬರು ಕೇಳಿದರು: "ನಮ್ಮಲ್ಲೊಬ್ಬನು ಒಂದು ಸಾವಿರ ಪುಣ್ಯಗಳನ್ನು ಹೇಗೆ ಗಳಿಸಬಹುದು?" ಅವರು (ಪ್ರವಾದಿ) ಹೇಳಿದರು: "ಅವನು ನೂರು ಬಾರಿ ತಸ್ಬೀಹ್ (ಸುಬ್‌ಹಾನಲ್ಲಾಹ್) ಹೇಳುತ್ತಾನೆ. ಆಗ ಅವನಿಗಾಗಿ ಒಂದು ಸಾವಿರ ಪುಣ್ಯಗಳು ಬರೆಯಲ್ಪಡುತ್ತವೆ, ಅಥವಾ ಅವನಿಂದ ಒಂದು ಸಾವಿರ ಪಾಪಗಳು ಅಳಿಸಿಹಾಕಲ್ಪಡುತ್ತವೆ".
الترجمة
العربية বাংলা Bosanski English Español فارسی Français Indonesia Русский Tagalog Türkçe اردو 中文 हिन्दी Kurdî Tiếng Việt Magyar ქართული Kiswahili සිංහල Română অসমীয়া ไทย Hausa Português मराठी دری አማርኛ ភាសាខ្មែរ ગુજરાતી Nederlands Македонски ਪੰਜਾਬੀ മലയാളംالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಹಾಬಿಗಳೊಡನೆ ಕೇಳಿದರು: ನಿಮ್ಮಲ್ಲೊಬ್ಬನಿಗೆ ಪ್ರತಿದಿನ ಒಂದು ಸಾವಿರ ಪುಣ್ಯಗಳನ್ನು ಪಡೆಯಲು ಸಾಧ್ಯವಿಲ್ಲವೇ?! ಆಗ ಅವರೊಂದಿಗೆ ಕುಳಿತಿದ್ದವರಲ್ಲಿ ಒಬ್ಬರು ಕೇಳಿದರು: ಒಬ್ಬ ವ್ಯಕ್ತಿಯು ಒಂದು ದಿನದಲ್ಲಿ ಸುಲಭವಾಗಿ ಒಂದು ಸಾವಿರ ಪುಣ್ಯಗಳನ್ನು ಹೇಗೆ ಪಡೆಯಬಹುದು? ಅವರು (ಪ್ರವಾದಿ) ಹೇಳಿದರು: ಅವನು ನೂರು ಬಾರಿ "ಸುಬ್‌ಹಾನಲ್ಲಾಹ್" ಎಂದು ಹೇಳುತ್ತಾನೆ; ಆಗ ಅವನಿಗಾಗಿ ಒಂದು ಸಾವಿರ ಪುಣ್ಯಗಳು ಬರೆಯಲ್ಪಡುತ್ತವೆ; ಏಕೆಂದರೆ ಒಂದು ಪುಣ್ಯಕ್ಕೆ ಅದರ ಹತ್ತು ಪಟ್ಟು ಪ್ರತಿಫಲವಿದೆ. ಅಥವಾ ಅವನ ಪಾಪಗಳಿಂದ ಒಂದು ಸಾವಿರ ಪಾಪಗಳು ಅಳಿಸಿಹಾಕಲ್ಪಡುತ್ತವೆ.فوائد الحديث
ಶ್ರೇಷ್ಠ ಕರ್ಮಗಳ ಕಡೆಗೆ ಪ್ರೋತ್ಸಾಹಿಸಲಾಗಿದೆ; ಏಕೆಂದರೆ ಅವು ವಿಧೇಯತೆಯ ಕರ್ಮಗಳಿಗೆ ಏಣಿಯಾಗಿವೆ.
ತಸ್ಬೀಹ್ ಮತ್ತು ಧಿಕ್ರ್ (ಅಲ್ಲಾಹನ ಸ್ಮರಣೆ) ನ ಶ್ರೇಷ್ಠತೆಯನ್ನು ತಿಳಿಸಲಾಗಿದೆ. ಈ ಸುಲಭವಾದ ಕಾರ್ಯಕ್ಕೆ ಮನುಷ್ಯನು ಏನೂ ಖರ್ಚು ಮಾಡಬೇಕಾಗಿಲ್ಲ. ಆದರೆ ಅದರಿಂದ ಅವನು ಈ ಮಹಾನ್ ಪ್ರತಿಫಲವನ್ನು ಪಡೆಯುತ್ತಾನೆ.
ಸಹಾಬಿಗಳು ಒಳಿತಿನ ಕಾರ್ಯಗಳನ್ನು ವಿಳಂಬವಿಲ್ಲದೆ ಮಾಡಲು ಮುಂದಾಗುತ್ತಿದ್ದರು.
ಪುಣ್ಯಗಳನ್ನು ಹತ್ತು ಪಟ್ಟು ಹೆಚ್ಚಿಸಲಾಗುತ್ತದೆ. ಇದು ಅಲ್ಲಾಹನ ಈ ವಚನದಲ್ಲಿದೆ: "ಯಾರು ಒಂದು ಪುಣ್ಯದೊಂದಿಗೆ ಬರುತ್ತಾರೋ, ಅವರಿಗೆ ಅದರ ಹತ್ತು ಪಟ್ಟು (ಪ್ರತಿಫಲ) ಇದೆ." [ಸೂರಃ ಅಲ್-ಅನ್‌ಆಮ್: 160]. ಇದು ಹೆಚ್ಚಳದ ಕನಿಷ್ಠ ದರ್ಜೆಯಾಗಿದೆ. ಏಕೆಂದರೆ, ಏಳುನೂರು ಪಟ್ಟು ಹೆಚ್ಚಳದ ಬಗ್ಗೆಯೂ ವರದಿಯಾಗಿದೆ.
ಕೆಲವು ವರದಿಗಳಲ್ಲಿ "ಅಥವಾ (ಅವನಿಂದ ಪಾಪಗಳು) ಅಳಿಸಿಹಾಕಲ್ಪಡುತ್ತವೆ..." ಎಂಬಲ್ಲಿ 'ಅಥವಾ' (أو) ಬದಲಿಗೆ 'ಮತ್ತು' (و) ಬಂದಿದೆ. ಅಲ್-ಖಾರೀ ಹೇಳುತ್ತಾರೆ: " 'ಮತ್ತು' (و) ಎಂಬ ಪದವು ಕೆಲವೊಮ್ಮೆ 'ಅಥವಾ' (أو) ಎಂಬ ಪದದ ಅರ್ಥದಲ್ಲಿ ಬರುತ್ತದೆ. ಆದ್ದರಿಂದ ಎರಡು ವರದಿಗಳ ನಡುವೆ ಯಾವುದೇ ವಿರೋಧಾಭಾಸವಿಲ್ಲ. ಇದರ ಅರ್ಥ ಹೀಗಿರಬಹುದು: ಯಾರು ಅದನ್ನು ಹೇಳುತ್ತಾರೋ, ಅವನಿಗೆ ಒಂದು ಸಾವಿರ ಪುಣ್ಯಗಳು ಬರೆಯಲ್ಪಡುತ್ತವೆ. ಇದು ಒಂದು ವೇಳೆ ಅವನಲ್ಲಿ ಪಾಪಗಳಿಲ್ಲದಿದ್ದರೆ. ಪಾಪಗಳಿದ್ದರೆ, ಕೆಲವು (ಪಾಪಗಳು) ಅಳಿಸಿಹಾಕಲ್ಪಡುತ್ತವೆ ಮತ್ತು ಕೆಲವು (ಪುಣ್ಯಗಳು) ಗಳಿಸಲ್ಪಡುತ್ತವೆ. 'ಅಥವಾ' (أو) ಎನ್ನುವುದು 'ಮತ್ತು' (و) ದ ಅರ್ಥದಲ್ಲಿ ಅಥವಾ 'ಬದಲಿಗೆ' (بل) ದ ಅರ್ಥದಲ್ಲಿಯೂ ಇರಬಹುದು. ಆಗ ಅವನಿಗೆ ಅವೆರಡೂ (ಪುಣ್ಯಗಳ ಗಳಿಕೆ ಮತ್ತು ಪಾಪಗಳ ಅಳಿಸುವಿಕೆ) ಒಟ್ಟಿಗೆ ಸಿಗುತ್ತವೆ. ಅಲ್ಲಾಹನ ಅನುಗ್ರಹವು ಅದಕ್ಕಿಂತಲೂ ವಿಶಾಲವಾಗಿದೆ." (ಅವರ ಮಾತು ಮುಗಿಯಿತು). ಅಂದರೆ, ಅವನಿಗೆ ಒಂದು ಸಾವಿರ ಪುಣ್ಯಗಳು ಬರೆಯಲ್ಪಡುತ್ತವೆ ಮತ್ತು ಅವನಿಂದ ಒಂದು ಸಾವಿರ ಪಾಪಗಳು ಅಳಿಸಿಹಾಕಲ್ಪಡುತ್ತವೆ.
التصنيفات
Benefits of Remembering Allah