إعدادات العرض
ಪುನರುತ್ಥಾನ ದಿನದಂದು ಜನರನ್ನು ಬರಿಗಾಲಿನಲ್ಲಿ, ನಗ್ನರಾಗಿ ಮತ್ತು ಸುನ್ನತಿ ಮಾಡದ ಸ್ಥಿತಿಯಲ್ಲಿ ಒಟ್ಟುಗೂಡಿಸಲಾಗುವುದು
ಪುನರುತ್ಥಾನ ದಿನದಂದು ಜನರನ್ನು ಬರಿಗಾಲಿನಲ್ಲಿ, ನಗ್ನರಾಗಿ ಮತ್ತು ಸುನ್ನತಿ ಮಾಡದ ಸ್ಥಿತಿಯಲ್ಲಿ ಒಟ್ಟುಗೂಡಿಸಲಾಗುವುದು
ಸತ್ಯವಿಶ್ವಾಸಿಗಳ ಮಾತೆ ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ನಾನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುವುದನ್ನು ಕೇಳಿದ್ದೇನೆ: "ಪುನರುತ್ಥಾನ ದಿನದಂದು ಜನರನ್ನು ಬರಿಗಾಲಿನಲ್ಲಿ, ನಗ್ನರಾಗಿ ಮತ್ತು ಸುನ್ನತಿ ಮಾಡದ ಸ್ಥಿತಿಯಲ್ಲಿ ಒಟ್ಟುಗೂಡಿಸಲಾಗುವುದು". ನಾನು (ಆಯಿಷಾ) ಕೇಳಿದೆನು: "ಓ ಅಲ್ಲಾಹನ ಸಂದೇಶವಾಹಕರೇ, ಮಹಿಳೆಯರು ಮತ್ತು ಪುರುಷರು ಎಲ್ಲರೂ ಒಟ್ಟಿಗೆ, ಪರಸ್ಪರ ನೋಡುತ್ತಾರೆಯೇ?" ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಓ ಆಯಿಷಾ, ಪರಿಸ್ಥಿತಿಯು ಅವರು ಪರಸ್ಪರ ನೋಡುವುದಕ್ಕಿಂತಲೂ ಹೆಚ್ಚು ಭಯಾನಕವಾಗಿರುತ್ತದೆ".
الترجمة
العربية বাংলা Bosanski English Español فارسی Français Indonesia Русский Tagalog Türkçe اردو 中文 हिन्दी ئۇيغۇرچە Hausa Kurdî Tiếng Việt Magyar ქართული Kiswahili සිංහල Română অসমীয়া ไทย Português मराठी دری አማርኛ ភាសាខ្មែរ Nederlands Македонски ગુજરાતી ਪੰਜਾਬੀ മലയാളംالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪುನರುತ್ಥಾನ ದಿನದ ಕೆಲವು ವಿಷಯಗಳನ್ನು ವರ್ಣಿಸುತ್ತಾರೆ. ಅದೇನೆಂದರೆ, ಜನರನ್ನು ಅವರ ಸಮಾಧಿಗಳಿಂದ ಎಬ್ಬಿಸಿದ ನಂತರ ವಿಚಾರಣೆಗಾಗಿ ಒಟ್ಟುಗೂಡಿಸಲಾಗುವುದು. ಅವರ ಸ್ಥಿತಿಯು ಹೇಗಿರುತ್ತದೆಂದರೆ ಅವರು ಪಾದರಕ್ಷೆಗಳಿಲ್ಲದೆ ಬರಿಗಾಲಿನಲ್ಲಿ, ಬಟ್ಟೆ ಅಥವಾ ಮರೆಯಿಲ್ಲದೆ ನಗ್ನ ದೇಹದೊಂದಿಗೆ, ಮತ್ತು ಅವರ ತಾಯಂದಿರು ಅವರಿಗೆ ಜನ್ಮ ನೀಡಿದ ದಿನದಂತೆ ಸುನ್ನತಿ ಮಾಡದ ಸ್ಥಿತಿಯಲ್ಲಿರುತ್ತಾರೆ. ಸತ್ಯವಿಶ್ವಾಸಿಗಳ ಮಾತೆ ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಇದನ್ನು ಕೇಳಿದಾಗ, ಆಶ್ಚರ್ಯದಿಂದ ಕೇಳಿದರು: ಓ ಅಲ್ಲಾಹನ ಸಂದೇಶವಾಹಕರೇ, ಮಹಿಳೆಯರು ಮತ್ತು ಪುರುಷರು ಎಲ್ಲರೂ ಒಟ್ಟಿಗೆ, ಪರಸ್ಪರ ನೋಡುತ್ತಾರೆಯೇ?! ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿವರಿಸುವುದೇನೆಂದರೆ, ಮರಣದ ನಂತರ ಎಬ್ಬಿಸಿ ಒಟ್ಟುಗೂಡಿಸುವ ಆ ನಿಲುಗಡೆಯು ಎಂತಹ ಭಯಾನಕತೆಗಳನ್ನು ಹೊಂದಿರುತ್ತದೆ ಎಂದರೆ, ಅದು ಜನರ ಗಮನ ಮತ್ತು ದೃಷ್ಟಿಗಳನ್ನು 'ಔರತ್' (ಗುಪ್ತಾಂಗ) ಗಳನ್ನು ನೋಡುವುದರಿಂದ ಬೇರೆಡೆಗೆ ಸೆಳೆಯುತ್ತದೆ.فوائد الحديث
ಪುನರುತ್ಥಾನ ದಿನದ ಭಯಾನಕತೆಗಳನ್ನು ವಿವರಿಸಲಾಗಿದೆ, ಮತ್ತು ಆ ದಿನ ಮನುಷ್ಯನು ತನ್ನ ವಿಚಾರಣೆ ಮತ್ತು ಕರ್ಮಗಳನ್ನು ಹೊರತುಪಡಿಸಿ ಬೇರೆ ಯಾವುದರಲ್ಲೂ ಮಗ್ನನಾಗಿರುವುದಿಲ್ಲ ಎಂದು ತಿಳಿಸಲಾಗಿದೆ.
ಮನುಷ್ಯನು ಕೇವಲ ನಿರ್ಲಕ್ಷ್ಯದ ಸ್ಥಿತಿಯಲ್ಲಿ ಮಾತ್ರ ಪಾಪದಲ್ಲಿ ಬೀಳುತ್ತಾನೆ ಎಂಬುದನ್ನು ದೃಢೀಕರಿಸಲಾಗಿದೆ. ಏಕೆಂದರೆ ಅವನು ತಾನು ಯಾರಿಗೆ ಅವಿಧೇಯನಾಗುತ್ತಿದ್ದೇನೋ ಅವನ (ಅಲ್ಲಾಹನ) ಮಹತ್ವವನ್ನು ಅಥವಾ ಅವನ ಶಿಕ್ಷೆಯನ್ನು ನೆನಪಿಸಿಕೊಂಡರೆ, ಕಣ್ಣು ಮಿಟುಕಿಸುವಷ್ಟು ಸಮಯ ಕೂಡ ಅವನ ಸ್ಮರಣೆ, ಕೃತಜ್ಞತೆ ಮತ್ತು ಉತ್ತಮ ಆರಾಧನೆಯಿಂದ ನಿರ್ಲಕ್ಷ್ಯನಾಗುವುದಿಲ್ಲ. ಈ ಕಾರಣದಿಂದಲೇ, ಮಹ್ಶರ್ (ಒಟ್ಟುಗೂಡುವ ಸ್ಥಳ) ನ ಜನರು ತಮ್ಮ ಬಗ್ಗೆಯೇ ಚಿಂತಿಸುತ್ತಾ ಮಗ್ನರಾಗಿರುತ್ತಾರೆಯೇ ವಿನಾ ಪರಸ್ಪರ ನೋಡುವುದಿಲ್ಲ.
ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಾಲದಲ್ಲಿ ಮಹಿಳೆಯರಿಗಿದ್ದ ತೀವ್ರ ಸ್ವರೂಪದ ಸಂಕೋಚವನ್ನು (ಹಯಾಅ್) ತಿಳಿಸಲಾಗಿದೆ. ಸೃಷ್ಟಿಗಳು ನಗ್ನ ರೂಪದಲ್ಲಿ ಎಬ್ಬಿಸಲ್ಪಡುತ್ತಾರೆ ಎಂದು ಕೇಳಿದಾಗ ಆಯಿಷಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ಸಂಕೋಚದಿಂದ ಅದರ ಬಗ್ಗೆ ವಿಚಾರಿಸುತ್ತಾರೆ.
ಅಸ್ಸಿಂದಿ ಹೇಳುತ್ತಾರೆ: "ಪ್ರತಿಯೊಬ್ಬನೂ ತನ್ನದೇ ಆದ ವಿಷಯದಲ್ಲಿ ಮಗ್ನನಾಗಿರುತ್ತಾನೆ ಮತ್ತು ತನ್ನ ಸಹೋದರನ ಸ್ಥಿತಿಯ ಬಗ್ಗೆ ಅವನಿಗೆ ಅರಿವಿರುವುದಿಲ್ಲ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಅಂದು ಅವರಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಅವನನ್ನು (ಇತರರಿಂದ) ವಿಮುಖನಾಗಿಸುವಷ್ಟು (ಗಂಭೀರವಾದ) ವಿಷಯವಿರುತ್ತದೆ." [ಸೂರಃ ಅಬಸ: 37]. ಆದ್ದರಿಂದ ಯಾರೂ ಇನ್ನೊಬ್ಬರ 'ಔರತ್' ಕಡೆಗೆ ಗಮನ ಹರಿಸುವುದಿಲ್ಲ.
ಪುರುಷನ ಸುನ್ನತಿ ಅವನ ಶಿಶ್ನದ ತುದಿಯನ್ನು ಮುಚ್ಚುವ ಚರ್ಮವನ್ನು ಕತ್ತರಿಸುವುದು. ಮಹಿಳೆಯ ಸುನ್ನತಿ ಯೋನಿಯ ಮೇಲ್ಭಾಗದಲ್ಲಿರುವ, ಹುಂಜದ ಜುಟ್ಟನ್ನು ಹೋಲುವ ಚರ್ಮದ ತುಂಡನ್ನು ಕತ್ತರಿಸುವುದು.
التصنيفات
The Hereafter Life