إعدادات العرض
ನಿಮ್ಮಲ್ಲಿ ಯಾರೂ, 'ಓ ಅಲ್ಲಾಹ್, ನೀನು ಇಚ್ಛಿಸಿದರೆ ನನ್ನನ್ನು ಕ್ಷಮಿಸು, ನೀನು ಇಚ್ಛಿಸಿದರೆ ನನಗೆ ಕರುಣೆ ತೋರು, ನೀನು ಇಚ್ಛಿಸಿದರೆ…
ನಿಮ್ಮಲ್ಲಿ ಯಾರೂ, 'ಓ ಅಲ್ಲಾಹ್, ನೀನು ಇಚ್ಛಿಸಿದರೆ ನನ್ನನ್ನು ಕ್ಷಮಿಸು, ನೀನು ಇಚ್ಛಿಸಿದರೆ ನನಗೆ ಕರುಣೆ ತೋರು, ನೀನು ಇಚ್ಛಿಸಿದರೆ ನನಗೆ ಉಪಜೀವನ ನೀಡು' ಎಂದು ಹೇಳಬಾರದು. ಬದಲಿಗೆ, ದೃಢನಿರ್ಧಾರದಿಂದ ತನ್ನ ಬೇಡಿಕೆಯನ್ನು ಕೇಳಬೇಕು. ಏಕೆಂದರೆ ಅವನು (ಅಲ್ಲಾಹು) ತಾನು ಇಚ್ಛಿಸಿದ್ದನ್ನು ಮಾಡುತ್ತಾನೆ, ಅವನ ಮೇಲೆ ಯಾರೂ ಒತ್ತಡ ಹಾಕುವವರಿಲ್ಲ
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮಲ್ಲಿ ಯಾರೂ, 'ಓ ಅಲ್ಲಾಹ್, ನೀನು ಇಚ್ಛಿಸಿದರೆ ನನ್ನನ್ನು ಕ್ಷಮಿಸು, ನೀನು ಇಚ್ಛಿಸಿದರೆ ನನಗೆ ಕರುಣೆ ತೋರು, ನೀನು ಇಚ್ಛಿಸಿದರೆ ನನಗೆ ಉಪಜೀವನ ನೀಡು' ಎಂದು ಹೇಳಬಾರದು. ಬದಲಿಗೆ, ದೃಢನಿರ್ಧಾರದಿಂದ ತನ್ನ ಬೇಡಿಕೆಯನ್ನು ಕೇಳಬೇಕು. ಏಕೆಂದರೆ ಅವನು (ಅಲ್ಲಾಹು) ತಾನು ಇಚ್ಛಿಸಿದ್ದನ್ನು ಮಾಡುತ್ತಾನೆ, ಅವನ ಮೇಲೆ ಯಾರೂ ಒತ್ತಡ ಹಾಕುವವರಿಲ್ಲ."
الترجمة
العربية বাংলা Bosanski English Español فارسی Français Bahasa Indonesia Русский Tagalog Türkçe اردو 中文 हिन्दी ئۇيغۇرچە Hausa Kurdî Português සිංහල Kiswahili অসমীয়া Tiếng Việt ગુજરાતી Nederlands മലയാളം Română Magyar ქართული Moore ไทย Македонски తెలుగు मराठी ਪੰਜਾਬੀ دری አማርኛ Malagasy Українська ភាសាខ្មែរالشرح
ಪ್ರಾರ್ಥನೆಯನ್ನು ಯಾವುದಕ್ಕಾದರೂ ತಳುಕು ಹಾಕುವುದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಷೇಧಿಸಿದ್ದಾರೆ. ಅದು ಅಲ್ಲಾಹನ ಇಚ್ಛೆಯಾಗಿದ್ದರೂ ಸಹ. ಏಕೆಂದರೆ ಅಲ್ಲಾಹು ತಾನು ಇಚ್ಛಿಸಿದರೆ ಮಾತ್ರ ಕ್ಷಮಿಸುತ್ತಾನೆ ಎಂಬುದು ತಿಳಿದಿರುವ ಮತ್ತು ಖಚಿತವಾದ ವಿಷಯ. ಆದ್ದರಿಂದ (ಅಲ್ಲಾಹನ) ಇಚ್ಛೆಯನ್ನು ಷರತ್ತಾಗಿ ಮಾಡಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ. ಏಕೆಂದರೆ ಇಚ್ಛೆಯನ್ನು ಷರತ್ತಾಗಿ ಮಾಡಿಕೊಳ್ಳುವುದು ತನ್ನ ಇಚ್ಛೆಯಂತೆ ವರ್ತಿಸಲು ಸಾಧ್ಯವಿಲ್ಲದ ಮತ್ತು ಒತ್ತಡದಿಂದ ಅಥವಾ ಬಲವಂತದಿಂದ ನೀಡುವವನಿಗೆ ಮಾತ್ರ. ಆದರೆ ಅಲ್ಲಾಹು ಇಂತಹ ವಿಷಯಗಳಿಂದ ಪರಿಶುದ್ಧನಾಗಿದ್ದಾನೆ. "ಅವನ ಮೇಲೆ ಯಾರೂ ಒತ್ತಡ ಹಾಕುವವರಿಲ್ಲ" ಎಂದು ಹೇಳುವ ಮೂಲಕ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹದೀಸ್‌ನ ಕೊನೆಯಲ್ಲಿ ಇದನ್ನು ಸ್ಪಷ್ಟಪಡಿಸಿದ್ದಾರೆ. ಹಾಗೆಯೇ, ಅಲ್ಲಾಹನಿಗೆ ನೀಡಲು ಸಾಧ್ಯವಾಗದಷ್ಟು ದೊಡ್ಡ ಯಾವುದೇ ವಸ್ತುವಿಲ್ಲ. ಅವನು ಯಾವುದೇ ವಿಷಯದಲ್ಲೂ ಅಸಮರ್ಥನಲ್ಲ ಅಥವಾ ಅವನಿಗೆ ಯಾವುದೇ ವಿಷಯವೂ ದೊಡ್ಡದಲ್ಲ. ಹಾಗಿರುತ್ತಿದ್ದರೆ "ನೀನು ಇಚ್ಛಿಸಿದರೆ" ಎಂದು ಹೇಳುವುದರಲ್ಲಿ ಅರ್ಥವಿರುತ್ತಿತ್ತು. ಅವನನ್ನು ಇಚ್ಛೆಗೆ ತಳುಕು ಹಾಕುವುದು ಅವನ ಕ್ಷಮೆಯ ಅಗತ್ಯವಿಲ್ಲವೆಂದು ಹೇಳುವ ಒಂದು ರೀತಿಯ ನಿರ್ಲಕ್ಷ್ಯವಾಗಿದೆ. ಆದ್ದರಿಂದ, "ನೀನು ಇಚ್ಛಿಸಿದರೆ ನನಗೆ ಇದನ್ನು ಕೊಡು" ಎಂಬ ವಾಕ್ಯವನ್ನು ತನಗೆ ಅಗತ್ಯವಿಲ್ಲದ, ಅಥವಾ ಅಸಮರ್ಥನಾದವನೊಂದಿಗೆ ಬೇಡುವಾಗ ಮಾತ್ರ ಬಳಸಲಾಗುತ್ತದೆ. ಸಾಮರ್ಥ್ಯವಿರುವವನೊಂದಿಗೆ ಮತ್ತು ತನಗೆ ಅಗತ್ಯ ಹಾಗೂ ಅವಶ್ಯಕತೆಯಿರುವವನೊಂದಿಗೆ ದೃಢನಿರ್ಧಾರದಿಂದ ಬೇಡಲಾಗುತ್ತದೆ. ಅದಲ್ಲದೆ, ಬೇಡುವವನು ತಾನು ಬೇಡುವ ವಸ್ತು ತನಗೆ ಬಹಳ ಅಗತ್ಯವಿರುವ ರೀತಿಯಲ್ಲಿ ಬೇಡುತ್ತಾನೆ ಮತ್ತು ಅಲ್ಲಾಹನಿಗೆ ಸಂಪೂರ್ಣ ಮೊರೆ ಹೋಗುತ್ತಾನೆ. ಏಕೆಂದರೆ ಅವನು ಪರಿಪೂರ್ಣ ನಿರಪೇಕ್ಷಕನು ಮತ್ತು ಎಲ್ಲವನ್ನೂ ಮಾಡುವ ಸಾಮರ್ಥ್ಯವುಳ್ಳವನಾಗಿದ್ದಾನೆ.فوائد الحديث
ಪ್ರಾರ್ಥನೆಯನ್ನು ಇಚ್ಛೆಗೆ ತಳುಕು ಹಾಕುವುದನ್ನು ನಿಷೇಧಿಸಲಾಗಿದೆ.
ಅಲ್ಲಾಹನಿಗೆ ಹೊಂದಿಕೆಯಾದ ವಿಷಯಗಳಿಂದ ಅವನನ್ನು ಪರಿಶುದ್ಧಗೊಳಿಸಲಾಗಿದೆ ಮತ್ತು ಅವನ ವಿಶಾಲ ಅನುಗ್ರಹ, ಸಂಪೂರ್ಣ ನಿರಪೇಕ್ಷತೆ, ಉದಾರತೆ ಮತ್ತು ಕೊಡುಗೈತನವನ್ನು ತಿಳಿಸಲಾಗಿದೆ.
ಅಲ್ಲಾಹನಿಗೆ ಸಂಪೂರ್ಣತೆಯನ್ನು ದೃಢೀಕರಿಸಲಾಗಿದೆ.
ಅಲ್ಲಾಹನ ಬಳಿಯಿರುವುದಕ್ಕಾಗಿ ಆಸೆಪಡುವುದನ್ನು ಮತ್ತು ಅವನ ಬಗ್ಗೆ ಉತ್ತಮ ಭಾವನೆ ಇಟ್ಟುಕೊಳ್ಳುವುದನ್ನು ವೈಭವೀಕರಿಸಲಾಗಿದೆ.
ಕೆಲವು ಜನರು ಅರಿವಿಲ್ಲದೆ ಪ್ರಾರ್ಥನೆಯನ್ನು ಇಚ್ಛೆಗೆ ತಳುಕು ಹಾಕುತ್ತಾರೆ. ಉದಾಹರಣೆಗೆ: "ಜಝಾಕಲ್ಲಾಹು ಖೈರನ್ ಇನ್ ಶಾ ಅಲ್ಲಾಹ್" (ಅಲ್ಲಾಹು ಇಚ್ಛಿಸಿದರೆ ಅವನು ನಿನಗೆ ಒಳಿತನ್ನು ಪ್ರತಿಫಲವಾಗಿ ನೀಡಲಿ.) "ಅಲ್ಲಾಹು ಯರ್ಹಮುಹು ಇನ್ ಶಾ ಅಲ್ಲಾಹ್" (ಅಲ್ಲಾಹು ಇಚ್ಛಿಸಿದರೆ ಅವನಿಗೆ ಕರುಣೆ ತೋರಲಿ) ಎಂದು ಹೇಳುತ್ತಾರೆ. ಈ ಹದೀಸ್‌ನ ಪ್ರಕಾರ ಹೀಗೆ ಹೇಳುವುದು ಅನುಮತಿಸಲಾಗುವುದಿಲ್ಲ.
التصنيفات
Manners of Supplication