ಯಾರ ಕೈಯಲ್ಲಿ ನನ್ನ ಆತ್ಮವಿದೆಯೋ ಅವನ ಮೇಲಾಣೆ! ಖಂಡಿತವಾಗಿಯೂ ಅದು ಕುರ್‌ಆನ್‌ನ ಮೂರನೇ ಒಂದು ಭಾಗಕ್ಕೆ ಸಮಾನವಾಗಿದೆ

ಯಾರ ಕೈಯಲ್ಲಿ ನನ್ನ ಆತ್ಮವಿದೆಯೋ ಅವನ ಮೇಲಾಣೆ! ಖಂಡಿತವಾಗಿಯೂ ಅದು ಕುರ್‌ಆನ್‌ನ ಮೂರನೇ ಒಂದು ಭಾಗಕ್ಕೆ ಸಮಾನವಾಗಿದೆ

ಅಬೂ ಸಈದ್ ಅಲ್-ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಒಬ್ಬ ವ್ಯಕ್ತಿ "ಖುಲ್ ಹುವಲ್ಲಾಹು ಅಹದ್" (ಸೂರ ಅಲ್-ಇಖ್ಲಾಸ್) ಅನ್ನು ಪಠಿಸುತ್ತಿರುವುದನ್ನು ಮತ್ತು ಅದನ್ನೇ ಪುನರಾವರ್ತಿಸುತ್ತಿರುವುದನ್ನು ಇನ್ನೊಬ್ಬ ವ್ಯಕ್ತಿ ಕೇಳಿದರು. ಬೆಳಗಾದಾಗ, ಅವರು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು, ಅದನ್ನು ಅವರಿಗೆ ತಿಳಿಸಿದರು. ಆ ವ್ಯಕ್ತಿ ಅದನ್ನು (ಆ ಸೂರವನ್ನು ಮಾತ್ರ ಓದುವುದನ್ನು) ಕಡಿಮೆ ಎಂದು ಭಾವಿಸಿದಂತಿತ್ತು. ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರ ಕೈಯಲ್ಲಿ ನನ್ನ ಆತ್ಮವಿದೆಯೋ ಅವನ ಮೇಲಾಣೆ! ಖಂಡಿತವಾಗಿಯೂ ಅದು ಕುರ್‌ಆನ್‌ನ ಮೂರನೇ ಒಂದು ಭಾಗಕ್ಕೆ ಸಮಾನವಾಗಿದೆ".

[صحيح] [رواه البخاري]

الشرح

ಅಬೂ ಸಈದ್ ಅಲ್-ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅವರು ಹೇಳುವುದೇನೆಂದರೆ, ಒಬ್ಬ ವ್ಯಕ್ತಿ ಸೂರ “ಖುಲ್ ಹುವಲ್ಲಾಹು ಅಹದ್” (ಸೂರ ಇಖ್ಲಾಸ್) ಅನ್ನು ಪಠಿಸುತ್ತಿರುವುದನ್ನು, ಮತ್ತು ಇಡೀ ರಾತ್ರಿ ಅದಕ್ಕಿಂತ ಹೆಚ್ಚಿಗೆ ಬೇರೆ ಏನನ್ನೂ ಓದದೆ ಅದನ್ನೇ ಪುನರಾವರ್ತಿಸುತ್ತಿರುವುದನ್ನು ಇನ್ನೊಬ್ಬ ವ್ಯಕ್ತಿ ಕೇಳಿದರು. ಬೆಳಗಾದಾಗ ಅವರು (ಇನ್ನೊಬ್ಬ ವ್ಯಕ್ತಿ) ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಅದನ್ನು ಅವರಿಗೆ ತಿಳಿಸಿದರು. ಅವರಿಗೆ ಅದು ಕಡಿಮೆಯೆಂದು ತೋರುತ್ತಿತ್ತು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) (ಆ ವ್ಯಕ್ತಿ ಓದಿದ್ದನ್ನು) ದೃಢೀಕರಿಸುವ ಅರ್ಥದಲ್ಲಿ ಪ್ರಮಾಣ ಮಾಡುತ್ತಾ ಹೇಳಿದರು: “ಯಾರ ಕೈಯಲ್ಲಿ ನನ್ನ ಆತ್ಮವಿದೆಯೋ ಅವನ ಮೇಲಾಣೆ! ಖಂಡಿತವಾಗಿಯೂ ಅದು ಕುರ್‌ಆನ್‌ನ ಮೂರನೇ ಒಂದು ಭಾಗಕ್ಕೆ ಸಮಾನವಾಗಿದೆ.”

فوائد الحديث

ಸೂರ ಅಲ್-ಇಖ್ಲಾಸ್‌ನ ಶ್ರೇಷ್ಠತೆಯನ್ನು, ಮತ್ತು ಅದು ಕುರ್‌ಆನ್‌ನ ಮೂರನೇ ಒಂದು ಭಾಗಕ್ಕೆ ಸಮಾನವಾಗಿದೆ ಎಂಬುದನ್ನು ತಿಳಿಸಲಾಗಿದೆ.

ಕಿಯಾಮುಲ್ಲೈಲ್ (ರಾತ್ರಿ ನಮಾಝ್) ನಲ್ಲಿ ಸ್ವಲ್ಪ ಆಯತ್‌ಗಳನ್ನು (ವಚನಗಳನ್ನು) ಪಠಿಸುವುದು ಮತ್ತು ಅವುಗಳನ್ನೇ ಪುನರಾವರ್ತಿಸುವುದು ಅನುಮತಿಸಲ್ಪಟ್ಟಿದೆಯೆಂದು ಮತ್ತು ಅದನ್ನು ಕೀಳಾಗಿ ಕಾಣಬಾರದೆಂದು ತಿಳಿಸಲಾಗಿದೆ.

ಅಲ್-ಮಾಝಿರಿ ಹೇಳುತ್ತಾರೆ: “ಹೀಗೆ ಹೇಳಲಾಗುತ್ತದೆ: ಇದರರ್ಥವೇನೆಂದರೆ, ಕುರ್‌ಆನ್ ಮೂರು ವಿಧಗಳಲ್ಲಿದೆ; ವೃತ್ತಾಂತಗಳು, ನಿಯಮಗಳು ಮತ್ತು ಸರ್ವೋನ್ನತನಾದ ಅಲ್ಲಾಹನ ಗುಣಲಕ್ಷಣಗಳು. “ಖುಲ್ ಹುವಲ್ಲಾಹು ಅಹದ್” (ಸೂರ ಅಲ್-ಇಖ್ಲಾಸ್) ಸಂಪೂರ್ಣವಾಗಿ ಅಲ್ಲಾಹನ ಗುಣಲಕ್ಷಣಗಳಿಗೆ ಮೀಸಲಾಗಿದೆ. ಆದ್ದರಿಂದ, ಅದು ಮೂರನೇ ಒಂದು ಭಾಗ, ಮತ್ತು ಮೂರು ಭಾಗಗಳಲ್ಲಿ ಒಂದು ಭಾಗವಾಗಿದೆ. ಹೀಗೂ ಹೇಳಲಾಗಿದೆ: ಇದರರ್ಥವೇನೆಂದರೆ, ಅದನ್ನು ಪಠಿಸುವುದರ ಪ್ರತಿಫಲವು, ಕುರ್‌ಆನ್‌ನ ಮೂರನೇ ಒಂದು ಭಾಗವನ್ನು (ಹೆಚ್ಚಳವಿಲ್ಲದೆ) ಪಠಿಸಿದಾಗ ಸಿಗುವ ಪ್ರತಿಫಲದಷ್ಟೇ ಹೆಚ್ಚಾಗುತ್ತದೆ.”

التصنيفات

Virtues of Surahs and Verses