ನಿಮ್ಮಲ್ಲಿ ಮರಣಶಯ್ಯೆಯಲ್ಲಿರುವವರಿಗೆ 'ಲಾ ಇಲಾಹ ಇಲ್ಲಲ್ಲಾಹ್' (ಅಲ್ಲಾಹನ ಹೊರತು ಆರಾಧನೆಗೆ ಅರ್ಹರು ಯಾರೂ ಇಲ್ಲ) ಎಂದು ಹೇಳಿಕೊಡಿರಿ

ನಿಮ್ಮಲ್ಲಿ ಮರಣಶಯ್ಯೆಯಲ್ಲಿರುವವರಿಗೆ 'ಲಾ ಇಲಾಹ ಇಲ್ಲಲ್ಲಾಹ್' (ಅಲ್ಲಾಹನ ಹೊರತು ಆರಾಧನೆಗೆ ಅರ್ಹರು ಯಾರೂ ಇಲ್ಲ) ಎಂದು ಹೇಳಿಕೊಡಿರಿ

ಅಬೂ ಸಈದ್ ಅಲ್-ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮಲ್ಲಿ ಮರಣಶಯ್ಯೆಯಲ್ಲಿರುವವರಿಗೆ 'ಲಾ ಇಲಾಹ ಇಲ್ಲಲ್ಲಾಹ್' (ಅಲ್ಲಾಹನ ಹೊರತು ಆರಾಧನೆಗೆ ಅರ್ಹರು ಯಾರೂ ಇಲ್ಲ) ಎಂದು ಹೇಳಿಕೊಡಿರಿ."

[صحيح] [رواه مسلم]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರೇರೇಪಿಸುವುದೆನೆಂದರೆ, ಯಾರಿಗೆ ಮರಣದ ಸನ್ನಿವೇಶ (ಸಾವು) ಸಮೀಪಿಸಿದೆಯೋ, ಅವರ ಮುಂದೆ ನಾವು ತೌಹೀದ್‌ನ ವಾಕ್ಯವಾದ "ಲಾ ಇಲಾಹ ಇಲ್ಲಲ್ಲಾಹ್" ಅನ್ನು ಹೇಳಬೇಕು ಮತ್ತು ಪುನರಾವರ್ತಿಸಬೇಕು. ಅವರು ಅದನ್ನು ಹೇಳುವವರೆಗೆ (ಹೀಗೆ ಮಾಡಬೇಕು). ಅದು ಅವರ ಕೊನೆಯ ಮಾತಾಗಲಿ ಎಂಬ ಉದ್ದೇಶದಿಂದ.

فوائد الحديث

ಮರಣ ಸಮೀಪಿಸಿದವನಿಗೆ 'ತಲ್ಕೀನ್' ಮಾಡುವುದು (ಕಲಿಮಾವನ್ನು ಹೇಳಿಕೊಡುವುದು) ಅಪೇಕ್ಷಿತವಾಗಿದೆ.

ಸಾಯುತ್ತಿರುವ ವ್ಯಕ್ತಿಯ ಮುಂದೆ ಅತಿಯಾಗಿ ತಲ್ಕೀನ್ ಮಾಡುವುದು ಮತ್ತು ಅವರು ಅದನ್ನು ಹೇಳಿದ ನಂತರವೂ ಅಥವಾ ಅವರಿಗೆ ಅರ್ಥವಾದ ನಂತರವೂ ಅವರ ಮೇಲೆ ಒತ್ತಡ ಹೇರುವುದು 'ಮಕ್ರೂಹ್' (ಅನಪೇಕ್ಷಿತ) ಆಗಿದೆ. ಏಕೆಂದರೆ ಇದರಿಂದ ಅವರಿಗೆ ಕಿರಿಕಿರಿಯಾಗಿ, ಅವರು ಸೂಕ್ತವಲ್ಲದ ಮಾತನ್ನು ಆಡುವಂತಾಗಬಹುದು.

ನವವಿ ಹೇಳುತ್ತಾರೆ: ಅವರು ಒಮ್ಮೆ ಅದನ್ನು ಹೇಳಿದರೆ, ಅದರ ನಂತರ ಅವರು ಬೇರೆ ಮಾತನ್ನು ಆಡದ ಹೊರತು ಅವರ ಮುಂದೆ ಅದನ್ನು ಪುನರಾವರ್ತಿಸಬಾರದು. ಒಂದು ವೇಳೆ ಅವರು (ಕಲಿಮಾ ಹೇಳಿದ ನಂತರ) ಬೇರೆ ಮಾತನ್ನಾಡಿದರೆ, ಅವರ ಕೊನೆಯ ಮಾತು ಕಲಿಮಾ ಆಗುವಂತೆ ಮಾಡಲು ಅವರಿಗೆ ಮತ್ತೆ (ಸೂಕ್ಷ್ಮವಾಗಿ) ನೆನಪಿಸಬೇಕು.

ಮರಣಹೊಂದುತ್ತಿರುವ ವ್ಯಕ್ತಿಯ ಬಳಿ ಹಾಜರಿರಬೇಕೆಂದು ಈ ಹದೀಸ್ ಸೂಚಿಸುತ್ತದೆ. ಅವರಿಗೆ (ಅಲ್ಲಾಹನನ್ನು) ನೆನಪಿಸಲು, ಅವರಿಗೆ ಸಾಂತ್ವನ ನೀಡಲು, ಅವರ ಕಣ್ಣುಗಳನ್ನು ಮುಚ್ಚಲು ಮತ್ತು ಅವರ ಹಕ್ಕುಗಳನ್ನು ಪೂರೈಸಲು (ಅಲ್ಲಿ ಹಾಜರಿರುವುದು ಅಗತ್ಯ).

ಮರಣದ ನಂತರ ಮತ್ತು ದಫನ ಮಾಡಿದ ನಂತರ ಕಬರ್‌ನ (ಗೋರಿಯ) ಬಳಿ ತಲ್ಕೀನ್ ಮಾಡುವುದು ನಿಯಮಗೊಳಿಸಲಾಗಿಲ್ಲ. ಏಕೆಂದರೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹಾಗೆ ಮಾಡಿಲ್ಲ.

التصنيفات

ಮರಣ ಮತ್ತು ಅದಕ್ಕೆ ಸಂಭಂಧಪಟ್ಟ ನಿಯಮಗಳು