ನನಗೂ ಈ ಪ್ರಪಂಚಕ್ಕೂ ಏನು ಸಂಬಂಧ? ನಾನು ಈ ಪ್ರಪಂಚದಲ್ಲಿ ಒಬ್ಬ ಸವಾರನಂತೆ (ಜೀವಿಸಬೇಕಾದವನು). ಅವನು (ಸ್ವಲ್ಪ ಹೊತ್ತು) ಮರದ ನೆರಳಿನಲ್ಲಿ…

ನನಗೂ ಈ ಪ್ರಪಂಚಕ್ಕೂ ಏನು ಸಂಬಂಧ? ನಾನು ಈ ಪ್ರಪಂಚದಲ್ಲಿ ಒಬ್ಬ ಸವಾರನಂತೆ (ಜೀವಿಸಬೇಕಾದವನು). ಅವನು (ಸ್ವಲ್ಪ ಹೊತ್ತು) ಮರದ ನೆರಳಿನಲ್ಲಿ ವಿಶ್ರಾಂತಿ ಪಡೆದು, ನಂತರ ಅದನ್ನು ಬಿಟ್ಟು ಹೊರಟುಹೋಗುತ್ತಾನೆ

ಅಬ್ದುಲ್ಲಾ ಇಬ್ನ್ ಮಸ್ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದು ಚಾಪೆಯ ಮೇಲೆ ಮಲಗಿದ್ದರು. ಅವರು ಎದ್ದಾಗ, ಅದು (ಚಾಪೆ) ಅವರ ಪಾರ್ಶ್ವದ ಮೇಲೆ ಅಚ್ಚು ಮೂಡಿಸಿತ್ತು. ಆಗ ನಾವು ಹೇಳಿದೆವು: "ಓ ಅಲ್ಲಾಹನ ಸಂದೇಶವಾಹಕರೇ, ನಾವು ನಿಮಗಾಗಿ ಒಂದು ಮೃದುವಾದ ಹಾಸಿಗೆಯನ್ನು ಸಿದ್ಧಪಡಿಸಿದ್ದರೆ ಹೇಗೆ?". ಆಗ ಅವರು ಹೇಳಿದರು: "ನನಗೂ ಈ ಪ್ರಪಂಚಕ್ಕೂ ಏನು ಸಂಬಂಧ? ನಾನು ಈ ಪ್ರಪಂಚದಲ್ಲಿ ಒಬ್ಬ ಸವಾರನಂತೆ (ಜೀವಿಸಬೇಕಾದವನು). ಅವನು (ಸ್ವಲ್ಪ ಹೊತ್ತು) ಮರದ ನೆರಳಿನಲ್ಲಿ ವಿಶ್ರಾಂತಿ ಪಡೆದು, ನಂತರ ಅದನ್ನು ಬಿಟ್ಟು ಹೊರಟುಹೋಗುತ್ತಾನೆ".

[صحيح] [رواه الترمذي وابن ماجه]

الشرح

ಅಬ್ದುಲ್ಲಾ ಇಬ್ನ್ ಮಸ್ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ತಿಳಿಸುವುದೇನೆಂದರೆ, ಒಮ್ಮೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೆಲವು ಸಸ್ಯಗಳಿಂದ ನೇಯ್ದ ಒಂದು ಚಿಕ್ಕ ಚಾಪೆಯ ಮೇಲೆ ಮಲಗಿದ್ದರು. ಅವರು ಎದ್ದಾಗ, ಆ ಚಾಪೆಯು ಅವರ ಪಾರ್ಶ್ವದ ಚರ್ಮದ ಮೇಲೆ ಅಚ್ಚು ಮೂಡಿಸಿತ್ತು. ಆಗ ನಾವು ಹೇಳಿದೆವು: “ಓ ಅಲ್ಲಾಹನ ಸಂದೇಶವಾಹಕರೇ, ನಾವು ನಿಮಗಾಗಿ ಒಂದು ಮೃದುವಾದ ಹಾಸಿಗೆಯನ್ನು ಸಿದ್ಧಪಡಿಸಿದ್ದರೆ, ಅದು ಈ ಒರಟಾದ ಚಾಪೆಯ ಮೇಲೆ ಮಲಗುವುದಕ್ಕಿಂತ ಉತ್ತಮವಾಗಿರುತ್ತಿತ್ತು.” ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ನಾನು ಈ ಪ್ರಪಂಚದ ಕಡೆಗೆ ಆಸಕ್ತಿ ವಹಿಸುವಷ್ಟು ನನಗೆ ಅದರೊಂದಿಗೆ ಪ್ರೀತಿ ಮತ್ತು ಒಡನಾಟವಿಲ್ಲ. ಈ ಪ್ರಪಂಚದಲ್ಲಿ ಜೀವಿಸುವ ವಿಷಯದಲ್ಲಿ ನನ್ನ ಉದಾಹರಣೆಯು, ಒಬ್ಬ ಸವಾರನಂತಿದೆ; ಅವನು ಒಂದು ಮರದ ನೆರಳಿನಲ್ಲಿ ಆಶ್ರಯ ಪಡೆದು, ನಂತರ (ವಿಶ್ರಾಂತಿಯ ನಂತರ) ಹೊರಟುಹೋಗುತ್ತಾನೆ ಮತ್ತು ಅದನ್ನು ಬಿಟ್ಟುಬಿಡುತ್ತಾನೆ.

فوائد الحديث

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ಪ್ರಪಂಚದ ವಿಷಯದಲ್ಲಿ ಎಂತಹ ವೈರಾಗ್ಯ ಮತ್ತು ನಿರ್ಲಿಪ್ತತೆಯನ್ನು ಹೊಂದಿದ್ದರು ಎಂಬುದನ್ನು ವಿವರಿಸಲಾಗಿದೆ.

ಪ್ರಪಂಚದಿಂದ ಅನಿವಾರ್ಯವಾಗಿ ಪಡೆಯಬೇಕಾದುದನ್ನು ತ್ಯಜಿಸಬೇಕೆಂದು ಈ ಹದೀಸ್ ತಿಳಿಸುವುದಿಲ್ಲ. ಬದಲಿಗೆ, ಪರಲೋಕವನ್ನು ಮರೆತು ಇಹಲೋಕದಲ್ಲಿ ಮಗ್ನರಾಗಬಾರದು ಎಂದು ತಿಳಿಸುತ್ತದೆ. ಏಕೆಂದರೆ, ಆ ವ್ಯಕ್ತಿ (ಉದಾಹರಣೆಯಲ್ಲಿರುವ ಸವಾರ) ಮರದ ನೆರಳಿನಲ್ಲಿ ಮಲಗುತ್ತಾನೆ ಮತ್ತು ತನ್ನ ಗುರಿಯನ್ನು ತಲುಪಲು ಅದರಿಂದ ಪ್ರಯೋಜನ ಪಡೆಯುತ್ತಾನೆ. ಆದರೆ ಅವನು ಅದರಲ್ಲೇ ಅವಲಂಬಿತನಾಗುವುದಿಲ್ಲ.

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸ್ಥಿತಿಯಿಂದ ಪಾಠ ಕಲಿಯಬೇಕೆಂದು ತಿಳಿಸಲಾಗಿದೆ. ಏಕೆಂದರೆ ಅವರು ಉತ್ತಮ ಮಾದರಿಯಾಗಿದ್ದಾರೆ. ಅವರ ಹೆಜ್ಜೆಗಳನ್ನು ಅನುಸರಿಸುವವನು ಸನ್ಮಾರ್ಗ ಪಡೆಯುತ್ತಾನೆ, ಮತ್ತು ಇಹಲೋಕ ಹಾಗೂ ಪರಲೋಕದಲ್ಲಿ ಯಶಸ್ವಿಯಾಗುತ್ತಾನೆ.

ಸಹಾಬಿಗಳು (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಗ್ಗೆ ಹೊಂದಿದ್ದ ಕಾಳಜಿ ಮತ್ತು ಪ್ರೀತಿಯನ್ನು ತಿಳಿಸಲಾಗಿದೆ.

ದಅವತ್ (ಧರ್ಮಪ್ರಚಾರ) ಮಾಡುವಾಗ ಮತ್ತು ಬೋಧಿಸುವಾಗ ಉದಾಹರಣೆಗಳನ್ನು ನೀಡವುದು ಸಮ್ಮತವಾಗಿದೆ.

التصنيفات

Condemning Love of the World, Purification of Souls