إعدادات العرض
ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರ ಕುಟುಂಬದವರು ಒಂದು ದಿನದಲ್ಲಿ ಎರಡು ಹೊತ್ತಿನ ಊಟ ಮಾಡಿದ್ದರೆ,…
ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರ ಕುಟುಂಬದವರು ಒಂದು ದಿನದಲ್ಲಿ ಎರಡು ಹೊತ್ತಿನ ಊಟ ಮಾಡಿದ್ದರೆ, ಅದರಲ್ಲಿ ಒಂದು ಹೊತ್ತಿನ ಊಟ ಖಂಡಿತವಾಗಿಯೂ ಖರ್ಜೂರವಾಗಿರುತ್ತಿತ್ತು
ಉಮ್ಮುಲ್ ಮೂಮಿನೀನ್ ಆಯಿಶಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: "ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರ ಕುಟುಂಬದವರು ಒಂದು ದಿನದಲ್ಲಿ ಎರಡು ಹೊತ್ತಿನ ಊಟ ಮಾಡಿದ್ದರೆ, ಅದರಲ್ಲಿ ಒಂದು ಹೊತ್ತಿನ ಊಟ ಖಂಡಿತವಾಗಿಯೂ ಖರ್ಜೂರವಾಗಿರುತ್ತಿತ್ತು."
الترجمة
العربية Português دری Македонски Magyar Tiếng Việt ქართული বাংলা Kurdî ไทย অসমীয়া Nederlands ਪੰਜਾਬੀ Indonesia Kiswahili Hausa ភាសាខ្មែរ English ગુજરાતી Tagalog Русский മലയാളം मराठी Српски සිංහලالشرح
ಉಮ್ಮುಲ್ ಮೂಮಿನೀನ್ ಆಯಿಶಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರು ತಿಳಿಸುವುದೇನೆಂದರೆ, ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮನೆಯವರು ಒಂದೇ ದಿನದಲ್ಲಿ ಎರಡು ಹೊತ್ತಿನ ಊಟ ಮಾಡಿದ್ದರೆ, ಆ ಎರಡು ಊಟಗಳಲ್ಲಿ ಒಂದು ಖರ್ಜೂರವೇ ಆಗಿರುತ್ತಿತ್ತು (ಅಂದರೆ ಎರಡು ಹೊತ್ತೂ ಭರ್ಜರಿ ಊಟವಿರುತ್ತಿರಲಿಲ್ಲ).فوائد الحديث
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮತ್ತು ಅವರ ಮನೆಯವರ ಸರಳತೆ (ವಿನಯತೆ)ಯನ್ನು ತಿಳಿಸಲಾಗಿದೆ. ಕೆಲವೊಮ್ಮೆ ಅವರಿಗೆ ದಿನದಲ್ಲಿ ಒಂದೇ ಹೊತ್ತಿನ ಊಟ ಸಿಗುತ್ತಿತ್ತು.
ಅವರಿಗೆ ಬೇರೆ ಆಹಾರಕ್ಕಿಂತ ಖರ್ಜೂರವೇ ಹೆಚ್ಚು ಸುಲಭವಾಗಿ ಸಿಗುತ್ತಿತ್ತು.
ಪ್ರಪಂಚದ ಬಗ್ಗೆ ಇರುವ ನಿರಾಸಕ್ತಿ ಮತ್ತು ಅಲ್ಪ ಜೀವನೋಪಾಯದಲ್ಲೇ ತೃಪ್ತಿಪಡುವುದರ ಶ್ರೇಷ್ಠತೆಯನ್ನು ತಿಳಿಸಲಾಗಿದೆ. ಇದು ಪ್ರವಾದಿಗಳ ಗುಣ ಮತ್ತು ಪ್ರವಾದಿಗಳ ನಾಯಕರ ಜೀವನವಿಧಾನವಾಗಿದೆ.
ದಿನದಲ್ಲಿ ಎರಡು ಬಾರಿ ಊಟ ಮಾಡುವುದು ಸಮ್ಮತಾರ್ಹ ಮತ್ತು ಅನುಮತಿಸಲ್ಪಟ್ಟದ್ದಾಗಿದೆ. ಇದು ಅರಬ್ಬರ ಪರಿಚಿತ ಅಭ್ಯಾಸವಾಗಿದೆ. ಅವರು ದಿನದಲ್ಲಿ ಎರಡು ಬಾರಿ, ಅಂದರೆ ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟ ಸೇವಿಸುತ್ತಿದ್ದರು.
