'ಅಂತ್ಯಕಾಲದಲ್ಲಿ ಒಂದು ಜನಾಂಗವು ಬರುತ್ತದೆ. ಅವರು ವಯಸ್ಸಿನಲ್ಲಿ ಚಿಕ್ಕವರು ಮತ್ತು ಬುದ್ಧಿಶಕ್ತಿಯಲ್ಲಿ ಅವಿವೇಕಿಗಳು. ಅವರು…

'ಅಂತ್ಯಕಾಲದಲ್ಲಿ ಒಂದು ಜನಾಂಗವು ಬರುತ್ತದೆ. ಅವರು ವಯಸ್ಸಿನಲ್ಲಿ ಚಿಕ್ಕವರು ಮತ್ತು ಬುದ್ಧಿಶಕ್ತಿಯಲ್ಲಿ ಅವಿವೇಕಿಗಳು. ಅವರು ಸೃಷ್ಟಿಗಳ ಮಾತುಗಳಲ್ಲೇ ಅತ್ಯುತ್ತಮವಾದ ಮಾತನ್ನು ಹೇಳುತ್ತಾರೆ. ಬಾಣವು ಗುರಿಯಿಂದ ಹೊರಬೀಳುವಷ್ಟು ವೇಗವಾಗಿ ಅವರು ಇಸ್ಲಾಮಿನಿಂದ ಹೊರಬೀಳುತ್ತಾರೆ

ಅಲೀ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: (ಅವರು ಹೇಳಿದರು:) "ನಾನು ನಿಮಗೆ ಅಲ್ಲಾಹನ ಸಂದೇಶವಾಹಕರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) (ಯಾವುದೇ ಒಂದು ಹದೀಸ್) ತಿಳಿಸುವಾಗ, ಅವರ ಮೇಲೆ ಸುಳ್ಳು ಹೇಳುವುದಕ್ಕಿಂತ ಆಕಾಶದಿಂದ ಕೆಳಗೆ ಬೀಳುವುದು ನನಗೆ ಹೆಚ್ಚು ಪ್ರಿಯವಾಗಿದೆ. ಆದರೆ, ನಾನು ನನ್ನ ಮತ್ತು ನಿಮ್ಮ ನಡುವಿನ ವಿಷಯದಲ್ಲಿ ಮಾತನಾಡುವಾಗ (ಹಾಗೆ ಚಿಂತಿಸುವುದಿಲ್ಲ). ಏಕೆಂದರೆ, ಯುದ್ಧವು ಒಂದು ತಂತ್ರವಾಗಿದೆ. ನಾನು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ಕೇಳಿದ್ದೇನೆ: 'ಅಂತ್ಯಕಾಲದಲ್ಲಿ ಒಂದು ಜನಾಂಗವು ಬರುತ್ತದೆ. ಅವರು ವಯಸ್ಸಿನಲ್ಲಿ ಚಿಕ್ಕವರು ಮತ್ತು ಬುದ್ಧಿಶಕ್ತಿಯಲ್ಲಿ ಅವಿವೇಕಿಗಳು. ಅವರು ಸೃಷ್ಟಿಗಳ ಮಾತುಗಳಲ್ಲೇ ಅತ್ಯುತ್ತಮವಾದ ಮಾತನ್ನು ಹೇಳುತ್ತಾರೆ. ಬಾಣವು ಗುರಿಯಿಂದ ಹೊರಬೀಳುವಷ್ಟು ವೇಗವಾಗಿ ಅವರು ಇಸ್ಲಾಮಿನಿಂದ ಹೊರಬೀಳುತ್ತಾರೆ. ಅವರ ಈಮಾನ್ (ವಿಶ್ವಾಸ) ಅವರ ಗಂಟಲುಗಳನ್ನು ದಾಟಿ ಹೋಗುವುದಿಲ್ಲ (ಹೃದಯವನ್ನು ತಲುಪುವುದಿಲ್ಲ). ಆದ್ದರಿಂದ, ನೀವು ಅವರನ್ನು ಎಲ್ಲೇ ಕಂಡರೂ ಅವರನ್ನು ಕೊಲ್ಲಿರಿ. ಏಕೆಂದರೆ, ಅವರನ್ನು ಕೊಂದವನಿಗೆ ಅವರನ್ನು ಕೊಲ್ಲುವುದರಲ್ಲಿ ಪುನರುತ್ಥಾನ ದಿನದಂದು ಪ್ರತಿಫಲವಿದೆ' ".

[صحيح] [متفق عليه]

الشرح

ಸತ್ಯವಿಶ್ವಾಸಿಗಳ ಮುಖಂಡರಾದ ಅಲೀ ಇಬ್ನ್ ಅಬೀ ತಾಲಿಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ, ನಾನು ಪ್ರವಾದಿಯವರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹದೀಸ್ ವರದಿ ಮಾಡುವಾಗ, ನಾನು ಅಸ್ಪಷ್ಟವಾಗಿ ಮಾತನಾಡುವುದಿಲ್ಲ, ಪರೋಕ್ಷವಾಗಿ ಉಲ್ಲೇಖಿಸುವುದಿಲ್ಲ, ಅಥವಾ ಏನನ್ನೂ ಮರೆಮಾಚುವುದಿಲ್ಲ; ಬದಲಿಗೆ ನಾನು ಸ್ಪಷ್ಟವಾಗಿರುತ್ತೇನೆ. ಏಕೆಂದರೆ, ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಗ್ಗೆ ಸುಳ್ಳು ಹೇಳುವುದಕ್ಕಿಂತ ಆಕಾಶದಿಂದ ಕೆಳಗೆ ಬೀಳುವುದು ನನಗೆ ಹೆಚ್ಚು ಸುಲಭ ಮತ್ತು ಹಗುರವಾಗಿದೆ. ಆದರೆ ನಾನು ಜನರೊಂದಿಗೆ (ಯುದ್ಧದ ತಂತ್ರದ ಬಗ್ಗೆ) ಮಾತನಾಡುವಾಗ, ಯುದ್ಧವು ಒಂದು ತಂತ್ರವಾಗಿರುವುದರಿಂದ, ನಾನು ಅಸ್ಪಷ್ಟವಾಗಿ ಮಾತನಾಡಬಹುದು ಅಥವಾ ಪರೋಕ್ಷವಾಗಿ ಉಲ್ಲೇಖಿಸಬಹುದು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ಅಂತ್ಯಕಾಲದಲ್ಲಿ ಚಿಕ್ಕ ವಯಸ್ಸಿನ, ಬಲಹೀನ ಬುದ್ಧಿಯ ಯುವಕರು ಬರುವರು. ಅವರು ಕುರ್‌ಆನ್‌ನಿಂದ ಉಲ್ಲೇಖಿಸಿ ಮಾತನಾಡುತ್ತಾರೆ ಮತ್ತು ಅದನ್ನು ಹೆಚ್ಚಾಗಿ ಪಠಿಸುತ್ತಾರೆ. ಬಾಣವು ಗುರಿಯಿಂದ ವೇಗವಾಗಿ ಹೊರಬೀಳುವ ಹಾಗೆ ಅವರು ಇಸ್ಲಾಮಿನಿಂದ ಹೊರಹೋಗುತ್ತಾರೆ ಮತ್ತು ಅದರ ಮಿತಿಗಳನ್ನು ಮೀರುತ್ತಾರೆ. ಅವರ ಈಮಾನ್ ಅವರ ಗಂಟಲುಗಳನ್ನು ದಾಟಿ ಹೋಗುವುದಿಲ್ಲ. ಆದ್ದರಿಂದ ನೀವು ಅವರನ್ನು ಎಲ್ಲೇ ಕಂಡರೂ ಅವರನ್ನು ಕೊಲ್ಲಿರಿ; ಏಕೆಂದರೆ ಅವರನ್ನು ಕೊಂದವನಿಗೆ ಅವರನ್ನು ಕೊಲ್ಲುವುದರಲ್ಲಿ ಪುನರುತ್ಥಾನ ದಿನದಂದು ಪ್ರತಿಫಲವಿದೆ.”

فوائد الحديث

ಖವಾರಿಜ್‌ಗಳ (ಸಹಾಬಿಗಳ ಕಾಲದಲ್ಲಿದ್ದ ದಂಗೆಕೋರ ಪಂಗಡದ) ಕೆಲವು ಗುಣಲಕ್ಷಣಗಳನ್ನು ವಿವರಿಸಲಾಗಿದೆ.

ಈ ಹದೀಸ್‌ನಲ್ಲಿ ಪ್ರವಾದಿತ್ವದ ಸಂಕೇತಗಳಲ್ಲಿ ಒಂದು ಸಂಕೇತವಿದೆ (ಭವಿಷ್ಯವಾಣಿ). ಅದು ಹೇಗೆಂದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಮುದಾಯದಲ್ಲಿ ತಮ್ಮ ನಂತರ ಏನಾಗಲಿದೆ ಎಂದು ತಿಳಿಸಿದ್ದರು, ಮತ್ತು ಅವರು ತಿಳಿಸಿದಂತೆಯೇ ಅದು ಸಂಭವಿಸಿತು.

ಯುದ್ಧದಲ್ಲಿ ದ್ವಂದ್ವಾರ್ಥದ ಮಾತು ಮತ್ತು ಪರೋಕ್ಷ ಉಲ್ಲೇಖಗಳನ್ನು ಬಳಸಲು ಅನುಮತಿಯಿದೆ. ಯುದ್ಧದಲ್ಲಿನ ವಂಚನೆಯು ದ್ವಂದ್ವಾರ್ಥದ ಮಾತು, ಹೊಂಚು ಹಾಕುವುದು ಮತ್ತು ಅದರಂತಹ ತಂತ್ರಗಳ ಮೂಲಕ ಇರುತ್ತದೆ. ಆದರೆ ಒಪ್ಪಂದ ಮತ್ತು ಸುರಕ್ಷತೆಯ ಭರವಸೆಯನ್ನು ಮುರಿಯುವ ಮೂಲಕ ವಂಚಿಸಬಾರದು.

"ಅವರು ಸೃಷ್ಟಿಗಳ ಮಾತುಗಳಲ್ಲೇ ಅತ್ಯುತ್ತಮವಾದ ಮಾತನ್ನು ಹೇಳುತ್ತಾರೆ" ಎಂಬ ವಚನವನ್ನು ವಿವರಿಸುತ್ತಾ ಇಮಾಂ ನವವಿ ಹೇಳುತ್ತಾರೆ: ಇದರರ್ಥವೇನೆಂದರೆ, ಅವರು ಬಾಹ್ಯವಾಗಿ, ಉದಾಹರಣೆಗೆ "ಅಲ್ಲಾಹನ ಹೊರತು ಬೇರೆ ತೀರ್ಪಿಲ್ಲ" ಎಂದು ಹೇಳುವುದು, ಮತ್ತು ಅಲ್ಲಾಹನ ಗ್ರಂಥದ ಕಡೆಗೆ ಕರೆಯುವ ಅವರ ಇತರ ಮಾತುಗಳಾಗಿವೆ.

"ಅವರ ಈಮಾನ್ ಅವರ ಗಂಟಲುಗಳನ್ನು ದಾಟಿ ಹೋಗುವುದಿಲ್ಲ" ಎಂಬ ವಚನವನ್ನು ವಿವರಿಸುತ್ತಾ ಇಬ್ನ್ ಹಜರ್ ಹೇಳುತ್ತಾರೆ: ಇದರರ್ಥವೇನೆಂದರೆ, ಈಮಾನ್ ಅವರ ಹೃದಯಗಳಲ್ಲಿ ದೃಢವಾಗಿ ನೆಲೆಗೊಳ್ಳುವುದಿಲ್ಲ; ಏಕೆಂದರೆ ಗಂಟಲನ್ನು ದಾಟದೆ ಅಲ್ಲೇ ನಿಂತು ಬಿಡುವ ವಿಷಯವು ಹೃದಯವನ್ನು ತಲುಪುವುದಿಲ್ಲ.

ಖಾದಿ (ಇಯಾದ್) ಹೇಳುತ್ತಾರೆ: ಖವಾರಿಜ್‌ಗಳು ಮತ್ತು ಅವರಂತಹ ನೂತನವಾದ ಹಾಗೂ ದಂಗೆ ಮಾಡುವ ಜನರು, ಮುಸ್ಲಿಮ್ ಆಡಳಿತಗಾರರ ವಿರುದ್ಧ ದಂಗೆ ಎದ್ದು, ಸಮುದಾಯದ ಅಭಿಪ್ರಾಯವನ್ನು ವಿರೋಧಿಸಿ, ಒಗ್ಗಟ್ಟನ್ನು ಮುರಿದರೆ; ಅವರಿಗೆ ಎಚ್ಚರಿಕೆ ನೀಡಿದ ನಂತರ ಮತ್ತು ಅವರಿಗೆ ಸತ್ಯವನ್ನು ವಿವರಿಸಿ ಕೊಟ್ಟ ನಂತರ, (ಅವರು ಅದನ್ನು ಒಪ್ಪಿಕೊಳ್ಳದಿದ್ದರೆ) ಅವರೊಂದಿಗೆ ಹೋರಾಡುವುದು ಕಡ್ಡಾಯವಾಗಿದೆ ಎಂಬ ಬಗ್ಗೆ ವಿದ್ವಾಂಸರು ಸರ್ವಾನುಮತ (ಇಜ್ಮಾ) ವ್ಯಕ್ತಪಡಿಸಿದ್ದಾರೆ.

التصنيفات

Miracles of the Pious Allies of Allah, Ahl-us-Sunnah's (Sunni) Stance on Religious Innovators, Rulings of Terrorism, Assassinations, and Explosions