ನನ್ನ ಸಮುದಾಯದ ಒಂದು ಗುಂಪು ಸದಾ (ಸತ್ಯದ ಮೇಲೆ) ವಿಜಯಿಗಳಾಗಿರುವರು. ಅಲ್ಲಾಹುವಿನ ಆದೇಶವು ಅವರ ಬಳಿ ಬರುವವರೆಗೆ. ಅವರು (ಆಗಲೂ)…

ನನ್ನ ಸಮುದಾಯದ ಒಂದು ಗುಂಪು ಸದಾ (ಸತ್ಯದ ಮೇಲೆ) ವಿಜಯಿಗಳಾಗಿರುವರು. ಅಲ್ಲಾಹುವಿನ ಆದೇಶವು ಅವರ ಬಳಿ ಬರುವವರೆಗೆ. ಅವರು (ಆಗಲೂ) ವಿಜಯಿಗಳಾಗಿಯೇ ಇರುವರು

ಮುಗೀರ ಬಿನ್ ಶುಅಬ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನನ್ನ ಸಮುದಾಯದ ಒಂದು ಗುಂಪು ಸದಾ (ಸತ್ಯದ ಮೇಲೆ) ವಿಜಯಿಗಳಾಗಿರುವರು. ಅಲ್ಲಾಹುವಿನ ಆದೇಶವು ಅವರ ಬಳಿ ಬರುವವರೆಗೆ. ಅವರು (ಆಗಲೂ) ವಿಜಯಿಗಳಾಗಿಯೇ ಇರುವರು".

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ನನ್ನ ಸಮುದಾಯದ ಒಂದು ಗುಂಪು ಸದಾ ಜನರ ಮೇಲೆ ಪ್ರಕಟವಾಗಿರುವರು, ತಮ್ಮ ವಿರೋಧಿಗಳ ಮೇಲೆ ವಿಜಯಶಾಲಿಗಳಾಗಿರುವರು. ಇದು ಅಂತ್ಯ ಸಮಯದಲ್ಲಿ ಪುನರುತ್ಥಾನವು ಸಂಭವಿಸುವುದಕ್ಕೆ ಮೊದಲು ಅಲ್ಲಾಹುವಿನ ಆದೇಶವು ಬಂದು ಅವರ ಆತ್ಮಗಳನ್ನು ವಶಪಡಿಸಿಕೊಳ್ಳುವವರೆಗೆ ಮುಂದುವರಿಯುತ್ತದೆ.

فوائد الحديث

ಇದು ಪ್ರವಾದಿಯವರ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಒಂದು ಸ್ಪಷ್ಟವಾದ ಪವಾಡವಾಗಿದೆ. ಏಕೆಂದರೆ, ಈ ವರ್ಣನೆಯು ಅಲ್ಲಾಹುವಿನ ಅನುಗ್ರಹದಿಂದ ಪ್ರವಾದಿಯವರ (ಅವರ ಮೇಲೆ ಅಲ್ಲಾಹುವಿನ ಕೃಪೆ ಮತ್ತು ಶಾಂತಿಯಿರಲಿ) ಕಾಲದಿಂದ ಇಂದಿನವರೆಗೂ ಅಸ್ತಿತ್ವದಲ್ಲಿದೆ. ಹದೀಸ್‌ನಲ್ಲಿ ಉಲ್ಲೇಖಿಸಲಾದ ಅಲ್ಲಾಹುವಿನ ಆದೇಶವು ಬರುವವರೆಗೂ ಇದು ಮುಂದುವರಿಯುತ್ತದೆ.

ಸತ್ಯದ ಮೇಲೆ ಸ್ಥಿರವಾಗಿರುವುದರ ಮತ್ತು ಅದರಂತೆ ಕಾರ್ಯನಿರ್ವಹಿಸುವುದರ ಶ್ರೇಷ್ಠತೆಯನ್ನು ವಿವರಿಸಲಾಗಿದೆ ಹಾಗೂ ಅದಕ್ಕಾಗಿ ಪ್ರೋತ್ಸಾಹಿಸಲಾಗಿದೆ.

ಧರ್ಮದ ಪ್ರಾಬಲ್ಯವು (ಝುಹೂರ್) ಎರಡು ವಿಧದಲ್ಲಿದೆ: ಒಂದು ಪುರಾವೆ, ವಿವರಣೆ ಮತ್ತು ಸ್ಪಷ್ಟತೆಯ ಮೂಲಕ ಪ್ರಾಬಲ್ಯದಲ್ಲಿರುವುದು. ಇನ್ನೊಂದು ಬಲ ಮತ್ತು ಶಸ್ತ್ರಾಸ್ತ್ರಗಳ ಮೂಲಕ ಪ್ರಾಬಲ್ಯದಲ್ಲಿರುವುದು. ಪುರಾವೆ ಮತ್ತು ವಿವರಣೆಯ ಮೂಲಕ ಇರುವ ಪ್ರಾಬಲ್ಯವು ಶಾಶ್ವತವಾಗಿ ಉಳಿಯುತ್ತದೆ. ಏಕೆಂದರೆ ಇಸ್ಲಾಮಿನ ಪುರಾವೆಯು ಕುರ್‌ಆನ್ ಆಗಿದ್ದು, ಅದು ಸ್ಪಷ್ಟವಾಗಿದೆ ಮತ್ತು ಅದರ ಹೊರತಾದ ಎಲ್ಲದರ ಮೇಲೆ ಪ್ರಾಬಲ್ಯ ಹೊಂದಿದೆ. ಆದರೆ ಎರಡನೇ ವಿಧದ ಪ್ರಾಬಲ್ಯವು, ಅಂದರೆ ಬಲ ಮತ್ತು ಶಸ್ತ್ರಾಸ್ತ್ರಗಳ ಪ್ರಾಬಲ್ಯವು, ಇದು (ಸತ್ಯವಿಶ್ವಾಸಿಗಳ) ಈಮಾನ್ (ವಿಶ್ವಾಸ) ಮತ್ತು ಭೂಮಿಯ ಮೇಲೆ ಅವರಿಗಿರುವ ಸಬಲೀಕರಣವನ್ನು ಅವಲಂಬಿಸಿರುತ್ತದೆ.

التصنيفات

Characteristics of the People of the Sunnah and the Community