ವೃದ್ಧನ ಹೃದಯವು ಎರಡು ವಿಷಯಗಳಲ್ಲಿ ಯುವಕನಂತೆ ಇರುತ್ತದೆ: ಭೂಲೋಕದ ಪ್ರೀತಿಯಲ್ಲಿ ಮತ್ತು ಸುದೀರ್ಘ ಆಸೆಯಲ್ಲಿ (ಹೆಚ್ಚು ಕಾಲ…

ವೃದ್ಧನ ಹೃದಯವು ಎರಡು ವಿಷಯಗಳಲ್ಲಿ ಯುವಕನಂತೆ ಇರುತ್ತದೆ: ಭೂಲೋಕದ ಪ್ರೀತಿಯಲ್ಲಿ ಮತ್ತು ಸುದೀರ್ಘ ಆಸೆಯಲ್ಲಿ (ಹೆಚ್ಚು ಕಾಲ ಬದುಕಬೇಕೆಂಬ ಆಸೆಯಲ್ಲಿ)

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ವೃದ್ಧನ ಹೃದಯವು ಎರಡು ವಿಷಯಗಳಲ್ಲಿ ಯುವಕನಂತೆ ಇರುತ್ತದೆ: ಭೂಲೋಕದ ಪ್ರೀತಿಯಲ್ಲಿ ಮತ್ತು ಸುದೀರ್ಘ ಆಸೆಯಲ್ಲಿ (ಹೆಚ್ಚು ಕಾಲ ಬದುಕಬೇಕೆಂಬ ಆಸೆಯಲ್ಲಿ)".

[صحيح] [رواه البخاري]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ವೃದ್ಧನ ದೇಹವು ವಯಸ್ಸಾಗಿ ದುರ್ಬಲಗೊಳ್ಳುತ್ತದೆ, ಆದರೆ ಅವನ ಹೃದಯವು ಎರಡು ವಿಷಯಗಳ ಪ್ರೀತಿಯಲ್ಲಿ ಯುವಕನಂತಿರುತ್ತದೆ: ಮೊದಲನೆಯದು: ಸಂಪತ್ತು ಶೇಖರಿಸುವ ಮೂಲಕ ಭೂಲೋಕವನ್ನು ಪ್ರೀತಿಸುವುದು. ಎರಡನೆಯದು: ದೀರ್ಘ ಜೀವನ, ಆಯಸ್ಸು, ಬದುಕು ಮತ್ತು ಆಸೆಗಳು.

فوائد الحديث

ಮನುಷ್ಯನು ಯಾವುದರ ಮೇಲೆ ಸೃಷ್ಟಿಸಲ್ಪಟ್ಟಿದ್ದಾನೆ ಎಂಬುದನ್ನು ವಿವರಿಸಲಾಗಿದೆ. ಅದು ಇಹಲೋಕದ ಪ್ರೀತಿ ಮತ್ತು ಸುದೀರ್ಘ ಆಸೆ.

ದೀರ್ಘ ಆಸೆಯನ್ನು ಹೊಂದುವುದು ಮತ್ತು ಸಂಪತ್ತನ್ನು ಶೇಖರಿಸುವ ಬಗ್ಗೆ ದುರಾಸೆ ಪಡುವುದು ಖಂಡನೀಯವೆಂದು ಸೂಚಿಸಲಾಗಿದೆ. ಇದು ಮರಣಕ್ಕಾಗಿ ಸಿದ್ಧತೆ ಮಾಡಿಕೊಳ್ಳುವ ಅಗತ್ಯತೆಯನ್ನು, ಶ್ರೀಮಂತರಿಗೆ ದಾನ ಮಾಡುವ ಮಹತ್ವವನ್ನು, ಮತ್ತು ಬಡವರಿಗೆ ಆತ್ಮಸಂಯಮದಿಂದ ಬದುಕುವ ಶ್ರೇಷ್ಠತೆಯನ್ನು ತಿಳಿಸುತ್ತದೆ.

ಆದಮನ ಮಗನಿಗೆ (ಮನುಷ್ಯನಿಗೆ) ಅತ್ಯಂತ ಪ್ರಿಯವಾದ ವಸ್ತುವೆಂದರೆ ಅವನ ದೇಹ. ಅವನು ಅದರ ಉಳಿಸಲು ಆಸಕ್ತಿ ತೋರುತ್ತಾನೆ. ಆದ್ದರಿಂದ ಅವನು ದೀರ್ಘಾಯುಷ್ಯವನ್ನು ಪ್ರೀತಿಸುತ್ತಾನೆ. ಅದೇ ರೀತಿ ಅವನು ಸಂಪತ್ತನ್ನು ಪ್ರೀತಿಸುತ್ತಾನೆ. ಏಕೆಂದರೆ ಅದು ಆರೋಗ್ಯ ಮತ್ತು ಸಂತೋಷದ ಮುಂದುವರಿಕೆಗೆ ಅತ್ಯಂತ ದೊಡ್ಡ ಕಾರಣಗಳಲ್ಲಿ ಒಂದಾಗಿದೆ. ಯಾವಾಗಲೆಲ್ಲಾ ಅದು ಮುಗಿದುಹೋಗುವ ಸಮಯವು ಹತ್ತಿರವಾಗುವುದನ್ನು ಅವನು ಅನುಭವಿಸುತ್ತಾನೋ, ಆಗ ಅದರ ಮೇಲಿನ ಅವನ ಪ್ರೀತಿ ಮತ್ತು ಅದರ ಶಾಶ್ವತವಾಗಿರಬೇಕೆಂಬ ಬಯಕೆ ತೀವ್ರಗೊಳ್ಳುತ್ತದೆ.

التصنيفات

Condemning Love of the World