ಈಕೆಗೆ ತನ್ನ ಮಗುವಿನ ಮೇಲಿರುವ ಕರುಣೆಗಿಂತಲೂ ಹೆಚ್ಚು ಅಲ್ಲಾಹನಿಗೆ ತನ್ನ ದಾಸರ ಮೇಲೆ ಕರುಣೆಯಿದೆ

ಈಕೆಗೆ ತನ್ನ ಮಗುವಿನ ಮೇಲಿರುವ ಕರುಣೆಗಿಂತಲೂ ಹೆಚ್ಚು ಅಲ್ಲಾಹನಿಗೆ ತನ್ನ ದಾಸರ ಮೇಲೆ ಕರುಣೆಯಿದೆ

ಉಮರ್ ಇಬ್ನುಲ್-ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಕೆಲವು ಯುದ್ಧ ಕೈದಿಗಳನ್ನು ತರಲಾಯಿತು. ಆ ಕೈದಿಗಳಲ್ಲಿ ಒಬ್ಬ ಮಹಿಳೆ ಇದ್ದಳು. ಅವಳ ಸ್ತನಗಳಿಂದ ಹಾಲು ಸುರಿಯುತ್ತಿತ್ತು. ಅವಳು (ಮಕ್ಕಳಿಗೆ) ಕುಡಿಸಲು (ಹುಡುಕುತ್ತಿದ್ದಳು). ಕೈದಿಗಳಲ್ಲಿ ಅವಳು ಯಾವುದೇ ಮಗುವನ್ನು ಕಂಡರೂ ಅದನ್ನು ತೆಗೆದುಕೊಂಡು, ತನ್ನ ಹೊಟ್ಟೆಗೆ ಅಪ್ಪಿಕೊಂಡು ಅದಕ್ಕೆ ಹಾಲುಣಿಸುತ್ತಿದ್ದಳು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಈಕೆ ತನ್ನ ಮಗುವನ್ನು ಬೆಂಕಿಯಲ್ಲಿ ಎಸೆಯುತ್ತಾಳೆಂದು ನೀವು ಭಾವಿಸುತ್ತೀರಾ?". ನಾವು ಹೇಳಿದೆವು: "ಇಲ್ಲ, ಅದನ್ನು ಎಸೆಯದಿರಲು ಅವಳಿಗೆ ಶಕ್ತಿಯಿರುವವರೆಗೆ (ಅವಳು ಹಾಗೆ ಮಾಡಲಾರಳು)". ಆಗ ಅವರು (ಪ್ರವಾದಿ) ಹೇಳಿದರು: "ಈಕೆಗೆ ತನ್ನ ಮಗುವಿನ ಮೇಲಿರುವ ಕರುಣೆಗಿಂತಲೂ ಹೆಚ್ಚು ಅಲ್ಲಾಹನಿಗೆ ತನ್ನ ದಾಸರ ಮೇಲೆ ಕರುಣೆಯಿದೆ".

[صحيح] [متفق عليه]

الشرح

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಹವಾಝಿನ್ ಗೋತ್ರದ ಕೈದಿಗಳನ್ನು ತರಲಾಯಿತು. ಅವರಲ್ಲಿ ಒಬ್ಬ ಮಹಿಳೆ ತನ್ನ ಮಗುವನ್ನು ಹುಡುಕುತ್ತಿದ್ದಳು. ಅವಳು ಯಾವುದೇ ಮಗುವನ್ನು ಕಂಡರೂ ಅದನ್ನು ತೆಗೆದುಕೊಂಡು ಹಾಲುಣಿಸುತ್ತಿದ್ದಳು. ಏಕೆಂದರೆ ಅವಳ ಸ್ತನಗಳಲ್ಲಿ ಹಾಲು ತುಂಬಿದ್ದರಿಂದ ಅವಳಿಗೆ ತೊಂದರೆಯಾಗುತ್ತಿತ್ತು. ಆಗ ಅವಳು ಕೈದಿಗಳಲ್ಲಿ ತನ್ನ ಮಗುವನ್ನು ಕಂಡಳು. ಅವನನ್ನು ತೆಗೆದುಕೊಂಡು, ತನ್ನ ಹೊಟ್ಟೆಗೆ ಅಪ್ಪಿಕೊಂಡು ಅವನಿಗೆ ಹಾಲುಣಿಸಿದಳು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಹಾಬಿಗಳಿಗೆ ಹೇಳಿದರು: ಈಕೆ ತನ್ನ ಮಗುವನ್ನು ಬೆಂಕಿಯಲ್ಲಿ ಎಸೆಯುತ್ತಾಳೆಂದು ನೀವು ಭಾವಿಸುತ್ತೀರಾ? ನಾವು ಹೇಳಿದೆವು: ಅವಳು ಎಂದಿಗೂ ಸ್ವಇಚ್ಛೆಯಿಂದ ಅದನ್ನು ಎಸೆಯಲಾರಳು. ಆಗ ಅವರು ಹೇಳಿದರು: ಹಾಗಾದರೆ, ಈಕೆಗೆ ತನ್ನ ಮಗುವಿನ ಮೇಲಿರುವ ಕರುಣೆಗಿಂತಲೂ ಹೆಚ್ಚು ಅಲ್ಲಾಹನಿಗೆ ತನ್ನ ಮುಸ್ಲಿಂ ದಾಸರ ಮೇಲೆ ಕರುಣೆಯಿದೆ".

فوائد الحديث

ಅಲ್ಲಾಹು ತನ್ನ ದಾಸರ ಮೇಲೆ ಹೊಂದಿರುವ ವಿಶಾಲವಾದ ಕರುಣೆಯನ್ನು, ಮತ್ತು ಅವನು ಅವರಿಗಾಗಿ ಒಳಿತನ್ನು ಮತ್ತು ಸ್ವರ್ಗವನ್ನು, ಹಾಗೂ ನರಕದಿಂದ ವಿಮೋಚನೆಯನ್ನು ಬಯಸುತ್ತಾನೆ ಎಂದು ತಿಳಿಸಲಾಗಿದೆ.

ಘಟನೆಗಳಿಂದ ಪ್ರಯೋಜನ ಪಡೆಯುವುದು ಮತ್ತು ಅವುಗಳನ್ನು ಮಾರ್ಗದರ್ಶನ ಹಾಗೂ ಶಿಕ್ಷಣದಲ್ಲಿ ಬಳಸುವುದು (ಪ್ರವಾದಿಯವರ ಬೋಧನಾ ಶೈಲಿ).

ಸತ್ಯವಿಶ್ವಾಸಿಯು ಅಲ್ಲಾಹನ ಬಗ್ಗೆ ಉತ್ತಮ ಭಾವನೆಯನ್ನು ಹೊಂದಿರಬೇಕು, ಮತ್ತು ಅಲ್ಲಾಹನ ಭಯಭಕ್ತಿ (ತಖ್ವಾ) ಮತ್ತು ಅವನ ಧರ್ಮದ ಮೇಲೆ ಸ್ಥಿರವಾಗಿರುವವರೆಗೆ ನಿರಾಶೆಗೊಳ್ಳಬಾರದು. ಏಕೆಂದರೆ, ಅಲ್ಲಾಹು ವಿಶಾಲವಾದ ಕರುಣೆಯುಳ್ಳವನಾಗಿದ್ದಾನೆ.

التصنيفات

Oneness of Allah's Names and Attributes