ತೌಹೀದ್-ಏ-ಅಸ್ಮಾ ವ ಸಿಫಾತ್‌ (ಅಲ್ಲಾಹನ ಹೆಸರುಗಳು ಮತ್ತು ಗುಣಲಕ್ಷಣಗಳಿಗೆ ಸಂಬಂಧಿಸಿದ ಏಕೀಶ್ವರವಾದ)

ತೌಹೀದ್-ಏ-ಅಸ್ಮಾ ವ ಸಿಫಾತ್‌ (ಅಲ್ಲಾಹನ ಹೆಸರುಗಳು ಮತ್ತು ಗುಣಲಕ್ಷಣಗಳಿಗೆ ಸಂಬಂಧಿಸಿದ ಏಕೀಶ್ವರವಾದ)

2- ನಿಶ್ಚಯವಾಗಿಯೂ ಅಲ್ಲಾಹು ಒಳಿತು ಮತ್ತು ಕೆಡುಕುಗಳನ್ನು ದಾಖಲಿಸಿದನು. ನಂತರ ಅವುಗಳನ್ನು (ಹೀಗೆ) ವಿವರಿಸಿದನು: ಒಬ್ಬ ವ್ಯಕ್ತಿ ಒಂದು ಒಳಿತನ್ನು ಮಾಡಲು ಉದ್ದೇಶಿಸಿ ಅದನ್ನು ಮಾಡದಿದ್ದರೆ ಅಲ್ಲಾಹು ಅವನ ಹೆಸರಲ್ಲಿ ಒಂದು ಪೂರ್ಣ ಒಳಿತನ್ನು ದಾಖಲಿಸುವನು. ಅವನು ಒಂದು ಒಳಿತನ್ನು ಮಾಡಲು ಉದ್ದೇಶಿಸಿ ಅದನ್ನು ಮಾಡಿದರೆ, ಅಲ್ಲಾಹು ಅದರ ಪ್ರತಿಫಲವನ್ನು ಹತ್ತರಿಂದ ಏಳು ನೂರರವರೆಗೆ ಇಮ್ಮಡಿಗೊಳಿಸಿ, ಅಥವಾ ಅದಕ್ಕಿಂತಲೂ ಹೆಚ್ಚು ಪ್ರತಿಫಲವನ್ನು ದಾಖಲಿಸುವನು. ಒಬ್ಬ ವ್ಯಕ್ತಿ ಒಂದು ಕೆಡುಕನ್ನು ಮಾಡಲು ಉದ್ದೇಶಿಸಿ ಅದನ್ನು ಮಾಡದಿದ್ದರೆ ಅಲ್ಲಾಹು ಅವನ ಹೆಸರಲ್ಲಿ ಒಂದು ಪೂರ್ಣ ಒಳಿತನ್ನು ದಾಖಲಿಸುವನು. ಅವನು ಒಂದು ಕೆಡುಕನ್ನು ಮಾಡಲು ಉದ್ದೇಶಿಸಿ ಅದನ್ನು ಮಾಡಿದರೆ ಅಲ್ಲಾಹು ಅವನ ಹೆಸರಲ್ಲಿ ಒಂದು ಕೆಡುಕನ್ನು ಮಾತ್ರ ದಾಖಲಿಸುವನು

8- ಸರಿಯಾದ ಮಾರ್ಗವನ್ನು ಅನುಸರಿಸಿ ಮತ್ತು ಸಾಧ್ಯವಾದಷ್ಟು ಹತ್ತಿರವಾಗಿರಿ, ಮತ್ತು ನಿಮ್ಮಲ್ಲಿ ಯಾರೂ ತಮ್ಮ ಕರ್ಮಗಳಿಂದಾಗಿ ಮೋಕ್ಷ ಪಡೆಯುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ." ಅವರು (ಅನುಯಾಯಿಗಳು) ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ನೀವು ಕೂಡ ಪಡೆಯುವುದಿಲ್ಲವೇ?" ಅವರು ಉತ್ತರಿಸಿದರು: "ನಾನೂ ಕೂಡ ಪಡೆಯುವುದಿಲ್ಲ, ಅಲ್ಲಾಹು ತನ್ನ ಕರುಣೆ ಮತ್ತು ಅನುಗ್ರಹದಿಂದ ನನ್ನನ್ನು ಆವರಿಸಿಕೊಳ್ಳುವ ಹೊರತು