ಅಲ್ಲಾಹನಿಗೆ ಸ್ಥಳಗಳಲ್ಲಿ ಅತ್ಯಂತ ಪ್ರಿಯವಾಗಿರುವುದು ಅದರ ಮಸೀದಿಗಳಾಗಿವೆ, ಮತ್ತು ಅಲ್ಲಾಹನಿಗೆ ಸ್ಥಳಗಳಲ್ಲಿ ಅತ್ಯಂತ…

ಅಲ್ಲಾಹನಿಗೆ ಸ್ಥಳಗಳಲ್ಲಿ ಅತ್ಯಂತ ಪ್ರಿಯವಾಗಿರುವುದು ಅದರ ಮಸೀದಿಗಳಾಗಿವೆ, ಮತ್ತು ಅಲ್ಲಾಹನಿಗೆ ಸ್ಥಳಗಳಲ್ಲಿ ಅತ್ಯಂತ ಅಪ್ರಿಯವಾಗಿರುವುದು ಅದರ ಮಾರುಕಟ್ಟೆಗಳಾಗಿವೆ

ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹನಿಗೆ ಸ್ಥಳಗಳಲ್ಲಿ ಅತ್ಯಂತ ಪ್ರಿಯವಾಗಿರುವುದು ಅದರ ಮಸೀದಿಗಳಾಗಿವೆ, ಮತ್ತು ಅಲ್ಲಾಹನಿಗೆ ಸ್ಥಳಗಳಲ್ಲಿ ಅತ್ಯಂತ ಅಪ್ರಿಯವಾಗಿರುವುದು ಅದರ ಮಾರುಕಟ್ಟೆಗಳಾಗಿವೆ".

[صحيح] [رواه مسلم]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಸರ್ವಶಕ್ತನಾದ ಅಲ್ಲಾಹನಿಗೆ ಅತ್ಯಂತ ಪ್ರಿಯವಾದ ಸ್ಥಳಗಳು ಮಸೀದಿಗಳಾಗಿವೆ. ಏಕೆಂದರೆ ಅವು ವಿಧೇಯತೆಯ ಭವನಗಳಾಗಿವೆ, ಮತ್ತು ಅವುಗಳ ಅಡಿಪಾಯವು ದೇವಭಕ್ತಿಯ (ತಖ್ವಾ) ಮೇಲಿದೆ. ಹಾಗೆಯೇ ಅಲ್ಲಾಹನಿಗೆ ಸ್ಥಳಗಳಲ್ಲಿ ಅತ್ಯಂತ ಅಪ್ರಿಯವಾಗಿರುವುದು ಮಾರುಕಟ್ಟೆಗಳಾಗಿವೆ. ಏಕೆಂದರೆ ಅವು ಸಾಮಾನ್ಯವಾಗಿ ಮೋಸ, ವಂಚನೆ, ಬಡ್ಡಿ, ಸುಳ್ಳು ಪ್ರಮಾಣಗಳು, ವಾಗ್ದಾನ ಮುರಿಯುವುದು ಮತ್ತು (ಜನರು) ಅಲ್ಲಾಹನ ಸ್ಮರಣೆಯಿಂದ ವಿಮುಖರಾಗುವ ಸ್ಥಳಗಳಾಗಿವೆ.

فوائد الحديث

ಮಸೀದಿಗಳ ಪಾವಿತ್ರ್ಯತೆ ಮತ್ತು ಅವುಗಳ ಸ್ಥಾನಮಾನವನ್ನು ತಿಳಿಸಲಾಗಿದೆ. ಏಕೆಂದರೆ ಅವು ಅಲ್ಲಾಹನ ಹೆಸರನ್ನು ಹೆಚ್ಚಾಗಿ ಸ್ಮರಿಸಲಾಗುವ ಭವನಗಳಾಗಿವೆ.

ಮಸೀದಿಗಳಿಗೆ ಅಂಟಿಕೊಂಡಿರಲು, ಮತ್ತು ಅಲ್ಲಾಹನ ಪ್ರೀತಿ ಹಾಗೂ ಸಂತುಷ್ಟಿಯನ್ನು ಬಯಸಿ ಅವುಗಳಿಗೆ ಹೆಚ್ಚಾಗಿ ಭೇಟಿ ನೀಡಲು ಪ್ರೋತ್ಸಾಹಿಸಲಾಗಿದೆ. ಹಾಗೆಯೇ (ಅಲ್ಲಾಹನ) ದ್ವೇಷಕ್ಕೆ ಕಾರಣವಾಗುವ ವಿಷಯಗಳಲ್ಲಿ ಪ್ರವೇಶಿಸುವುದನ್ನು ತಪ್ಪಿಸಲು, ಮಾರುಕಟ್ಟೆಗಳಿಗೆ ಭೇಟಿ ನೀಡುವುದನ್ನು (ಅಗತ್ಯವಿದ್ದರೆ ಹೊರತು) ಕಡಿಮೆ ಮಾಡಲು ಪ್ರೋತ್ಸಾಹಿಸಲಾಗಿದೆ.

ಇಮಾಮ್ ನವವಿ ಹೇಳುತ್ತಾರೆ: "ಮಸೀದಿಗಳು (ಅಲ್ಲಾಹನ) ಕರುಣೆ ಇಳಿಯುವ ಸ್ಥಳಗಳಾಗಿವೆ ಮತ್ತು ಮಾರುಕಟ್ಟೆಗಳು ಅದಕ್ಕೆ ವಿರುದ್ಧವಾಗಿವೆ."

التصنيفات

Oneness of Allah's Names and Attributes, The rulings of mosques