ಖಂಡಿತವಾಗಿಯೂ ನಿನ್ನಲ್ಲಿ ಅಲ್ಲಾಹು ಪ್ರೀತಿಸುವ ಎರಡು ಗುಣಲಕ್ಷಣಗಳಿವೆ: 'ಹಿಲ್ಮ್' (ಸಹನಶೀಲತೆ), ಮತ್ತು 'ಅನಾತ್' (ತಾಳ್ಮೆ ಮತ್ತು…

ಖಂಡಿತವಾಗಿಯೂ ನಿನ್ನಲ್ಲಿ ಅಲ್ಲಾಹು ಪ್ರೀತಿಸುವ ಎರಡು ಗುಣಲಕ್ಷಣಗಳಿವೆ: 'ಹಿಲ್ಮ್' (ಸಹನಶೀಲತೆ), ಮತ್ತು 'ಅನಾತ್' (ತಾಳ್ಮೆ ಮತ್ತು ನಿಧಾನವಾಗಿ ಯೋಚಿಸಿ ಕಾರ್ಯನಿರ್ವಹಿಸುವುದು)

ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಬ್ದುಲ್ ಖೈಸ್ ಗೋತ್ರದ ಅಶಜ್ಜ್ ರಿಗೆ ಹೇಳಿದರು: "ಖಂಡಿತವಾಗಿಯೂ ನಿನ್ನಲ್ಲಿ ಅಲ್ಲಾಹು ಪ್ರೀತಿಸುವ ಎರಡು ಗುಣಲಕ್ಷಣಗಳಿವೆ: 'ಹಿಲ್ಮ್' (ಸಹನಶೀಲತೆ), ಮತ್ತು 'ಅನಾತ್' (ತಾಳ್ಮೆ ಮತ್ತು ನಿಧಾನವಾಗಿ ಯೋಚಿಸಿ ಕಾರ್ಯನಿರ್ವಹಿಸುವುದು)".

[صحيح] [رواه مسلم]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಬ್ದುಲ್ ಖೈಸ್ ಗೋತ್ರದ ನಾಯಕ, ಅಲ್-ಮುಂದಿರ್ ಇಬ್ನ್ ಆಇದ್ ಅಶಜ್ಜ್ ರಿಗೆ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳಿದರು: ಖಂಡಿತವಾಗಿಯೂ ನಿನ್ನಲ್ಲಿ ಅಲ್ಲಾಹು ಪ್ರೀತಿಸುವ ಎರಡು ಗುಣಲಕ್ಷಣಗಳಿವೆ, ಅವು: ಬುದ್ಧಿವಂತಿಕೆ ಮತ್ತು ದೃಢತೆ, ಗಾಂಭೀರ್ಯ ಹಾಗೂ ಆತುರಪಡದಿರುವುದು.

فوائد الحديث

'ಹಿಲ್ಮ್' (ಸಹನಶೀಲತೆ) ಮತ್ತು 'ಅನಾತ್' (ತಾಳ್ಮೆ/ನಿಧಾನವಾಗಿ ಯೋಚಿಸಿ ಕಾರ್ಯನಿರ್ವಹಿಸುವುದು) ದಂತಹ ಗುಣಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಲಾಗಿದೆ.

ಕಾರ್ಯಗಳಲ್ಲಿ ದೃಢವಾಗಿರಲು ಮತ್ತು ಪರಿಣಾಮಗಳನ್ನು ಪರಿಗಣಿಸಿ ಕಾರ್ಯನಿರ್ವಹಿಸಲು ಪ್ರೋತ್ಸಾಹಿಸಲಾಗಿದೆ.

ಸಹನಶೀಲತೆ ಮತ್ತು ತಾಳ್ಮೆಯು ಶ್ಲಾಘನೀಯ ಗುಣಗಳಾಗಿವೆಯೆಂದು ತಿಳಿಸಲಾಗಿದೆ.

ಅಲ್ಲಾಹು ತನಗೆ ನೀಡಿರುವ ಉತ್ತಮ ನೈತಿಕ ಗುಣಗಳಿಗಾಗಿ ಮನುಷ್ಯನು ಅವನನ್ನು ಹೊಗಳುವುದನ್ನು ಪ್ರೋತ್ಸಾಹಿಸಲಾಗಿದೆ.

'ಅಶಜ್ಜ್' ಎಂದರೆ ಮುಖ, ತಲೆ ಅಥವಾ ಹಣೆಯ ಮೇಲೆ ಗಾಯವಿರುವವನು.

التصنيفات

Oneness of Allah's Names and Attributes, Praiseworthy Morals