إعدادات العرض
ಓ ಆದಮರ ಪುತ್ರನೇ! ನೀನು ಎಲ್ಲಿಯ ತನಕ ನನ್ನಲ್ಲಿ ಪ್ರಾರ್ಥಿಸುತ್ತೀಯೋ ಮತ್ತು ನನ್ನಲ್ಲಿ ನಿರೀಕ್ಷೆಯಿಡುತ್ತೀಯೋ ಅಲ್ಲಿಯ ತನಕ ನೀನು…
ಓ ಆದಮರ ಪುತ್ರನೇ! ನೀನು ಎಲ್ಲಿಯ ತನಕ ನನ್ನಲ್ಲಿ ಪ್ರಾರ್ಥಿಸುತ್ತೀಯೋ ಮತ್ತು ನನ್ನಲ್ಲಿ ನಿರೀಕ್ಷೆಯಿಡುತ್ತೀಯೋ ಅಲ್ಲಿಯ ತನಕ ನೀನು ಮಾಡಿದ್ದೆಲ್ಲವನ್ನೂ ನಾನು ನಿನಗೆ ಕ್ಷಮಿಸುತ್ತೇನೆ. ನನಗೆ ಅದೊಂದು ವಿಷಯವೇ ಅಲ್ಲ
ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ಓ ಆದಮರ ಪುತ್ರನೇ! ನೀನು ಎಲ್ಲಿಯ ತನಕ ನನ್ನಲ್ಲಿ ಪ್ರಾರ್ಥಿಸುತ್ತೀಯೋ ಮತ್ತು ನನ್ನಲ್ಲಿ ನಿರೀಕ್ಷೆಯಿಡುತ್ತೀಯೋ ಅಲ್ಲಿಯ ತನಕ ನೀನು ಮಾಡಿದ್ದೆಲ್ಲವನ್ನೂ ನಾನು ನಿನಗೆ ಕ್ಷಮಿಸುತ್ತೇನೆ. ನನಗೆ ಅದೊಂದು ವಿಷಯವೇ ಅಲ್ಲ. ಓ ಆದಮರ ಪುತ್ರನೇ! ನಿನ್ನ ಪಾಪಗಳು ಆಕಾಶದಲ್ಲಿರುವ ಮೋಡಗಳನ್ನು ತಲುಪಿ, ನಂತರ ನೀನು ನನ್ನಲ್ಲಿ ಕ್ಷಮೆಯಾಚಿಸಿದರೂ, ನಾನು ನಿನ್ನನ್ನು ಕ್ಷಮಿಸುತ್ತೇನೆ. ನನಗೆ ಅದೊಂದು ವಿಷಯವೇ ಅಲ್ಲ. ಓ ಆದಮರ ಪುತ್ರನೇ! ನೀನು ನನ್ನ ಬಳಿಗೆ ಭೂಮಿ ತುಂಬಾ ಪಾಪಗಳೊಂದಿಗೆ ಬಂದು, ನಂತರ ನನ್ನೊಂದಿಗೆ ಯಾವುದೇ ಸಹಭಾಗಿತ್ವ (ಶಿರ್ಕ್) ಮಾಡದ ಸ್ಥಿತಿಯಲ್ಲಿ ನನ್ನನ್ನು ಭೇಟಿಯಾದರೆ, ನಾನು ಭೂಮಿ ತುಂಬಾ ಕ್ಷಮೆಯೊಂದಿಗೆ ನಿನ್ನ ಬಳಿಗೆ ಬರುತ್ತೇನೆ."
الترجمة
العربية বাংলা Bosanski English Español فارسی Français Bahasa Indonesia Русский Tagalog Türkçe اردو 中文 हिन्दी Hausa Kurdî Português සිංහල አማርኛ অসমীয়া Kiswahili Tiếng Việt ગુજરાતી Nederlands پښتو नेपाली മലയാളം ไทย Svenska Кыргызча Română Malagasy Српски తెలుగు ქართული Mooreالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಸರ್ವಶಕ್ತನಾದ ಅಲ್ಲಾಹು ಕುದ್ಸಿ ಹದೀಸಿನಲ್ಲಿ ಹೀಗೆ ಹೇಳುತ್ತಾನೆ: "ಓ ಆದಮರ ಪುತ್ರನೇ! ನೀನು ನನ್ನಲ್ಲಿ ಪ್ರಾರ್ಥಿಸುತ್ತಿರುವ, ನನ್ನ ದಯೆಯನ್ನು ನಿರೀಕ್ಷಿಸುತ್ತಿರುವ ಮತ್ತು ನನ್ನ ಬಗ್ಗೆ ನಿರಾಶನಾಗದಿರುವ ತನಕ ನಾನು ನಿನ್ನ ಪಾಪಗಳನ್ನು ಮರೆಮಾಚುವೆನು ಮತ್ತು ಅಳಿಸಿಬಿಡುವೆನು. ನನಗೆ ಅದೊಂದು ವಿಷಯವೇ ಅಲ್ಲ. ನಿನ್ನ ಪಾಪ ಅಥವಾ ಅಪರಾಧವು ಮಹಾ ಪಾಪಗಳಲ್ಲಿ ಸೇರಿದ್ದಾಗಿದ್ದರೂ ಸಹ. ಓ ಆದಮರ ಪುತ್ರನೇ! ನಿನ್ನ ಪಾಪಗಳು ಆಕಾಶ ಮತ್ತು ಭೂಮಿಯ ಎಲ್ಲಾ ಮುಕ್ಕು-ಮೂಲೆಗಳನ್ನು ತಲುಪುವ ರೀತಿಯಲ್ಲಿ, ಅವುಗಳ ನಡುವಿನ ಭಾಗವನ್ನು ಸಂಪೂರ್ಣವಾಗಿ ತುಂಬುವಷ್ಟರ ಮಟ್ಟಿಗೆ ಹೆಚ್ಚಾಗಿದ್ದು, ನಂತರ ನೀನು ನನ್ನಲ್ಲಿ ಕ್ಷಮೆಯಾಚಿಸಿದರೆ, ನಾನು ನಿನ್ನ ಪಾಪಗಳನ್ನು ಅಳಿಸುವೆನು ಮತ್ತು ಅವೆಲ್ಲವನ್ನೂ ಕ್ಷಮಿಸಿ ಬಿಡುವೆನು. ಅವುಗಳ ಹೆಚ್ಚಳವು ನನಗೊಂದು ವಿಷಯವೇ ಅಲ್ಲ. ಓ ಆದಮರ ಪುತ್ರನೇ! ನೀನು ಮರಣಾನಂತರ ನನ್ನ ಬಳಿಗೆ ಭೂಮಿ ತುಂಬಾ ಪಾಪಗಳೊಂದಿಗೆ ಬಂದು, ನಂತರ ನನ್ನೊಂದಿಗೆ ಯಾವುದೇ ಸಹಭಾಗಿತ್ವ (ಶಿರ್ಕ್) ಮಾಡದ ಸ್ಥಿತಿಯಲ್ಲಿ ಏಕದೇವವಿಶ್ವಾಸಿಯಾಗಿ ನೀನು ನನ್ನನ್ನು ಭೇಟಿಯಾದರೆ, ಈ ಎಲ್ಲಾ ಪಾಪಗಳಿಗೆ ಬದಲಿಯಾಗಿ ನಾನು ಭೂಮಿ ತುಂಬಾ ಕ್ಷಮೆಯೊಂದಿಗೆ ನಿನ್ನನ್ನು ಎದುರುಗೊಳ್ಳುತ್ತೇನೆ. ಏಕೆಂದರೆ ನಾನು ವಿಶಾಲವಾದ ಕ್ಷಮೆಯನ್ನು ಹೊಂದಿರುವವನು. ಶಿರ್ಕ್ (ದೇವ ಸಹಭಾಗಿತ್ವ) ಗೆ ಹೊರತಾದ ಎಲ್ಲಾ ಪಾಪಗಳನ್ನು ನಾನು ಕ್ಷಮಿಸುತ್ತೇನೆ."فوائد الحديث
ಸರ್ವಶಕ್ತನಾದ ಅಲ್ಲಾಹನ ವಿಶಾಲವಾದ ದಯೆ, ಕ್ಷಮೆ ಮತ್ತು ಉದಾರತೆಯನ್ನು ತಿಳಿಸಲಾಗಿದೆ.
ದೇವ ವಿಶ್ವಾಸದ ಶ್ರೇಷ್ಠತೆಯನ್ನು ಮತ್ತು ಏಕದೇವ ವಿಶ್ವಾಸಿಗಳ ಪಾಪಗಳನ್ನು ಅಲ್ಲಾಹು ಕ್ಷಮಿಸುತ್ತಾನೆಂದು ತಿಳಿಸಲಾಗಿದೆ.
ದೇವಸಹಭಾಗಿತ್ವದ (ಶಿರ್ಕ್) ಅಪಾಯವನ್ನು ಮತ್ತು ದೇವಸಹಭಾಗಿತ್ವ ಮಾಡುವವರಿಗೆ ಅಲ್ಲಾಹು ಕ್ಷಮಿಸುವುದಿಲ್ಲವೆಂದು ತಿಳಿಸಲಾಗಿದೆ.
ಇಬ್ನ್ ರಜಬ್ ಹೇಳಿದರು: "ಪಾಪಗಳಿಗೆ ಕ್ಷಮೆ ದೊರೆಯುವ ಮೂರು ಮಾರ್ಗಗಳನ್ನು ಈ ಹದೀಸ್ ಒಳಗೊಂಡಿದೆ. ಒಂದು: ನಿರೀಕ್ಷೆಯಿಂದ ಮಾಡುವ ಪ್ರಾರ್ಥನೆ. ಎರಡು: ಕ್ಷಮೆಯಾಚನೆ ಮತ್ತು ಪಶ್ಚಾತ್ತಾಪದ ಬೇಡಿಕೆ. ಮೂರು: ಏಕದೇವ ವಿಶ್ವಾಸದಲ್ಲಿ ಮರಣ ಹೊಂದುವುದು."
ಇದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲ್ಲಾಹನಿಂದ ವರದಿ ಮಾಡುವ ಹದೀಸ್ ಆಗಿದ್ದು ಇದನ್ನು ಪವಿತ್ರ (ಕುದ್ಸಿ) ಅಥವಾ ದೈವಿಕ ಹದೀಸ್ ಎಂದು ಕರೆಯಲಾಗುತ್ತದೆ. ಇಂತಹ ಹದೀಸ್‌ಗಳ ಪದಗಳು ಮತ್ತು ಅರ್ಥವು ಅಲ್ಲಾಹನದ್ದೇ ಆಗಿದ್ದರೂ, ಇವುಗಳಿಗೆ ಕುರ್‌ಆನ್‌ನ ವಚನಗಳಿಗೆ ಇರುವ ವಿಶೇಷತೆಗಳಿಲ್ಲ. ಅಂದರೆ ಈ ವಚನಗಳನ್ನು ಪಠಿಸುವುದು ಆರಾಧನೆಯಲ್ಲ, ಇವುಗಳನ್ನು ಸ್ಪರ್ಶಿಸಲು ಶುದ್ಧಿಯಿರಬೇಕಾದ ಅಗತ್ಯವಿಲ್ಲ ಮತ್ತು ಇವು ಸವಾಲಿನ ರೂಪದಲ್ಲಿ ಅಥವಾ ಪವಾಡದ ರೂಪದಲ್ಲಿ ಅವತೀರ್ಣವಾಗಿಲ್ಲ.
ಪಾಪಗಳಲ್ಲಿ ಮೂರು ವಿಧಗಳಿವೆ: ಒಂದು: ಅಲ್ಲಾಹನೊಂದಿಗೆ ಶಿರ್ಕ್ (ಸಹಭಾಗಿತ್ವ) ಮಾಡುವುದು. ಇದನ್ನು ಅಲ್ಲಾಹು ಎಂದಿಗೂ ಕ್ಷಮಿಸುವುದಿಲ್ಲ. ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: "ಖಂಡಿತವಾಗಿಯೂ ಅಲ್ಲಾಹನೊಡನೆ ಶಿರ್ಕ್ (ಸಹಭಾಗಿತ್ವ) ಮಾಡಿದವನಿಗೆ ಅಲ್ಲಾಹು ಸ್ವರ್ಗವನ್ನು ನಿಷಿದ್ಧಗೊಳಿಸಿದ್ದಾನೆ." ಎರಡು: ಮನುಷ್ಯನು ತನ್ನ ಮತ್ತು ತನ್ನ ಪರಿಪಾಲಕನ (ಅಲ್ಲಾಹನ) ನಡುವಿನ ವಿಷಯಗಳಲ್ಲಿ ಪಾಪವೆಸಗುವ ಮೂಲಕ ತನ್ನ ಮೇಲೆ ತಾನೇ ಅಕ್ರಮವೆಸಗುವುದು. ಸರ್ವಶಕ್ತನಾದ ಅಲ್ಲಾಹು ಇಚ್ಚಿಸಿದರೆ, ಅದನ್ನು ಕ್ಷಮಿಸುತ್ತಾನೆ ಮತ್ತು ನಿರ್ಲಕ್ಷಿಸುತ್ತಾನೆ. ಮೂರು: ಅಲ್ಲಾಹು ಸ್ವಲ್ಪವೂ ಬಿಟ್ಟುಬಿಡದ ಪಾಪಗಳು. ಅಂದರೆ ಮನುಷ್ಯರು ತಮ್ಮ ತಮ್ಮಲ್ಲಿ ಮಾಡುವ ಅಕ್ರಮಗಳು. ಇವುಗಳಿಗೆ ಪ್ರತೀಕಾರ ಪಡೆಯುವುದು ಅನಿವಾರ್ಯವಾಗಿದೆ.