إعدادات العرض
ಇಹಲೋಕದಲ್ಲಿ ಒಬ್ಬ ದಾಸನು ಇನ್ನೊಬ್ಬ ದಾಸನನ್ನು ಮುಚ್ಚಿಡುವುದಾದರೆ, ಪುನರುತ್ಥಾನ ದಿನ ಅಲ್ಲಾಹು ಅವನನ್ನು ಮುಚ್ಚಿಡುತ್ತಾನೆ
ಇಹಲೋಕದಲ್ಲಿ ಒಬ್ಬ ದಾಸನು ಇನ್ನೊಬ್ಬ ದಾಸನನ್ನು ಮುಚ್ಚಿಡುವುದಾದರೆ, ಪುನರುತ್ಥಾನ ದಿನ ಅಲ್ಲಾಹು ಅವನನ್ನು ಮುಚ್ಚಿಡುತ್ತಾನೆ
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಇಹಲೋಕದಲ್ಲಿ ಒಬ್ಬ ದಾಸನು ಇನ್ನೊಬ್ಬ ದಾಸನನ್ನು ಮುಚ್ಚಿಡುವುದಾದರೆ, ಪುನರುತ್ಥಾನ ದಿನ ಅಲ್ಲಾಹು ಅವನನ್ನು ಮುಚ್ಚಿಡುತ್ತಾನೆ."
الترجمة
العربية বাংলা Bosanski English Español فارسی Français Bahasa Indonesia Русский Tagalog Türkçe اردو 中文 हिन्दी Tiếng Việt සිංහල Hausa Kurdî Kiswahili Português தமிழ் Nederlands অসমীয়া ગુજરાતી پښتو മലയാളം नेपाली ქართული Magyar తెలుగు Македонски Svenska Moore Română Українська ไทย मराठी ਪੰਜਾਬੀ دری አማርኛ Wolof ភាសាខ្មែរالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಒಬ್ಬ ಮುಸಲ್ಮಾನನು ತನ್ನ ಸಹೋದರನಾದ ಇನ್ನೊಬ್ಬ ಮುಸಲ್ಮಾನನಿಗೆ ಸಂಬಂಧಿಸಿದ ಯಾವುದೇ ವಿಷಯವನ್ನು ಮುಚ್ಚಿಡುವುದಾದರೆ, ಪುನರುತ್ತಾನ ದಿನ ಅಲ್ಲಾಹು ಅವನ ವಿಷಯವನ್ನು ಮುಚ್ಚಿಡುತ್ತಾನೆ. ಏಕೆಂದರೆ ಪ್ರತಿಫಲವು ಕರ್ಮಕ್ಕೆ ಅನುಗುಣವಾಗಿರುತ್ತದೆ. ಅಲ್ಲಾಹು ಅವನನ್ನು ಮುಚ್ಚಿಡುತ್ತಾನೆ ಎಂದರೆ ಮಹ್ಶರದಲ್ಲಿ ನೆರೆದ ಜನರ ಮುಂದೆ ಪ್ರಚಾರವಾಗದಂತೆ ಅವನ ನ್ಯೂನತೆಗಳು ಮತ್ತು ಪಾಪಗಳನ್ನು ಮುಚ್ಚಿಡುತ್ತಾನೆ. ಇದು ಅವನನ್ನು ಆ ಪಾಪಗಳಿಗಾಗಿ ವಿಚಾರಣೆ ಮಾಡುವುದನ್ನು ಮತ್ತು ಅವನಿಗೆ ಅದನ್ನು ನೆನಪಿಸಿಕೊಡುವುದ್ನು ಬಿಟ್ಟುಬಿಡುವುದರ ಮೂಲಕವೂ ಆಗಿರಬಹುದು.فوائد الحديث
ಮುಸಲ್ಮಾನನು ಒಂದು ಪಾಪ ಮಾಡಿದರೆ ಅದನ್ನು ಮುಚ್ಚಿಡುವುದು ಶರಿಯತ್‌ನ ಭಾಗವಾಗಿದೆ. ಆದರೆ ಅದರೊಂದಿಗೆ ಅವನನ್ನು ಖಂಡಿಸಬೇಕು, ಅವನಿಗೆ ಬುದ್ಧಿ ಹೇಳಬೇಕು, ಮತ್ತು ಅಲ್ಲಾಹನ ಶಿಕ್ಷೆಯ ಬಗ್ಗೆ ಅವನನ್ನು ಭಯಪಡಿಸಬೇಕು. ಆದರೆ ಅವನು ದುಷ್ಕರ್ಮ ಮತ್ತು ಭ್ರಷ್ಟಾಚಾರ ಮಾಡುವ ಜನರಲ್ಲಿ ಸೇರಿದ್ದರೆ, ಮತ್ತು ಬಹಿರಂಗವಾಗಿ ಪಾಪ ಮತ್ತು ದುಷ್ಕರ್ಮಗಳನ್ನು ಮಾಡುತ್ತಿದ್ದರೆ, ಅದನ್ನು ಮುಚ್ಚಿಡುವುದು ಸೂಕ್ತವಲ್ಲ. ಏಕೆಂದರೆ ಅದನ್ನು ಮುಚ್ಚಿಡುವುದರಿಂದ ಅವರಿಗೆ ಪಾಪ ಮಾಡಲು ಧೈರ್ಯ ಸಿಕ್ಕಂತಾಗುತ್ತದೆ. ಅವರ ಸಂಗತಿಯನ್ನು ಆಡಳಿತಗಾರರಿಗೆ ತಿಳಿಸಬೇಕಾಗಿದೆ. ಇದರಲ್ಲಿ ಅವರ ಹೆಸರು ಹೇಳುವ ಅಗತ್ಯವಿದ್ದರೂ ಸಹ. ಏಕೆಂದರೆ ಅವನು ಬಹಿರಂಗವಾಗಿ ದುಷ್ಕರ್ಮ ಮತ್ತು ಪಾಪ ಮಾಡುವವನಾಗಿದ್ದಾನೆ.
ಇತರರ ತಪ್ಪುಗಳನ್ನು ಮುಚ್ಚಿಡಲು ಪ್ರೋತ್ಸಾಹಿಸಲಾಗಿದೆ.
ಮುಚ್ಚಿಡುವುದರ ಪ್ರಯೋಜನಗಳು: ತಪ್ಪು ಮಾಡಿದವನಿಗೆ ತನ್ನನ್ನು ತಿದ್ದಿಕೊಳ್ಳಲು ಮತ್ತು ಅಲ್ಲಾಹನ ಕಡೆಗೆ ಪಶ್ಚಾತ್ತಾಪ ಪಡಲು ಅವಕಾಶವನ್ನು ಒದಗಿಸುತ್ತದೆ. ಏಕೆಂದರೆ ನ್ಯೂನತೆಗಳು ಮತ್ತು ದೌರ್ಬಲ್ಯಗಳನ್ನು ಬಹಿರಂಗಪಡಿಸುವುದು ಅಸಭ್ಯತೆಯನ್ನು ಪ್ರಚಾರ ಮಾಡುವುದರಲ್ಲಿ ಒಳಪಡುತ್ತದೆ, ಅದು ಸಮಾಜದ ವಾತಾವರಣವನ್ನು ಕೆಡಿಸುತ್ತದೆ, ಮತ್ತು ಜನರು ತಪ್ಪು ಮಾಡಲು ಪ್ರೇರೇಪಿಸುತ್ತದೆ.