ಅಲ್ಲಾಹು ಭೂಮಿಯನ್ನು ಮುಷ್ಠಿಯಲ್ಲಿ ಹಿಡಿಯುತ್ತಾನೆ ಮತ್ತು ಆಕಾಶಗಳನ್ನು ಬಲಗೈಯಿಂದ ಸುರುಳಿಯಾಗಿ ಮಡಚುತ್ತಾನೆ. ನಂತರ ಹೇಳುತ್ತಾನೆ:…

ಅಲ್ಲಾಹು ಭೂಮಿಯನ್ನು ಮುಷ್ಠಿಯಲ್ಲಿ ಹಿಡಿಯುತ್ತಾನೆ ಮತ್ತು ಆಕಾಶಗಳನ್ನು ಬಲಗೈಯಿಂದ ಸುರುಳಿಯಾಗಿ ಮಡಚುತ್ತಾನೆ. ನಂತರ ಹೇಳುತ್ತಾನೆ: ನಾನೇ ರಾಜ. ಭೂಮಿಯ ರಾಜರುಗಳು ಎಲ್ಲಿದ್ದಾರೆ?

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಅಲ್ಲಾಹು ಭೂಮಿಯನ್ನು ಮುಷ್ಠಿಯಲ್ಲಿ ಹಿಡಿಯುತ್ತಾನೆ ಮತ್ತು ಆಕಾಶಗಳನ್ನು ಬಲಗೈಯಿಂದ ಸುರುಳಿಯಾಗಿ ಮಡಚುತ್ತಾನೆ. ನಂತರ ಹೇಳುತ್ತಾನೆ: ನಾನೇ ರಾಜ. ಭೂಮಿಯ ರಾಜರುಗಳು ಎಲ್ಲಿದ್ದಾರೆ?"

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಪುನರುತ್ಥಾನ ದಿನದಂದು ಅಲ್ಲಾಹು ಭೂಮಿಯನ್ನು ಮುಷ್ಠಿಯಲ್ಲಿ ಹಿಡಿಯುತ್ತಾನೆ ಮತ್ತು ಆಕಾಶವನ್ನು ತನ್ನ ಬಲಗೈಯಿಂದ ಒಂದರ ಮೇಲೊಂದರಂತೆ ಸುರುಳಿಯಾಗಿ ಮಡಚುತ್ತಾನೆ. ನಂತರ ಅವುಗಳನ್ನು ನಾಶ ಮಾಡುತ್ತಾನೆ. ನಂತರ ಅವನು ಘೋಷಿಸುತ್ತಾನೆ: "ನಾನೇ ರಾಜ, ಭೂಮಿಯ ರಾಜರುಗಳು ಎಲ್ಲಿದ್ದಾರೆ?!"

فوائد الحديث

ಅಲ್ಲಾಹನ ಸಾರ್ವಭೌಮತ್ವವು ಶಾಶ್ವತವಾಗಿದೆ ಮತ್ತು ಇತರರ ಅಧಿಕಾರವು ಕ್ಷಣಿಕವಾಗಿದೆ ಎಂದು ನೆನಪಿಸಲಾಗಿದೆ.

ಅಲ್ಲಾಹನ ಮಹಿಮೆ, ಅಗಾಧ ಸಾಮರ್ಥ್ಯ, ಅಧಿಕಾರ ಮತ್ತು ಸಂಪೂರ್ಣ ಸಾರ್ವಭೌಮತ್ವವನ್ನು ತಿಳಿಸಲಾಗಿದೆ.

التصنيفات

Belief in Allah the Mighty and Majestic, ಅಂತ್ಯದಿನದಲ್ಲಿ ವಿಶ್ವಾಸವಿಡುವುದು, Oneness of Allah's Names and Attributes