Belief in Allah the Mighty and Majestic

Belief in Allah the Mighty and Majestic

10- ನಿಶ್ಚಯವಾಗಿಯೂ ಅಲ್ಲಾಹು ಒಳಿತು ಮತ್ತು ಕೆಡುಕುಗಳನ್ನು ದಾಖಲಿಸಿದನು. ನಂತರ ಅವುಗಳನ್ನು (ಹೀಗೆ) ವಿವರಿಸಿದನು: ಒಬ್ಬ ವ್ಯಕ್ತಿ ಒಂದು ಒಳಿತನ್ನು ಮಾಡಲು ಉದ್ದೇಶಿಸಿ ಅದನ್ನು ಮಾಡದಿದ್ದರೆ ಅಲ್ಲಾಹು ಅವನ ಹೆಸರಲ್ಲಿ ಒಂದು ಪೂರ್ಣ ಒಳಿತನ್ನು ದಾಖಲಿಸುವನು. ಅವನು ಒಂದು ಒಳಿತನ್ನು ಮಾಡಲು ಉದ್ದೇಶಿಸಿ ಅದನ್ನು ಮಾಡಿದರೆ, ಅಲ್ಲಾಹು ಅದರ ಪ್ರತಿಫಲವನ್ನು ಹತ್ತರಿಂದ ಏಳು ನೂರರವರೆಗೆ ಇಮ್ಮಡಿಗೊಳಿಸಿ, ಅಥವಾ ಅದಕ್ಕಿಂತಲೂ ಹೆಚ್ಚು ಪ್ರತಿಫಲವನ್ನು ದಾಖಲಿಸುವನು. ಒಬ್ಬ ವ್ಯಕ್ತಿ ಒಂದು ಕೆಡುಕನ್ನು ಮಾಡಲು ಉದ್ದೇಶಿಸಿ ಅದನ್ನು ಮಾಡದಿದ್ದರೆ ಅಲ್ಲಾಹು ಅವನ ಹೆಸರಲ್ಲಿ ಒಂದು ಪೂರ್ಣ ಒಳಿತನ್ನು ದಾಖಲಿಸುವನು. ಅವನು ಒಂದು ಕೆಡುಕನ್ನು ಮಾಡಲು ಉದ್ದೇಶಿಸಿ ಅದನ್ನು ಮಾಡಿದರೆ ಅಲ್ಲಾಹು ಅವನ ಹೆಸರಲ್ಲಿ ಒಂದು ಕೆಡುಕನ್ನು ಮಾತ್ರ ದಾಖಲಿಸುವನು

32- ಯಾವುದರ ಬಗ್ಗೆ ನಾವು ನಿಮಗೆ ನಿಷ್ಠೆಯ ಪ್ರತಿಜ್ಞೆ ಮಾಡಬೇಕು?" ಅವರು ಉತ್ತರಿಸಿದರು: "ನೀವು ಅಲ್ಲಾಹನನ್ನು ಮಾತ್ರ ಆರಾಧಿಸುತ್ತೀರಿ ಮತ್ತು ಅವನೊಂದಿಗೆ ಏನನ್ನೂ ಸಹಭಾಗಿಯಾಗಿ ಮಾಡುವುದಿಲ್ಲ, ನೀವು ಐದು ವೇಳೆಯ ನಮಾಝ್‌ಗಳನ್ನು ನಿರ್ವಹಿಸುತ್ತೀರಿ, ನೀವು ಅನುಸರಿಸುತ್ತೀರಿ, — ಮತ್ತು ಅವರು ರಹಸ್ಯವಾಗಿ ಹೇಳಿದರು — ಜನರಲ್ಲಿ ಏನನ್ನೂ ಬೇಡುವುದಿಲ್ಲ ಎಂದು ನಿಷ್ಠೆಯ ಪ್ರತಿಜ್ಞೆ ಮಾಡಬೇಕು

36- ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಅವರೊಡನೆ ಕೆಲವು ವಿಷಯಗಳ ಬಗ್ಗೆ ಮಾತನಾಡಿದರು. ಅವರು ಹೇಳಿದರು: "ಅಲ್ಲಾಹು ಮತ್ತು ತಾವು ಇಚ್ಛಿಸಿದ್ದು." ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಏನು ನೀವು ನನ್ನನ್ನು ಅಲ್ಲಾಹನಿಗೆ ಸಮಾನಗೊಳಿಸಿದ್ದೀರಾ? ಅಲ್ಲಾಹು ಮಾತ್ರ ಇಚ್ಛಿಸಿದ್ದು ಎಂದು ಹೇಳಿರಿ

45- ಶೈತಾನನು ನಿಮ್ಮಲ್ಲೊಬ್ಬನ ಬಳಿಗೆ ಬಂದು ಕೇಳುತ್ತಾನೆ: "ಇದನ್ನು ಸೃಷ್ಟಿಸಿದ್ದು ಯಾರು? ಇದನ್ನು ಸೃಷ್ಟಿಸಿದ್ದು ಯಾರು?" ಹೀಗೆ ಅವನು "ನಿನ್ನ ಪರಿಪಾಲಕನನ್ನು (ಅಲ್ಲಾಹನನ್ನು) ಸೃಷ್ಟಿಸಿದ್ದು ಯಾರು?" ಎಂದು ಕೇಳುವ ತನಕ ಮುಂದುವರಿಯುತ್ತಾನೆ. ಯಾರಿಗಾದರೂ ಇಂತಹ ಅನುಭವವಾದರೆ ಅವನು ಅಲ್ಲಾಹನಲ್ಲಿ ಅಭಯ ಯಾಚಿಸಿ ಅಲ್ಲಿಯೇ ನಿಂತುಬಿಡಲಿ