ಅವರ ಕರ್ಮಗಳು ಎಷ್ಟೇ ಕಡಿಮೆಯಾಗಿದ್ದರೂ ಸಹ ಅಲ್ಲಾಹು ಅವರನ್ನು ಸ್ವರ್ಗಕ್ಕೆ ಪ್ರವೇಶ ಮಾಡಿಸುವನು

ಅವರ ಕರ್ಮಗಳು ಎಷ್ಟೇ ಕಡಿಮೆಯಾಗಿದ್ದರೂ ಸಹ ಅಲ್ಲಾಹು ಅವರನ್ನು ಸ್ವರ್ಗಕ್ಕೆ ಪ್ರವೇಶ ಮಾಡಿಸುವನು

ಉಬಾದ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ, ಅವನು ಏಕೈಕನು ಮತ್ತು ಸಹಭಾಗಿಗಳಿಲ್ಲದವನು, ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರು ಅವನ ದಾಸ ಮತ್ತು ಸಂದೇಶವಾಹಕರಾಗಿದ್ದಾರೆ, ಯೇಸು (ಅವರ ಮೇಲೆ ಶಾಂತಿಯಿರಲಿ) ಅಲ್ಲಾಹನ ದಾಸರು, ಸಂದೇಶವಾಹಕರು ಮತ್ತು ಅಲ್ಲಾಹು ಮರ್ಯಮರಿಗೆ ಹಾಕಿಕೊಟ್ಟ ಅವನ ವಚನ ಮತ್ತು ಅವನ ವತಿಯ ಆತ್ಮವಾಗಿದ್ದಾರೆ, ಸ್ವರ್ಗ ಸತ್ಯವಾಗಿದೆ, ನರಕ ಸತ್ಯವಾಗಿದೆ ಎಂದು ಯಾರಾದರೂ ಸಾಕ್ಷ್ಯ ವಹಿಸಿದರೆ, ಅವರ ಕರ್ಮಗಳು ಎಷ್ಟೇ ಕಡಿಮೆಯಾಗಿದ್ದರೂ ಸಹ ಅಲ್ಲಾಹು ಅವರನ್ನು ಸ್ವರ್ಗಕ್ಕೆ ಪ್ರವೇಶ ಮಾಡಿಸುವನು."

[صحيح] [متفق عليه]

الشرح

ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಗೆ ತಿಳಿಸಿಕೊಡುವುದೇನೆಂದರೆ, ತೌಹೀದ್ (ಏಕದೇವತ್ವ) ನ ವಚನದ ಅರ್ಥವನ್ನು ತಿಳಿದು , ಅದು ಆವಶ್ಯಪಡುವ ಕರ್ಮಗಳನ್ನು ಮಾಡುತ್ತಾ ಅದನ್ನು ಉಚ್ಛರಿಸುವವರು, ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲ್ಲಾಹನ ದಾಸರು ಮತ್ತು ಸಂದೇಶವಾಹಕರೆಂದು ಸಾಕ್ಷ್ಯವಹಿಸುವವರು, ಯೇಸು (ಅವರ ಮೇಲೆ ಶಾಂತಿಯಿರಲಿ) ಅಲ್ಲಾಹನ ದಾಸರು ಮತ್ತು ಸಂದೇಶವಾಹಕರೆಂದು ಒಪ್ಪಿಕೊಳ್ಳುವವರು, ಅಲ್ಲಾಹು ಯೇಸುಕ್ರಿಸ್ತರನ್ನು "ಉಂಟಾಗು" ಎಂದು ಹೇಳುವ ಮೂಲಕ ಸೃಷ್ಟಿಸಿದನು ಮತ್ತು ಅವರು ಅಲ್ಲಾಹು ಸೃಷ್ಟಿಸಿದ ಆತ್ಮಗಳಲ್ಲಿ ಒಂದಾಗಿದ್ದಾರೆಂದು ನಂಬುವವರು, ಯಹೂದಿಗಳು ಆರೋಪಿಸಿದ ಆರೋಪಗಳಿಂದ ಅವರ ತಾಯಿ ಮುಕ್ತರಾಗಿದ್ದಾರೆಂದು ನಂಬುವವರು, ಸ್ವರ್ಗವು ಸತ್ಯವಾಗಿದೆ, ನರಕವು ಸತ್ಯವಾಗಿದೆ, ಅವರೆಡು ಈಗಾಗಲೇ ಅಸ್ತಿತ್ವದಲ್ಲಿವೆ ಮತ್ತು ಅವು ಅಲ್ಲಾಹನ ಅನುಗ್ರಹ ಮತ್ತು ಶಿಕ್ಷೆಯಾಗಿವೆಯೆಂದು ನಂಬುವವರು, ಮತ್ತು ಅದೇ ನಂಬಿಕೆಯಲ್ಲಿ ಮರಣವನ್ನಪ್ಪುವವರು ಯಾರೋ, ಅವರ ವಾಸಸ್ಥಳವು ಸ್ವರ್ಗವಾಗಿದೆ. ಅವರು ಅತಿಕಡಿಮೆ ಸತ್ಕರ್ಮವೆಸಗಿದವರು ಮತ್ತು ಕೆಲವು ಪಾಪಗಳನ್ನು ಮಾಡಿದವರಾಗಿದ್ದರೂ ಸಹ.

فوائد الحديث

ಅಲ್ಲಾಹು ಯೇಸುಕ್ರಿಸ್ತರನ್ನು (ಅವರ ಮೇಲೆ ಶಾಂತಿಯಿರಲಿ) ತಂದೆಯಿಲ್ಲದ ಸ್ಥಿತಿಯಲ್ಲಿ, ಕೇವಲ "ಉಂಟಾಗು" ಎಂಬ ವಚನದ ಮೂಲಕ ಸೃಷ್ಟಿಸಿದನು.

ಯೇಸು ಮತ್ತು ಮುಹಮ್ಮದ್ (ಅವರಿಬ್ಬರ ಮೇಲೂ ಶಾಂತಿಯಿರಲಿ) ಇಬ್ಬರೂ ಅಲ್ಲಾಹನ ದಾಸರು ಮತ್ತು ಸಂದೇಶವಾಹಕರಾಗಿದ್ದಾರೆಂದು ಹೇಳಲಾಗಿದೆ. ಆದ್ದರಿಂದ ಅವರಿಬ್ಬರೂ ಪ್ರವಾದಿಗಳಾಗಿದ್ದು ಅವರನ್ನು ನಿಷೇಧಿಸಬಾರದು ಮತ್ತು ಅವರಿಬ್ಬರೂ ಮನುಷ್ಯರಾಗಿದ್ದು ಅವರನ್ನು ಆರಾಧಿಸಬಾರದು.

ತೌಹೀದ್ (ಏಕದೇವತ್ವ) ನ ಶ್ರೇಷ್ಠತೆಯನ್ನು ಮತ್ತು ಅದು ಪಾಪಗಳನ್ನು ಅಳಿಸುತ್ತದೆಯೆಂದು ತಿಳಿಸಲಾಗಿದೆ. ಅದೇ ರೀತಿ, ಸತ್ಯವಿಶ್ವಾಸಿಗಳ ಅಂತಿಮ ವಾಸಸ್ಥಳವು ಸ್ವರ್ಗವಾಗಿದೆಯೆಂದು ತಿಳಿಸಲಾಗಿದೆ. ಅವರಿಂದ ಕೆಲವು ಪಾಪಗಳು ಸಂಭವಿಸಿದ್ದರೂ ಸಹ.

التصنيفات

Belief in Allah the Mighty and Majestic, ಅಂತ್ಯದಿನದಲ್ಲಿ ವಿಶ್ವಾಸವಿಡುವುದು, Descriptions of Paradise and Hell