ನಾಯಿ ಅಥವಾ ಚಿತ್ರವಿರುವ ಮನೆಗೆ ದೇವದೂತರು ಪ್ರವೇಶಿಸುವುದಿಲ್ಲ

ನಾಯಿ ಅಥವಾ ಚಿತ್ರವಿರುವ ಮನೆಗೆ ದೇವದೂತರು ಪ್ರವೇಶಿಸುವುದಿಲ್ಲ

ಅಬೂ ತಲ್ಹ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಾಯಿ ಅಥವಾ ಚಿತ್ರವಿರುವ ಮನೆಗೆ ದೇವದೂತರು ಪ್ರವೇಶಿಸುವುದಿಲ್ಲ."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ನಾಯಿ ಅಥವಾ ಆತ್ಮವಿರುವ ಜೀವಿಯ ಚಿತ್ರವಿರುವ ಮನೆಗೆ ದೇವದೂತರುಗಳು ಪ್ರವೇಶಿಸುವುದಿಲ್ಲ. ಏಕೆಂದರೆ, ಆತ್ಮವಿರುವ ಜೀವಿಯ ಚಿತ್ರವು ಕೆಟ್ಟ ಪಾಪವಾಗಿದ್ದು, ಅದು ಅಲ್ಲಾಹನ ಸೃಷ್ಟಿಯನ್ನು ಅನುಕರಿಸುವುದಾಗಿದೆ. ಅಷ್ಟೇ ಅಲ್ಲದೆ, ಅದು ದೇವ ಸಹಭಾಗಿತ್ವಕ್ಕೆ ಸಾಗಿಸುವ ಮಾರ್ಗಗಳಲ್ಲಿ ಒಂದಾಗಿದೆ. ಅವುಗಳಲ್ಲಿ ಕೆಲವು ಅಲ್ಲಾಹನ ಹೊರತಾಗಿ ಆರಾಧಿಸಲಾಗುವ ಚಿತ್ರಗಳಾಗಿವೆ. ನಾಯಿಯಿರುವ ಮನೆಗೆ ಅವರು ಪ್ರವೇಶಿಸದಿರಲು ಕಾರಣವೇನೆಂದರೆ, ಅವು ಅತಿ ಹೆಚ್ಚು ಹೊಲಸನ್ನು ಸೇವಿಸುತ್ತವೆ ಮತ್ತು ಅವುಗಳಲ್ಲಿ ಕೆಲವನ್ನು ಶೈತಾನ್ ಎಂದು ಕರೆಯಲಾಗಿದೆ. ಮತ್ತು ದೇವದೂತರುಗಳು ಶೈತಾನರಿಗೆ ತದ್ವಿರುದ್ಧವಾಗಿದ್ದಾರೆ. ಅದೇ ರೀತಿ ನಾಯಿಗಳಿಗೆ ಕೆಟ್ಟ ವಾಸನೆಯಿದೆ. ದೇವದೂತರುಗಳು ಕೆಟ್ಟ ವಾಸನೆಯನ್ನು ಅಸಹ್ಯಪಡುತ್ತಾರೆ. ಆದ್ದರಿಂದಲೇ ನಾಯಿಗಳನ್ನು ಸಾಕುವುದನ್ನು ನಿಷೇಧಿಸಲಾಗಿದೆ. ಅವುಗಳನ್ನು ಸಾಕುವವರಿಗೆ ದೊರೆಯುವ ಶಿಕ್ಷೆಯೇನೆಂದರೆ ಅವರ ಮನೆಗಳಿಗೆ ಕರುಣೆಯ ದೇವದೂತರುಗಳು ಪ್ರವೇಶಿಸುವುದಿಲ್ಲ, ಅಲ್ಲಿ ನಮಾಝ್ ಮಾಡುವುದಿಲ್ಲ, ಅವರಿಗಾಗಿ ಕ್ಷಮೆಯಾಚನೆ ಮಾಡುವುದಿಲ್ಲ, ಅವರ ಮತ್ತು ಅವರ ಮನೆಯ ಸಮೃದ್ಧಿಗಾಗಿ ಪ್ರಾರ್ಥಿಸುವುದಿಲ್ಲ ಮತ್ತು ಅವರ ಮನೆಯಿಂದ ಶೈತಾನನ ಉಪದ್ರವಗಳನ್ನು ತೊಲಗಿಸುವುದಿಲ್ಲ.

فوائد الحديث

ಬೇಟೆಯಾಡಲು, ಕುರಿ ಕಾಯಲು ಅಥವಾ ಹೊಲವನ್ನು ಕಾಯಲು ಮುಂತಾದವುಗಳ ಹೊರತಾಗಿ ನಾಯಿ ಸಾಕುವುದನ್ನು ನಿಷೇಧಿಸಲಾಗಿದೆ.

ಚಿತ್ರಗಳನ್ನು ಇಟ್ಟುಕೊಳ್ಳುವುದು ಕೆಟ್ಟ ಅಭ್ಯಾಸವಾಗಿದ್ದು ದೇವದೂತರುಗಳು ಅಲ್ಲಿಂದ ದೂರವಿರುತ್ತಾರೆ. ಚಿತ್ರಗಳಿರುವ ಸ್ಥಳದಲ್ಲಿ ಅಲ್ಲಾಹನ ಕರುಣೆಯು ಇರುವುದಿಲ್ಲ. ಹಾಗೆಯೇ ನಾಯಿಯಿರುವ ಸ್ಥಳದಲ್ಲೂ ಕೂಡ.

ನಾಯಿ ಅಥವಾ ಚಿತ್ರಗಳಿರುವ ಮನೆಗಳನ್ನು ಪ್ರವೇಶಿಸದಿರುವುದು ಕರುಣೆಯ ದೇವದೂತರುಗಳು ಮಾತ್ರ. ಆದರೆ ಕಾವಲು ಕಾಯುವ ಮುಂತಾದ ನಿರ್ದಿಷ್ಟ ಕೆಲಸಗಳಿರುವ ದೇವದೂತರುಗಳು, ಉದಾಹರಣೆಗೆ, ಆತ್ಮವನ್ನು ವಶಪಡಿಸುವ ದೇವದೂತರು ಎಲ್ಲಾ ಮನೆಗಳನ್ನೂ ಪ್ರವೇಶಿಸುತ್ತಾರೆ.

ಗೋಡೆ ಮುಂತಾದವುಗಳಲ್ಲಿ ಆತ್ಮವಿರುವ ಜೀವಿಗಳ ಚಿತ್ರಗಳನ್ನು ತೂಗಿಸುವುದು ನಿಷಿದ್ಧವಾಗಿದೆ.

ಖತ್ತಾಬಿ ಹೇಳಿದರು: "ಸಾಕುವುದು ಅಥವಾ ಇಟ್ಟುಕೊಳ್ಳುವುದು ನಿಷೇಧಿಸಲಾಗಿರುವ ನಾಯಿ ಅಥವಾ ಚಿತ್ರಗಳಿರುವ ಮನೆಗಳನ್ನು ಮಾತ್ರ ದೇವದೂತರು ಪ್ರವೇಶಿಸುವುದಿಲ್ಲ. ಆದರೆ ಬೇಟೆ ನಾಯಿ, ಕುರಿ ಕಾಯುವ ನಾಯಿ, ಹೊಲ ಕಾಯುವ ನಾಯಿ ಮುಂತಾದ ಸಾಕುವುದು ನಿಷೇಧಿಸದ ನಾಯಿಗಳನ್ನು, ಹಾಗೂ ತುಳಿಯಬಹುದಾದ ರೀತಿಯಲ್ಲಿರುವ ಜಮಾಖಾನೆ, ದಿಂಬುಗಳಲ್ಲಿರುವ ಚಿತ್ರಗಳನ್ನು ಹೊಂದಿರುವ ಮನೆಗಳನ್ನು ಪ್ರವೇಶಿಸದಂತೆ ಅವು ದೇವದೂತರುಗಳನ್ನು ತಡೆಯುವುದಿಲ್ಲ.

التصنيفات

Oneness of Allah's Worship