ನನಗೆ ಇಸ್ಲಾಮಿನ ಬಗ್ಗೆ, ನಿಮ್ಮ ಹೊರತು ಬೇರೆ ಯಾರಲ್ಲೂ ಕೇಳಬೇಕಾಗಿ ಬರದಂತಹ ಒಂದು ಮಾತನ್ನು ಹೇಳಿಕೊಡಿ." ಅವರು ಹೇಳಿದರು: "ನಾನು…

ನನಗೆ ಇಸ್ಲಾಮಿನ ಬಗ್ಗೆ, ನಿಮ್ಮ ಹೊರತು ಬೇರೆ ಯಾರಲ್ಲೂ ಕೇಳಬೇಕಾಗಿ ಬರದಂತಹ ಒಂದು ಮಾತನ್ನು ಹೇಳಿಕೊಡಿ." ಅವರು ಹೇಳಿದರು: "ನಾನು ಅಲ್ಲಾಹನಲ್ಲಿ ವಿಶ್ವಾಸವಿಟ್ಟಿದ್ದೇನೆ ಎಂದು ಹೇಳಿರಿ, ನಂತರ ದೃಢವಾಗಿ ನಿಲ್ಲಿರಿ

ಸುಫ್ಯಾನ್ ಬಿನ್ ಅಬ್ದುಲ್ಲಾ ಸಕಫಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ನಾನು ಕೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ನನಗೆ ಇಸ್ಲಾಮಿನ ಬಗ್ಗೆ, ನಿಮ್ಮ ಹೊರತು ಬೇರೆ ಯಾರಲ್ಲೂ ಕೇಳಬೇಕಾಗಿ ಬರದಂತಹ ಒಂದು ಮಾತನ್ನು ಹೇಳಿಕೊಡಿ." ಅವರು ಹೇಳಿದರು: "ನಾನು ಅಲ್ಲಾಹನಲ್ಲಿ ವಿಶ್ವಾಸವಿಟ್ಟಿದ್ದೇನೆ ಎಂದು ಹೇಳಿರಿ, ನಂತರ ದೃಢವಾಗಿ ನಿಲ್ಲಿರಿ."

[صحيح] [رواه مسلم وأحمد]

الشرح

ಸಹಾಬಿವರ್ಯರಾದ ಸುಫ್ಯಾನ್ ಬಿನ್ ಅಬ್ದುಲ್ಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಇಸ್ಲಾಂ ಧರ್ಮದ ಬಗ್ಗೆ ಬೇರೆ ಯಾರಲ್ಲೂ ಕೇಳಬೇಕಾಗಿಲ್ಲದಂತಹ ಸಮಗ್ರವಾದ ಒಂದು ಮಾತನ್ನು ಕಲಿಸಿಕೊಡಬೇಕೆಂದು ಪ್ರವಾದಿಯವರಲ್ಲಿ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿಕೊಂಡರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಾನು ಅಲ್ಲಾಹನನ್ನು ಏಕೈಕನೆಂದು ನಂಬಿ, ಅವನೇ ನನ್ನ ಪರಿಪಾಲಕ, ದೇವ, ಸೃಷ್ಟಿಕರ್ತ ಮತ್ತು ಯಾವುದೇ ಸಹಭಾಗಿಗಳಿಲ್ಲದ ನಿಜವಾದ ಆರಾಧ್ಯನೆಂದು ವಿಶ್ವಾಸವಿಟ್ಟಿದ್ದೇನೆ ಎಂದು ಹೇಳಿರಿ. ನಂತರ, ಅಲ್ಲಾಹು ಕಡ್ಡಾಯಗೊಳಿಸಿದ ಕಾರ್ಯಗಳನ್ನು ನಿರ್ವಹಿಸುವ ಮೂಲಕ ಮತ್ತು ಅವನು ನಿಷೇಧಿಸಿದ ಕಾರ್ಯಗಳಿಂದ ದೂರವಿರುವ ಮೂಲಕ ಅವನಿಗೆ ವಿಧೇಯರಾಗಿರಿ ಮತ್ತು ಇದೇ ಸ್ಥಿತಿಯಲ್ಲಿ ಮುಂದುವರಿಯಿರಿ."

فوائد الحديث

ಅಲ್ಲಾಹನಲ್ಲಿ, ಅವನ ಪ್ರಭುತ್ವದಲ್ಲಿ, ಅವನ ದೈವಿಕತೆಯಲ್ಲಿ ಮತ್ತು ಅವನ ಹೆಸರು ಹಾಗೂ ಗುಣಲಕ್ಷಣಗಳಲ್ಲಿ ವಿಶ್ವಾಸವಿಡುವುದು ಧರ್ಮದ ಅಡಿಪಾಯವಾಗಿದೆ.

ವಿಶ್ವಾಸವಿಟ್ಟ ಬಳಿಕ ದೃಢವಾಗಿ ನಿಲ್ಲುವುದು, ಆರಾಧನೆಗಳಲ್ಲಿ ಮುಂದುವರಿಯುವುದು ಮತ್ತು ಅದರಲ್ಲಿ ಸ್ಥಿರವಾಗಿರುವುದರ ಪ್ರಾಮುಖ್ಯತೆಯನ್ನು ತಿಳಿಸಲಾಗಿದೆ.

ಕರ್ಮಗಳು ಸ್ವೀಕಾರವಾಗಲು ವಿಶ್ವಾಸವು ಒಂದು ಷರತ್ತಾಗಿದೆ.

ಅಲ್ಲಾಹನಲ್ಲಿರುವ ವಿಶ್ವಾಸವು ಕಡ್ಡಾಯವಾಗಿ ವಿಶ್ವಾಸವಿಡಬೇಕಾದ ನಂಬಿಕೆಗಳು ಮತ್ತು ಅದರ ತತ್ವಗಳು, ಅದಕ್ಕೆ ಅನುಬಂಧಿತವಾಗಿರುವ ಹೃದಯ ಸಂಬಂಧಿತ ಕರ್ಮಗಳು, ಆಂತರಿಕವಾಗಿ ಮತ್ತು ಬಾಹ್ಯವಾಗಿ ಅಲ್ಲಾಹನಿಗೆ ಸಂಪೂರ್ಣ ಶರಣಾಗುವುದು ಮತ್ತು ಸಮರ್ಪಿಸಿಕೊಳ್ಳುವುದು ಮುಂತಾದವುಗಳನ್ನು ಒಳಗೊಂಡಿದೆ.

ದೃಢವಾಗಿ ನಿಲ್ಲುವುದು ಎಂದರೆ ಕಡ್ಡಾಯ ಕಾರ್ಯಗಳನ್ನು ನಿರ್ವಹಿಸುವ ಮೂಲಕ ಮತ್ತು ನಿಷೇಧಿಸಲಾದ ಕಾರ್ಯಗಳಿಂದ ದೂರವಿರುವ ಮೂಲಕ ನೇರ ಮಾರ್ಗಕ್ಕೆ ಸದಾ ಅಂಟಿಕೊಂಡಿರುವುದು.

التصنيفات

Belief in Allah the Mighty and Majestic, Purification of Souls