ಪುನರುತ್ಥಾನ ದಿನ ಜನರ ಪೈಕಿ ನನ್ನ ಶಿಫಾರಸ್ಸನ್ನು ಪಡೆಯುವ ಅತ್ಯಂತ ಸೌಭಾಗ್ಯವಂತನು ಯಾರೆಂದರೆ, ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ…

ಪುನರುತ್ಥಾನ ದಿನ ಜನರ ಪೈಕಿ ನನ್ನ ಶಿಫಾರಸ್ಸನ್ನು ಪಡೆಯುವ ಅತ್ಯಂತ ಸೌಭಾಗ್ಯವಂತನು ಯಾರೆಂದರೆ, ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯರಿಲ್ಲ ಎಂದು ತನ್ನ ಹೃದಯ ಮತ್ತು ಮನಸ್ಸಿನಿಂದ ನಿಷ್ಕಳಂಕವಾಗಿ ಹೇಳಿದವನು.”

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: “ಓ ಅಲ್ಲಾಹನ ಸಂದೇಶವಾಹಕರೇ! ಜನರ ಪೈಕಿ ಪುನರುತ್ಥಾನ ದಿನ ತಮ್ಮ ಶಿಫಾರಸ್ಸನ್ನು ಪಡೆಯುವ ಅತ್ಯಂತ ಸೌಭಾಗ್ಯವಂತನು ಯಾರು?” ಎಂದು ಕೇಳಲಾಯಿತು. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಓ ಅಬೂಹುರೈರ! ಹದೀಸಿನ ಬಗ್ಗೆ ತಮಗಿರುವ ಆಸಕ್ತಿಯನ್ನು ಕಂಡು ತಮಗಿಂತ ಮೊದಲು ಯಾರೂ ಈ ಹದೀಸಿನ ಬಗ್ಗೆ ಕೇಳಲಾರರು ಎಂದು ನಾನು ಭಾವಿಸಿದ್ದೆ. ಪುನರುತ್ಥಾನ ದಿನ ಜನರ ಪೈಕಿ ನನ್ನ ಶಿಫಾರಸ್ಸನ್ನು ಪಡೆಯುವ ಅತ್ಯಂತ ಸೌಭಾಗ್ಯವಂತನು ಯಾರೆಂದರೆ, ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯರಿಲ್ಲ ಎಂದು ತನ್ನ ಹೃದಯ ಮತ್ತು ಮನಸ್ಸಿನಿಂದ ನಿಷ್ಕಳಂಕವಾಗಿ ಹೇಳಿದವನು.”

[صحيح] [رواه البخاري]

الشرح

ಪುನರುತ್ಥಾನ ದಿನ ಜನರ ಪೈಕಿ ತನ್ನ ಶಿಫಾರಸ್ಸನ್ನು ಪಡೆಯುವ ಅತ್ಯಂತ ಸೌಭಾಗ್ಯವಂತನು ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯರಿಲ್ಲ, ಅಂದರೆ ಅಲ್ಲಾಹನ ಹೊರತು ಯಾವುದೇ ಸತ್ಯ ಆರಾಧ್ಯರಿಲ್ಲ ಎಂದು ತನ್ನ ಹೃದಯದಿಂದ ನಿಷ್ಕಳಂಕವಾಗಿ ಹೇಳಿದವನು ಮತ್ತು ಬಹುದೇವಾರಾಧನೆ ಹಾಗೂ ತೋರಿಕೆಯಿಂದ ಮುಕ್ತನಾಗಿರುವವನು ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುತ್ತಿದ್ದಾರೆ

فوائد الحديث

ಪರಲೋಕದಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಶಿಫಾರಸ್ಸು ಮಾಡುತ್ತಾರೆಂದು ಈ ಹದೀಸ್ ತಿಳಿಸುತ್ತದೆ. ಆದರೆ, ಆ ಶಿಫಾರಸ್ಸು ಏಕದೇವ ವಿಶ್ವಾಸಿಗಳಿಗೆ ಮಾತ್ರ ಸೀಮಿತವಾಗಿದೆ.

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಶಿಫಾರಸ್ಸು ಎಂದರೆ ನರಕಕ್ಕೆ ಅರ್ಹರಾದ ಏಕದೇವವಿಶ್ವಾಸಿಗಳನ್ನು ನರಕಕ್ಕೆ ಸೇರಿಸದಿರಲು ಮತ್ತು ಈಗಾಗಲೇ ನರಕದಲ್ಲಿರುವ ಏಕದೇವವಿಶ್ವಾಸಿಗಳನ್ನು ಅದರಿಂದ ಹೊರತರಲು ಅಲ್ಲಾಹನಲ್ಲಿ ಮಾಡುವ ಪ್ರಾರ್ಥನೆ.

ಅಲ್ಲಾಹನಿಗಾಗಿ ನಿಷ್ಕಳಂಕವಾಗಿ ಉಚ್ಛರಿಸಲಾದ ಏಕದೇವತ್ವದ ವಚನದ ಶ್ರೇಷ್ಠತೆ ಮತ್ತು ಅದರ ಅಮೋಘ ಪರಿಣಾಮವನ್ನು ಈ ಹದೀಸ್ ವಿವರಿಸುತ್ತದೆ.

ಏಕದೇವತ್ವದ ವಚನವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಎಂದರೆ ಅದರ ಅರ್ಥವನ್ನು ಕಲಿತು, ಅದರ ಬೇಡಿಕೆಗಳ ಪ್ರಕಾರ ಕರ್ಮವೆಸಗುವುದು.

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಶ್ರೇಷ್ಠತೆಯನ್ನು ಮತ್ತು ಜ್ಞಾನದ ಬಗ್ಗೆ ಅವರಿಗಿದ್ದ ಆಸಕ್ತಿಯನ್ನು ಈ ಹದೀಸ್ ತಿಳಿಸುತ್ತದೆ.

التصنيفات

Oneness of Allah's Worship