ನರಕದಲ್ಲಿ ಅತ್ಯಂತ ಕಡಿಮೆ ಶಿಕ್ಷೆ ಪಡೆಯುವವನೊಡನೆ ಪುನರುತ್ಥಾನ ದಿನದಂದು ಅಲ್ಲಾಹು ಕೇಳುವನು: "ಒಂದು ವೇಳೆ ಭೂಮಿಯಲ್ಲಿರುವ ಎಲ್ಲಾ…

ನರಕದಲ್ಲಿ ಅತ್ಯಂತ ಕಡಿಮೆ ಶಿಕ್ಷೆ ಪಡೆಯುವವನೊಡನೆ ಪುನರುತ್ಥಾನ ದಿನದಂದು ಅಲ್ಲಾಹು ಕೇಳುವನು: "ಒಂದು ವೇಳೆ ಭೂಮಿಯಲ್ಲಿರುವ ಎಲ್ಲಾ ವಸ್ತುಗಳು ನಿನ್ನ ವಶದಲ್ಲಿದ್ದರೆ ನೀನು ಅವುಗಳನ್ನು (ಶಿಕ್ಷೆಯಿಂದ ಪಾರಾಗಲು) ಪರಿಹಾರವಾಗಿ ನೀಡುತ್ತಿದ್ದೆಯಾ?" ಅವನು ಹೇಳುವನು: "ಹೌದು

ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನರಕದಲ್ಲಿ ಅತ್ಯಂತ ಕಡಿಮೆ ಶಿಕ್ಷೆ ಪಡೆಯುವವನೊಡನೆ ಪುನರುತ್ಥಾನ ದಿನದಂದು ಅಲ್ಲಾಹು ಕೇಳುವನು: "ಒಂದು ವೇಳೆ ಭೂಮಿಯಲ್ಲಿರುವ ಎಲ್ಲಾ ವಸ್ತುಗಳು ನಿನ್ನ ವಶದಲ್ಲಿದ್ದರೆ ನೀನು ಅವುಗಳನ್ನು (ಶಿಕ್ಷೆಯಿಂದ ಪಾರಾಗಲು) ಪರಿಹಾರವಾಗಿ ನೀಡುತ್ತಿದ್ದೆಯಾ?" ಅವನು ಹೇಳುವನು: "ಹೌದು".، ಆಗ ಅಲ್ಲಾಹು ಹೇಳುವನು: "ನೀನು ಆದಮರ ಬೆನ್ನೆಲುಬಿನಲ್ಲಿದ್ದಾಗ ನಾನು ನಿನ್ನಿಂದ ಇದಕ್ಕಿಂತಲೂ ಸುಲಭವಾದುದನ್ನು ಬಯಸಿದ್ದೆ - ಅಂದರೆ ನೀನು ನನ್ನೊಡನೆ ಯಾರನ್ನೂ ಸಹಭಾಗಿಯಾಗಿ ಮಾಡಬಾರದೆಂದು. ಆದರೆ ನೀನು ನನ್ನೊಂದಿಗೆ ಸಹಭಾಗಿತ್ವ ಮಾಡಲು ಹಟ ಹಿಡಿದು ನಿಂತೆ."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ನರಕದಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಶಿಕ್ಷೆ ಪಡೆಯುವವನು ನರಕಕ್ಕೆ ಪ್ರವೇಶಿಸಿದ ನಂತರ ಅಲ್ಲಾಹು ಅವನೊಡನೆ ಕೇಳುವನು: "ಇಹಲೋಕ ಮತ್ತು ಅದರಲ್ಲಿರುವುದೆಲ್ಲವೂ ನಿನ್ನ ವಶದಲ್ಲಿದ್ದರೆ, ಈ ಶಿಕ್ಷೆಯಿಂದ ಪಾರಾಗಲು ನೀನು ಅವುಗಳನ್ನು ಪರಿಹಾರವಾಗಿ ನೀಡುತ್ತಿದ್ದೆಯಾ?" ಅವನು ಹೇಳುವನು: "ಹೌದು." ಆಗ ಅಲ್ಲಾಹು ಹೇಳುವನು: "ನೀನು ಆದಮರ ಬೆನ್ನೆಲುಬಿನಲ್ಲಿದ್ದಾಗ ನಾನು ನಿನ್ನಿಂದ ಇದಕ್ಕಿಂತಲೂ ಸರಳವಾದುದನ್ನು ಬಯಸಿದ್ದೆ ಮತ್ತು ಆದೇಶಿಸಿದ್ದೆ - ಅಂದರೆ ನೀನು ನನ್ನೊಡನೆ ಯಾರನ್ನೂ ಸಹಭಾಗಿಯಾಗಿ ಮಾಡಬಾರದೆಂದು. ಆದರೆ ಇಹಲೋಕಕ್ಕೆ ಬಂದ ನಂತರ ನೀನು ನನ್ನೊಂದಿಗೆ ಸಹಭಾಗಿತ್ವ ಮಾಡಲು ಹಟ ಹಿಡಿದು ನಿಂತೆ."

فوائد الحديث

ಏಕದೇವವಿಶ್ವಾಸದ ಶ್ರೇಷ್ಠತೆಯನ್ನು ಮತ್ತು ಅದರ ಪ್ರಕಾರ ಜೀವಿಸುವುದು ಸುಲಭವಾಗಿದೆಯೆಂದು ತಿಳಿಸಲಾಗಿದೆ.

ಅಲ್ಲಾಹನೊಂದಿಗೆ ಸಹಭಾಗಿತ್ವ ಮಾಡುವುದರ ಅಪಾಯ ಮತ್ತು ಅದರ ದುರಂತ ಫಲದ ಬಗ್ಗೆ ಎಚ್ಚರಿಸಲಾಗಿದೆ.

ಮನುಷ್ಯರು ಅವರ ತಂದೆ ಆದಮರ ಬೆನ್ನೆಲುಬಿನಲ್ಲಿದ್ದಾಗ, ಸಹಭಾಗಿತ್ವ ಮಾಡಬಾರದೆಂದು ಅಲ್ಲಾಹು ಅವರಿಂದ ಕರಾರು ಪಡೆದುಕೊಂಡಿದ್ದನು.

ದೇವ ಸಹಭಾಗಿತ್ವದ (ಶಿರ್ಕ್) ಬಗ್ಗೆ ಹಾಗೂ ಪುನರುತ್ಥಾನ ದಿನದಂದು ಇಹಲೋಕ ಮತ್ತು ಅದರಲ್ಲಿರುವ ಯಾವುದೇ ವಸ್ತುಗಳು ಮನುಷ್ಯನಿಗೆ ಪ್ರಯೋಜನ ನೀಡುವುದಿಲ್ಲವೆಂದು ಎಚ್ಚರಿಸಲಾಗಿದೆ.

التصنيفات

Oneness of Allah's Worship