ನಾನು ಸಹಭಾಗಿಗಳ ಅಗತ್ಯದಿಂದ ಸಂಪೂರ್ಣ ಮುಕ್ತನಾಗಿರುವವನು. ಯಾರು ಒಂದು ಕರ್ಮವನ್ನು ಮಾಡಿ ಅದರಲ್ಲಿ ನನ್ನೊಂದಿಗೆ ಇತರರನ್ನು…

ನಾನು ಸಹಭಾಗಿಗಳ ಅಗತ್ಯದಿಂದ ಸಂಪೂರ್ಣ ಮುಕ್ತನಾಗಿರುವವನು. ಯಾರು ಒಂದು ಕರ್ಮವನ್ನು ಮಾಡಿ ಅದರಲ್ಲಿ ನನ್ನೊಂದಿಗೆ ಇತರರನ್ನು ಸಹಭಾಗಿಯಾಗಿ ಮಾಡುತ್ತಾನೋ, ನಾನು ಅವನನ್ನು ಮತ್ತು ಅವನ ಸಹಭಾಗಿತ್ವವನ್ನು ತೊರೆದು ಬಿಡುವೆನು

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ: ನಾನು ಸಹಭಾಗಿಗಳ ಅಗತ್ಯದಿಂದ ಸಂಪೂರ್ಣ ಮುಕ್ತನಾಗಿರುವವನು. ಯಾರು ಒಂದು ಕರ್ಮವನ್ನು ಮಾಡಿ ಅದರಲ್ಲಿ ನನ್ನೊಂದಿಗೆ ಇತರರನ್ನು ಸಹಭಾಗಿಯಾಗಿ ಮಾಡುತ್ತಾನೋ, ನಾನು ಅವನನ್ನು ಮತ್ತು ಅವನ ಸಹಭಾಗಿತ್ವವನ್ನು ತೊರೆದು ಬಿಡುವೆನು”.

[صحيح] [رواه مسلم]

الشرح

ಈ ಹದೀಸಿನಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಸರ್ವಶಕ್ತನಾದ ಅಲ್ಲಾಹು ಸಹಭಾಗಿಗಳ ಅಗತ್ಯದಿಂದ ಸಂಪೂರ್ಣ ಮುಕ್ತನಾಗಿದ್ದಾನೆ. ಅಂದರೆ, ಅವನಿಗೆ ಯಾವುದೇ ವ್ಯಕ್ತಿಯ ಅಥವಾ ವಸ್ತುವಿನ ಅಗತ್ಯವಿಲ್ಲ. (ಅವನು ಸಂಪೂರ್ಣ ನಿರಪೇಕ್ಷ). ಮನುಷ್ಯನು ಒಂದು ಒಳ್ಳೆಯ ಕಾರ್ಯವನ್ನು ಮಾಡಿ, ಅದನ್ನು ಅಲ್ಲಾಹನಿಗೂ ಇತರರಿಗೂ ಅರ್ಪಿಸಿದರೆ, ಅಲ್ಲಾಹು ಆ ಕಾರ್ಯವನ್ನು ಸ್ವೀಕರಿಸುವುದಿಲ್ಲ. ಅವನು ಅದನ್ನು ಆ ವ್ಯಕ್ತಿಗೇ ಮರಳಿಸಿಬಿಡುತ್ತಾನೆ. ಆದ್ದರಿಂದ, ನಾವು ಯಾವುದೇ ಕಾರ್ಯವನ್ನು ಮಾಡುವಾಗ ಅದನ್ನು ಅಲ್ಲಾಹನಿಗೆ ನಿಷ್ಕಳಂಕಗೊಳಿಸಬೇಕು. (ಅದರಿಂದ ಇತರ ಯಾರ ಸಂಪ್ರೀತಿಯನ್ನೂ ಬಯಸಬಾರದು). ಏಕೆಂದರೆ, ಅಲ್ಲಾಹನ ಸಂಪ್ರೀತಿಗಾಗಿ ಮಾತ್ರ ಮಾಡಿದ ಕಾರ್ಯವನ್ನಲ್ಲದೆ ಬೇರೆ ಯಾವ ಕಾರ್ಯವನ್ನೂ ಅವನು ಸ್ವೀಕರಿಸುವುದಿಲ್ಲ.

فوائد الحديث

ಈ ಹದೀಸಿನಲ್ಲಿ ಬಹುದೇವಾರಾಧನೆಯ ಬಗ್ಗೆ ಮತ್ತು ಅದರ ಎಲ್ಲಾ ವಿಧಗಳ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಕರ್ಮಗಳ ಸ್ವೀಕಾರಕ್ಕೆ ಅದು ಅಡ್ಡಿಯಾಗುತ್ತದೆಂದು ತಿಳಿಸಲಾಗಿದೆ.

ಈ ಹದೀಸಿನಿಂದ ಅಲ್ಲಾಹನ ನಿರಪೇಕ್ಷತೆ ಮತ್ತು ಮಹಿಮೆಯನ್ನು ತಿಳಿಯಬಹುದು. ಯಾವುದೇ ಕರ್ಮ ಮಾಡುವಾಗ ನಿಷ್ಕಳಂಕವಾಗಿರಲು ಈ ಜ್ಞಾನವು ನಮಗೆ ಸಹಾಯ ಮಾಡುತ್ತದೆ.

التصنيفات

Oneness of Allah's Worship, Acts of Heart