ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಅವರೊಡನೆ ಕೆಲವು ವಿಷಯಗಳ ಬಗ್ಗೆ…

ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಅವರೊಡನೆ ಕೆಲವು ವಿಷಯಗಳ ಬಗ್ಗೆ ಮಾತನಾಡಿದರು. ಅವರು ಹೇಳಿದರು: "ಅಲ್ಲಾಹು ಮತ್ತು ತಾವು ಇಚ್ಛಿಸಿದ್ದು." ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಏನು ನೀವು ನನ್ನನ್ನು ಅಲ್ಲಾಹನಿಗೆ ಸಮಾನಗೊಳಿಸಿದ್ದೀರಾ? ಅಲ್ಲಾಹು ಮಾತ್ರ ಇಚ್ಛಿಸಿದ್ದು ಎಂದು ಹೇಳಿರಿ

ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಅವರೊಡನೆ ಕೆಲವು ವಿಷಯಗಳ ಬಗ್ಗೆ ಮಾತನಾಡಿದರು. ಅವರು ಹೇಳಿದರು: "ಅಲ್ಲಾಹು ಮತ್ತು ತಾವು ಇಚ್ಛಿಸಿದ್ದು." ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಏನು ನೀವು ನನ್ನನ್ನು ಅಲ್ಲಾಹನಿಗೆ ಸಮಾನಗೊಳಿಸಿದ್ದೀರಾ? ಅಲ್ಲಾಹು ಮಾತ್ರ ಇಚ್ಛಿಸಿದ್ದು ಎಂದು ಹೇಳಿರಿ."

[إسناده حسن] [رواه ابن ماجه والنسائي في الكبرى وأحمد]

الشرح

ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ಯಾವುದೋ ವಿಷಯದ ಬಗ್ಗೆ ಮಾತನಾಡಿದರು. ನಂತರ ಹೇಳಿದರು: " "ಅಲ್ಲಾಹು ಮತ್ತು ತಾವು ಇಚ್ಛಿಸಿದ್ದು." ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆ ಮಾತಿಗೆ ಆಕ್ಷೇಪವೆತ್ತಿದರು. 'ಮತ್ತು' ಎಂಬ ಪದದ ಮೂಲಕ ಸೃಷ್ಟಿಗಳ ಇಚ್ಛೆ ಹಾಗೂ ಅಲ್ಲಾಹನ ಇಚ್ಛೆಯನ್ನು ಸೇರಿಸಿ ಹೇಳುವುದು ಸಣ್ಣ ಶಿರ್ಕ್ (ದೇವ ಸಹಭಾಗಿತ್ವ) ಆಗಿದ್ದು, ಮುಸಲ್ಮಾನನು ಆ ಮಾತನ್ನು ಹೇಳಬಾರದೆಂದು ತಿಳಿಸಿದರು. ನಂತರ, "ಅಲ್ಲಾಹು ಮಾತ್ರ ಇಚ್ಛಿಸಿದ್ದು" ಎಂಬ ಸತ್ಯವಾದ ಮಾತಿನ ಕಡೆಗೆ ಮಾರ್ಗದರ್ಶನ ಮಾಡಿದರು. ಇಚ್ಛಿಸುವ ವಿಷಯದಲ್ಲಿ ಅಲ್ಲಾಹು ಏಕಾಂಗಿಯಾಗಿದ್ದು, ಇತರ ಯಾರ ಇಚ್ಛೆಯನ್ನು ಅವನ ಇಚ್ಛೆಯೊಂದಿಗೆ ಸೇರಿಸಬಾರದು.

فوائد الحديث

"ಅಲ್ಲಾಹು ಇಚ್ಛಿಸಿದ್ದು ಮತ್ತು ತಾವು ಇಚ್ಛಿಸಿದ್ದು" ಮುಂತಾದ ದಾಸನ ಇಚ್ಛೆಯನ್ನು ಅಲ್ಲಾಹನ ಇಚ್ಛೆಯೊಂದಿಗೆ ಸೇರಿಸುವ ಯಾವುದೇ ಪದಗಳನ್ನು ಬಳಸುವುದು ನಿಷಿದ್ಧವಾಗಿದೆ. ಏಕೆಂದರೆ, ಅದು ಸಣ್ಣ ಶಿರ್ಕ್ (ದೇವ ಸಹಭಾಗಿತ್ವ) ಆಗಿದೆ.

ಕೆಡುಕನ್ನು ನಿರೋಧಿಸುವುದು ಕಡ್ಡಾಯವಾಗಿದೆ.

ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಏಕದೇವವಿಶ್ವಾಸವನ್ನು ರಕ್ಷಿಸಿದರು ಮತ್ತು ಬಹುದೇವವಿಶ್ವಾಸದ ಮಾರ್ಗವನ್ನು ಮುಚ್ಚಿದರು.

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಾಡಿ ತೋರಿಸಿದಂತೆ ಕೆಡುಕನ್ನು ವಿರೋಧಿಸುವಾಗ ಅದಕ್ಕೆ ಬದಲಿಯಾಗಿರುವ ಒಳಿತನ್ನು ತೋರಿಸಿಕೊಡಬೇಕಾಗಿದೆ.

ಈ ಹದೀಸ್‌ನಲ್ಲಿನ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿಕೆ "ಅಲ್ಲಾಹು ಮಾತ್ರ ಇಚ್ಛಿಸಿದ್ದು" ಮತ್ತು ಇನ್ನೊಂದು ಹದೀಸ್‌ನಲ್ಲಿನ "ಅಲ್ಲಾಹು ಇಚ್ಛಿಸಿದ್ದು, ನಂತರ ನೀವು ಇಚ್ಛಿಸಿದ್ದು ಎಂದು ಹೇಳಿರಿ" ಎಂಬ ಹೇಳಿಕೆಗಳನ್ನು ಸಂಯೋಜಿಸಿದರೆ, "ಅಲ್ಲಾಹು ಇಚ್ಛಿಸಿದ್ದು, ನಂತರ ನೀವು ಇಚ್ಛಿಸಿದ್ದು" ಎಂದು ಹೇಳುವುದು ಅನುಮತಿಸಲ್ಪಟ್ಟಿದೆಯಾದರೂ, "ಅಲ್ಲಾಹು ಮಾತ್ರ ಇಚ್ಛಿಸಿದ್ದು" ಎಂದು ಹೇಳುವುದು ಶ್ರೇಷ್ಠವಾಗಿದೆ.

"ಅಲ್ಲಾಹು ಇಚ್ಛಿಸಿದ್ದು, ನಂತರ ನೀವು ಇಚ್ಛಿಸಿದ್ದು" ಎಂದು ಹೇಳುವುದು ಅನುಮತಿಸಲ್ಪಟ್ಟಿದೆ. ಆದರೆ "ಅಲ್ಲಾಹು ಮಾತ್ರ ಇಚ್ಛಿಸಿದ್ದು" ಎಂದು ಹೇಳುವುದು ಶ್ರೇಷ್ಠವಾಗಿದೆ.

التصنيفات

Oneness of Allah's Worship