ಒಂಟೆಯ ಕೊರಳಲ್ಲಿ ಬಿಲ್ಲಿನ ತಂತಿಯಿಂದ ಮಾಡಿದ ಹಾರ ಅಥವಾ ಬೇರೆ ಯಾವುದೇ ಹಾರವಿದ್ದರೂ ಅದನ್ನು ಕತ್ತರಿಸದೆ ಬಿಟ್ಟು ಬಿಡಬೇಡ

ಒಂಟೆಯ ಕೊರಳಲ್ಲಿ ಬಿಲ್ಲಿನ ತಂತಿಯಿಂದ ಮಾಡಿದ ಹಾರ ಅಥವಾ ಬೇರೆ ಯಾವುದೇ ಹಾರವಿದ್ದರೂ ಅದನ್ನು ಕತ್ತರಿಸದೆ ಬಿಟ್ಟು ಬಿಡಬೇಡ

ಅಬೂ ಬಶೀರ್ ಅನ್ಸಾರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಒಂದು ಯಾತ್ರೆಯಲ್ಲಿ ಅವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಗಿದ್ದರು. ಆಗ ಜನರು ಮಲಗುವ ಸ್ಥಳದಲ್ಲಿದ್ದಾಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಬ್ಬ ದೂತನನ್ನು ಕಳುಹಿಸಿ ಹೇಳಿದರು: "ಒಂಟೆಯ ಕೊರಳಲ್ಲಿ ಬಿಲ್ಲಿನ ತಂತಿಯಿಂದ ಮಾಡಿದ ಹಾರ ಅಥವಾ ಬೇರೆ ಯಾವುದೇ ಹಾರವಿದ್ದರೂ ಅದನ್ನು ಕತ್ತರಿಸದೆ ಬಿಟ್ಟು ಬಿಡಬೇಡ."

[Sahih/Authentic.] [Al-Bukhari and Muslim]

الشرح

ಒಮ್ಮೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದು ಪ್ರಯಾಣದಲ್ಲಿದ್ದರು. ಆಗ ರಾತ್ರಿಯಲ್ಲಿ ಜನರು ಮಲಗಲು ತಮ್ಮ ಒಂಟೆಗಳಲ್ಲಿ ಮತ್ತು ಡೇರೆಗಳಲ್ಲಿದ್ದಾಗ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಬ್ಬ ದೂತನನ್ನು ಕಳುಹಿಸಿ, ಒಂಟೆಯ ಕೊರಳುಗಳಲ್ಲಿ ಕಟ್ಟಿರುವ ಹಾರಗಳನ್ನು, ಅವು ಬಿಲ್ಲಿನ ತಂತಿಯಿಂದ ಮಾಡಿದ ಹಾರವಾದರೂ ಅಥವಾ ಗಂಟೆ, ಚಪ್ಪಲಿಗಳ ಹಾರವಾದರೂ ಅವುಗಳನ್ನು ಕತ್ತರಿಸಬೇಕೆಂದು ಆದೇಶಿಸಿದರು. ಏಕೆಂದರೆ ಒಂಟೆಯನ್ನು ವಕ್ರ ದೃಷ್ಟಿಯಿಂದ ರಕ್ಷಿಸಿಕೊಳ್ಳಲು ಅವರು ಅವುಗಳನ್ನು ಕಟ್ಟುತ್ತಿದ್ದರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವುಗಳನ್ನು ಕತ್ತರಿಸಲು ಆದೇಶಿಸಿದರು. ಏಕೆಂದರೆ, ಅವು ಯಾವುದೇ ರಕ್ಷಣೆ ನೀಡುವುದಿಲ್ಲ. ಉಪಕಾರ ಮತ್ತು ತೊಂದರೆ ಮಾಡುವುದು ಅಲ್ಲಾಹು ಮಾತ್ರ. ಅವನಿಗೆ ಯಾವುದೇ ಸಹಭಾಗಿಗಳಿಲ್ಲ.

فوائد الحديث

ಲಾಭವನ್ನು ತರುವುದಕ್ಕಾಗಿ ಅಥವಾ ತೊಂದರೆಯನ್ನು ನಿವಾರಿಸುವುದಕ್ಕಾಗಿ ದಾರ, ಹಾರ ಮುಂತಾದವುಗಳನ್ನು ಕಟ್ಟುವುದು ನಿಷಿದ್ಧವೆಂದು ಈ ಹದೀಸ್ ತಿಳಿಸುತ್ತದೆ. ಏಕೆಂದರೆ ಅದು ಬಹುದೇವಾರಾಧನೆ (ಶಿರ್ಕ್) ಆಗಿದೆ.

ಪ್ರಾಣಿಗಳಿಗೆ ಅಲಂಕಾರವಾಗಿ, ಅಥವಾ ಅವುಗಳನ್ನು ಚಲಾಯಿಸಲು, ಅಥವಾ ಕಟ್ಟಿಹಾಕಲು ಬಿಲ್ಲಿನ ತಂತಿಯಲ್ಲದ ಬೇರೆ ಹಾರಗಳನ್ನು ಕಟ್ಟುವುದರಲ್ಲಿ ತೊಂದರೆಯಿಲ್ಲ.

ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಡುಕನ್ನು ವಿರೋಧಿಸುವುದು ಕಡ್ಡಾಯವಾಗಿದೆ ಎಂದು ಈ ಹದೀಸ್ ತಿಳಿಸುತ್ತದೆ.

ಹೃದಯವನ್ನು ಏಕೈಕನು ಮತ್ತು ಸಹಭಾಗಿಗಳಿಲ್ಲದವನಾದ ಅಲ್ಲಾಹನೊಡನೆ ಜೋಡಿಸುವುದು ಕಡ್ಡಾಯವಾಗಿದೆ ಎಂದು ಈ ಹದೀಸ್ ತಿಳಿಸುತ್ತದೆ.