ಯಾರು ಅಲ್ಲಾಹನ ಹೊರತಾಗಿ ಬೇರೆಯವರನ್ನು ಪ್ರಾರ್ಥಿಸುವ ಸ್ಥಿತಿಯಲ್ಲಿ ಸಾವನ್ನಪ್ಪುತ್ತಾರೋ ಅವರು ನರಕವನ್ನು ಪ್ರವೇಶಿಸುವರು

ಯಾರು ಅಲ್ಲಾಹನ ಹೊರತಾಗಿ ಬೇರೆಯವರನ್ನು ಪ್ರಾರ್ಥಿಸುವ ಸ್ಥಿತಿಯಲ್ಲಿ ಸಾವನ್ನಪ್ಪುತ್ತಾರೋ ಅವರು ನರಕವನ್ನು ಪ್ರವೇಶಿಸುವರು

ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದು ಮಾತನ್ನು ಹೇಳಿದರು ಮತ್ತು ನಾನು ಇನ್ನೊಂದು ಮಾತನ್ನು ಹೇಳಿದೆ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಯಾರು ಅಲ್ಲಾಹನ ಹೊರತಾಗಿ ಬೇರೆಯವರನ್ನು ಪ್ರಾರ್ಥಿಸುವ ಸ್ಥಿತಿಯಲ್ಲಿ ಸಾವನ್ನಪ್ಪುತ್ತಾರೋ ಅವರು ನರಕವನ್ನು ಪ್ರವೇಶಿಸುವರು.” [ಬುಖಾರಿ]. ನಾನು ಹೇಳಿದೆ: "ಯಾರು ಅಲ್ಲಾಹನ ಹೊರತಾಗಿ ಬೇರೆಯವರನ್ನು ಪ್ರಾರ್ಥಿಸದ ಸ್ಥಿತಿಯಲ್ಲಿ ಸಾವನ್ನಪ್ಪುತ್ತಾರೋ ಅವರು ಸ್ವರ್ಗವನ್ನು ಪ್ರವೇಶಿಸುವರು."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಯಾರು ಅಲ್ಲಾಹನಿಗೆ ಮಾತ್ರ ಕಡ್ಡಾಯವಾಗಿ ಅರ್ಪಿಸಬೇಕಾದುದನ್ನು ಅಲ್ಲಾಹನಲ್ಲದವರಿಗೆ ಅರ್ಪಿಸುತ್ತಾರೋ, ಅಂದರೆ ಅಲ್ಲಾಹೇತರರನ್ನು ಕರೆದು ಪ್ರಾರ್ಥಿಸುತ್ತಾರೋ, ಅಥವಾ ಅಲ್ಲಾಹೇತರರಲ್ಲಿ ಸಹಾಯಯಾಚನೆ ಮಾಡುತ್ತಾರೋ, ಅವರು (ಪಶ್ಚಾತ್ತಾಪಪಡದೆ) ಅದೇ ಸ್ಥಿತಿಯಲ್ಲಿ ಸಾವನ್ನಪ್ಪಿದರೆ, ಅವರು ನರಕವಾಸಿಗಳಲ್ಲಿ ಸೇರುತ್ತಾರೆ. ಇದಕ್ಕೆ ತಮ್ಮ ಮಾತನ್ನು ಸೇರಿಸುತ್ತಾ ಇಬ್ನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳುತ್ತಾರೆ: "ಯಾರು ಅಲ್ಲಾಹನ ಹೊರತಾಗಿ ಬೇರೆಯವರನ್ನು ಪ್ರಾರ್ಥಿಸದ ಸ್ಥಿತಿಯಲ್ಲಿ ಸಾವನ್ನಪ್ಪುತ್ತಾರೋ ಅವರ ಅಂತಿಮ ವಾಸಸ್ಥಳವು ಸ್ವರ್ಗವಾಗಿದೆ."

فوائد الحديث

ಪ್ರಾರ್ಥನೆಯು ಆರಾಧನೆಯಾಗಿದ್ದು ಅದನ್ನು ಅಲ್ಲಾಹನಿಗೆ ಮಾತ್ರ ಅರ್ಪಿಸಬೇಕಾಗಿದೆ.

ತೌಹೀದ್ (ಏಕದೇವತ್ವ) ನ ಶ್ರೇಷ್ಠತೆಯನ್ನು ಮತ್ತು ತೌಹೀದ್‌ನಲ್ಲಿ ಕೊನೆಯುಸಿರೆಳೆಯುವ ವ್ಯಕ್ತಿ, ಅವನ ಕೆಲವು ಪಾಪಗಳಿಗಾಗಿ ಶಿಕ್ಷೆಯನ್ನು ಪಡೆದರೂ ಸಹ, ಅಂತಿಮವಾಗಿ ಸ್ವರ್ಗವಾಸಿಯಾಗುತ್ತಾನೆಂದು ತಿಳಿಸಲಾಗಿದೆ.

ಶಿರ್ಕ್ (ದೇವಸಹಭಾಗಿತ್ವ) ನ ಅಪಾಯವನ್ನು ಮತ್ತು ಶಿರ್ಕ್‌ನಲ್ಲಿ ಸಾಯುವ ವ್ಯಕ್ತಿ ನರಕವಾಸಿಯಾಗಿದ್ದಾನೆಂದು ತಿಳಿಸಲಾಗಿದೆ.

التصنيفات

Oneness of Allah's Worship