ತಾಯಿತ ಕಟ್ಟಿದವನು ಶಿರ್ಕ್ (ದೇವ ಸಹಭಾಗಿತ್ವ) ಮಾಡಿದನು

ತಾಯಿತ ಕಟ್ಟಿದವನು ಶಿರ್ಕ್ (ದೇವ ಸಹಭಾಗಿತ್ವ) ಮಾಡಿದನು

ಉಕ್ಬ ಬಿನ್ ಆಮಿರ್ ಜುಹನಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಒಮ್ಮೆ ಒಂದು ಗುಂಪು ಜನರು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದರು. ಅವರು ಒಂಬತ್ತು ಮಂದಿಯಿಂದ ನಿಷ್ಠೆಯ ಪ್ರತಿಜ್ಞೆಯನ್ನು ಸ್ವೀಕರಿಸಿದರು. ಆದರೆ ಒಬ್ಬರಿಂದ ಅದನ್ನು ತಡೆಹಿಡಿದರು. ಅವರು ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ನೀವು ಒಂಬತ್ತು ಮಂದಿಯಿಂದ ನಿಷ್ಠೆಯ ಪ್ರತಿಜ್ಞೆ ಸ್ವೀಕರಿಸಿದಿರಿ. ಆದರೆ ಇವನನ್ನು ಬಿಟ್ಟಿರಲ್ಲವೇ?" ಅವರು ಹೇಳಿದರು: "ಅವನು ತಾಯಿತ ಧರಿಸಿದ್ದಾನೆ." ಆಗ ಆತ ಕೈಯನ್ನು ಒಳಗೆ ತೂರಿಸಿ ಅದನ್ನು ತುಂಡು ಮಾಡಿದನು. ಪ್ರವಾದಿಯವರು ಆತನಿಂದ ನಿಷ್ಠೆಯ ಪ್ರತಿಜ್ಞೆ ಸ್ವೀಕರಿಸುತ್ತಾ ಹೇಳಿದರು: "ತಾಯಿತ ಕಟ್ಟಿದವನು ಶಿರ್ಕ್ (ದೇವ ಸಹಭಾಗಿತ್ವ) ಮಾಡಿದನು."

[حسن] [رواه أحمد]

الشرح

ಒಮ್ಮೆ ಒಂದು ಗುಂಪು ಜನರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದರು. ಅವರು ಹತ್ತು ಮಂದಿಯಿದ್ದರು. ಅವರು ಒಂಬತ್ತು ಮಂದಿಯಿಂದ ಇಸ್ಲಾಮಿನ ನಿಷ್ಠೆ ಮತ್ತು ವಿಧೇಯತೆಯ ಪ್ರತಿಜ್ಞೆಯನ್ನು ಸ್ವೀಕರಿಸಿದರು. ಆದರೆ ಹತ್ತನೇ ವ್ಯಕ್ತಿಯಿಂದ ಅದನ್ನು ಸ್ವೀಕರಿಸಲಿಲ್ಲ. ಅದರ ಕಾರಣವನ್ನು ವಿಚಾರಿಸಿದಾಗ, ಅವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಅವನು ತಾಯಿತ ಧರಿಸಿದ್ದಾನೆ." ತಾಯಿತ ಎಂದರೆ ಕೆಟ್ಟ ದೃಷ್ಟಿ ಮತ್ತು ಉಪದ್ರವಗಳನ್ನು ದೂರೀಕರಿಸಲು ರಕ್ಷಾಕವಚ ಮುಂತಾದ ವಸ್ತುಗಳನ್ನು ಕಟ್ಟುವುದು ಅಥವಾ ತೂಗಿಸುವುದು. ಆ ವ್ಯಕ್ತಿ ತಾಯಿತ ಇರುವ ಸ್ಥಳಕ್ಕೆ ಕೈ ತೂರಿಸಿ, ಅದನ್ನು ತುಂಡು ಮಾಡಿ ಎಸೆದನು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವನಿಂದ ನಿಷ್ಠೆಯ ಪ್ರತಿಜ್ಞೆ ಸ್ವೀಕರಿಸಿ, ತಾಯಿತಗಳ ಬಗ್ಗೆ ಎಚ್ಚರಿಸುತ್ತಾ ಮತ್ತು ಅದರ ನಿಯಮವನ್ನು ವಿವರಿಸುತ್ತಾ ಹೇಳಿದರು: "ತಾಯಿತ ಕಟ್ಟಿದವನು ಶಿರ್ಕ್ (ದೇವ ಸಹಭಾಗಿತ್ವ) ಮಾಡಿದನು."

فوائد الحديث

ಯಾರು ಅಲ್ಲಾಹೇತರರ ಮೇಲೆ ಅವಲಂಬಿತರಾಗುತ್ತಾರೋ ಅವರೊಡನೆ ಅಲ್ಲಾಹು ಅವರ ಉದ್ದೇಶಕ್ಕೆ ವಿರುದ್ಧವಾಗಿ ವರ್ತಿಸುತ್ತಾನೆ.

ತಾಯಿತಗಳನ್ನು ಧರಿಸುವುದು ಉಪದ್ರವ ಮತ್ತು ಕೆಟ್ಟ ದೃಷ್ಟಿಗಳನ್ನು ದೂರೀಕರಿಸಲು ಕಾರಣವಾಗುತ್ತವೆ ಎಂದು ನಂಬುವುದು ಸಣ್ಣ ಶಿರ್ಕ್ (ದೇವ ಸಹಭಾಗಿತ್ವ) ಆಗಿದೆ. ಆದರೆ ಅವು ಸ್ವಯಂ (ಅಲ್ಲಾಹನ ಹಸ್ತಕ್ಷೇಪವಿಲ್ಲದೆ) ಪ್ರಯೋಜನ ನೀಡುತ್ತವೆ ಎಂದು ನಂಬಿದರೆ ಅದು ದೊಡ್ಡ ಶಿರ್ಕ್ (ದೇವ ಸಹಭಾಗಿತ್ವ) ಆಗಿದೆ.

التصنيفات

Oneness of Allah's Worship