ನಮ್ಮ ಮನಸ್ಸುಗಳಲ್ಲಿ ನಾವು ಮಾತನಾಡಲು ಭಯಪಡುವಂತಹ ಕೆಲವು ವಿಚಾರಗಳು ಮೂಡುತ್ತವೆ." ಅವರು ಕೇಳಿದರು: "ನೀವು ಅದನ್ನು (ಭಯವನ್ನು)…

ನಮ್ಮ ಮನಸ್ಸುಗಳಲ್ಲಿ ನಾವು ಮಾತನಾಡಲು ಭಯಪಡುವಂತಹ ಕೆಲವು ವಿಚಾರಗಳು ಮೂಡುತ್ತವೆ." ಅವರು ಕೇಳಿದರು: "ನೀವು ಅದನ್ನು (ಭಯವನ್ನು) ಅನುಭವಿಸಿದ್ದೀರಾ?" ಅವರು ಹೌದೆಂದು ಉತ್ತರಿಸಿದರು. ಅವರು ಹೇಳಿದರು: "ಅದು ನಿರ್ಮಲ ಸತ್ಯವಿಶ್ವಾಸವಾಗಿದೆ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಂಗಡಿಗರಲ್ಲಿ ಸೇರಿದ ಕೆಲವರು ಅವರ ಬಳಿಗೆ ಬಂದು ಹೇಳಿದರು: "ನಮ್ಮ ಮನಸ್ಸುಗಳಲ್ಲಿ ನಾವು ಮಾತನಾಡಲು ಭಯಪಡುವಂತಹ ಕೆಲವು ವಿಚಾರಗಳು ಮೂಡುತ್ತವೆ." ಅವರು ಕೇಳಿದರು: "ನೀವು ಅದನ್ನು (ಭಯವನ್ನು) ಅನುಭವಿಸಿದ್ದೀರಾ?" ಅವರು ಹೌದೆಂದು ಉತ್ತರಿಸಿದರು. ಅವರು ಹೇಳಿದರು: "ಅದು ನಿರ್ಮಲ ಸತ್ಯವಿಶ್ವಾಸವಾಗಿದೆ."

[صحيح] [رواه مسلم]

الشرح

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಂಗಡಿಗರಲ್ಲಿ ಒಂದು ಗುಂಪು ಜನರು ಅವರ ಬಳಿಗೆ ಬಂದು, ಅವರು ಮಾತನಾಡಲು ಭಯಪಡುವಂತಹ ಅತ್ಯಂತ ಮ್ಲೇಚ್ಛ ಮತ್ತು ಅಸಹ್ಯಕರ ವಿಚಾರಗಳು ಅವರ ಮನಸ್ಸುಗಳಲ್ಲಿ ಮೂಡುತ್ತವೆ ಎಂದು ಹೇಳಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀವು ಅನುಭವಿಸುತ್ತಿರುವುದು ನಿರ್ಮಲ ಸತ್ಯವಿಶ್ವಾಸ ಮತ್ತು ದೃಢ ವಿಶ್ವಾಸವನ್ನಾಗಿದೆ. ಶೈತಾನನು ನಿಮ್ಮ ಹೃದಯದಲ್ಲಿ ಹಾಕುತ್ತಿರುವ ದುರ್ಭೋದನೆಗಳನ್ನು ತಡಗಟ್ಟಲು ಅದು ನಿಮ್ಮನ್ನು ಉತ್ತೇಜಿಸುತ್ತದೆ ಮತ್ತು ನೀವು ಅದರ ಬಗ್ಗೆ ಮಾತನಾಡಲು ಭಯಪಡುವಂತೆ ಮಾಡುತ್ತದೆ. ಶೈತಾನನಿಗೆ ನಿಮ್ಮ ಹೃದಯಗಳ ಮೇಲೆ ಹತೋಟಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ಶೈತಾನನ ಹತೋಟಿಯಲ್ಲಿರುವ ಹೃದಯಗಳಲ್ಲಿ ಇಂತಹ ಅನುಭವವಾಗುವುದಿಲ್ಲ."

فوائد الحديث

ಸತ್ಯವಿಶ್ವಾಸಿಗಳಿಗೆ ಸಂಬಂಧಿಸಿ ಶೈತಾನನು ದುರ್ಬಲನಾಗಿದ್ದಾನೆಂದು ಈ ಹದೀಸ್ ವಿವರಿಸುತ್ತದೆ. ಏಕೆಂದರೆ ಅವನಿಗೆ ಸಾಧ್ಯವಾಗುವುದು ಅವರ ಮನಸ್ಸುಗಳಲ್ಲಿ ಕೆಲವು ದುರ್ವಿಚಾರಗಳನ್ನು ಮೂಡಿಸಲು ಮಾತ್ರ.

ಮನಸ್ಸಿನಲ್ಲಿ ಮೂಡುವ ದುರ್ವಿಚಾರಗಳನ್ನು ನಂಬಬಾರದು ಮತ್ತು ಸ್ವೀಕರಿಸಬಾರದೆಂದು ಈ ಹದೀಸ್ ತಿಳಿಸುತ್ತದೆ. ಏಕೆಂದರೆ ಅವೆಲ್ಲವೂ ಶೈತಾನನಿಂದಾಗಿವೆ.

ಶೈತಾನನ ದುರ್ಬೋಧನೆಗಳು ಸತ್ಯವಿಶ್ವಾಸಿಗೆ ಹಾನಿ ಮಾಡುವುದಿಲ್ಲ; ಆದರೂ ಆ ದುರ್ಭೋದನೆಗಳಿಂದ ರಕ್ಷಿಸಲು ಅಲ್ಲಾಹನಲ್ಲಿ ಅಭಯ ಯಾಚಿಸಬೇಕು ಮತ್ತು ಅವುಗಳನ್ನು ಮನಸ್ಸಿನಲ್ಲಿ ಮೆಲುಕು ಹಾಕುವುದನ್ನು ನಿಲ್ಲಿಸಬೇಕು.

ಧಾರ್ಮಿಕ ವಿಚಾರಗಳಲ್ಲಿ ಉಂಟಾಗುವ ಸಂಶಯಗಳ ಬಗ್ಗೆ ಮೌನವಾಗಿರುವುದು ಮುಸಲ್ಮಾನನಿಗೆ ಭೂಷಣವಲ್ಲ; ಅವುಗಳ ಬಗ್ಗೆ ವಿದ್ವಾಂಸರಲ್ಲಿ ಕೇಳಿ ತಿಳಿಯುವುದು ಕಡ್ಡಾಯವೆಂದು ಈ ಹದೀಸ್ ತಿಳಿಸುತ್ತದೆ.

التصنيفات

Belief in Allah the Mighty and Majestic, Increase and Decrease of Faith