إعدادات العرض
ಯಾವುದರ ಬಗ್ಗೆ ನಾವು ನಿಮಗೆ ನಿಷ್ಠೆಯ ಪ್ರತಿಜ್ಞೆ ಮಾಡಬೇಕು?" ಅವರು ಉತ್ತರಿಸಿದರು: "ನೀವು ಅಲ್ಲಾಹನನ್ನು ಮಾತ್ರ ಆರಾಧಿಸುತ್ತೀರಿ…
ಯಾವುದರ ಬಗ್ಗೆ ನಾವು ನಿಮಗೆ ನಿಷ್ಠೆಯ ಪ್ರತಿಜ್ಞೆ ಮಾಡಬೇಕು?" ಅವರು ಉತ್ತರಿಸಿದರು: "ನೀವು ಅಲ್ಲಾಹನನ್ನು ಮಾತ್ರ ಆರಾಧಿಸುತ್ತೀರಿ ಮತ್ತು ಅವನೊಂದಿಗೆ ಏನನ್ನೂ ಸಹಭಾಗಿಯಾಗಿ ಮಾಡುವುದಿಲ್ಲ, ನೀವು ಐದು ವೇಳೆಯ ನಮಾಝ್‌ಗಳನ್ನು ನಿರ್ವಹಿಸುತ್ತೀರಿ, ನೀವು ಅನುಸರಿಸುತ್ತೀರಿ, — ಮತ್ತು ಅವರು ರಹಸ್ಯವಾಗಿ ಹೇಳಿದರು — ಜನರಲ್ಲಿ ಏನನ್ನೂ ಬೇಡುವುದಿಲ್ಲ ಎಂದು ನಿಷ್ಠೆಯ ಪ್ರತಿಜ್ಞೆ ಮಾಡಬೇಕು
ಅಬೂ ಮುಸ್ಲಿಂ ಖೌಲಾನಿ ರಿಂದ ವರದಿ. ಅವರು ಹೇಳಿದರು: ನನ್ನ ಪ್ರೀತಿಪಾತ್ರರು ಮತ್ತು ವಿಶ್ವಸ್ಥರಾದ—ಏಕೆಂದರೆ ಅವರು ನನಗೆ ತುಂಬಾ ಇಷ್ಟ ಮತ್ತು ನನ್ನ ದೃಷ್ಟಿಯಲ್ಲಿ ಅವರು ತುಂಬಾ ವಿಶ್ವಸ್ಥರು—ಔಫ್ ಬಿನ್ ಮಾಲಿಕ್ ಅಶ್‌ಜಈ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳಿದರು: "ನಾವು ಒಂಬತ್ತು, ಎಂಟು ಅಥವಾ ಏಳು ಮಂದಿ ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಯಿದ್ದೆವು. ಆಗ ಅವರು ಕೇಳಿದರು: "ನೀವು ಅಲ್ಲಾಹನ ಸಂದೇಶವಾಹಕರಿಗೆ ನಿಷ್ಠೆಯ ಪ್ರತಿಜ್ಞೆ ಮಾಡುವುದಿಲ್ಲವೇ?" ನಾವು ಹೊಸದಾಗಿ ನಿಷ್ಠೆಯ ಪ್ರತಿಜ್ಞೆ ಮಾಡುವವರಾಗಿದ್ದೆವು. ಆದ್ದರಿಂದ ನಾವು ಹೇಳಿದೆವು: "ಓ ಅಲ್ಲಾಹನ ಸಂದೇಶವಾಹಕರೇ! ನಾವು ಈಗಾಗಲೇ ನಿಮಗೆ ನಿಷ್ಠೆಯ ಪ್ರತಿಜ್ಞೆ ಮಾಡಿದ್ದೇವೆ." ನಂತರ ಅವರು ಕೇಳಿದರು: "ನೀವು ಅಲ್ಲಾಹನ ಸಂದೇಶವಾಹಕರಿಗೆ ನಿಷ್ಠೆಯ ಪ್ರತಿಜ್ಞೆ ಮಾಡುವುದಿಲ್ಲವೇ?" ನಾವು ಹೇಳಿದೆವು: "ಓ ಅಲ್ಲಾಹನ ಸಂದೇಶವಾಹಕರೇ! ನಾವು ಈಗಾಗಲೇ ನಿಮಗೆ ನಿಷ್ಠೆಯ ಪ್ರತಿಜ್ಞೆ ಮಾಡಿದ್ದೇವೆ." ನಂತರ ಅವರು ಕೇಳಿದರು: "ನೀವು ಅಲ್ಲಾಹನ ಸಂದೇಶವಾಹಕರಿಗೆ ನಿಷ್ಠೆಯ ಪ್ರತಿಜ್ಞೆ ಮಾಡುವುದಿಲ್ಲವೇ?" ಆಗ ನಾವು ನಮ್ಮ ಕೈಗಳನ್ನು ಚಾಚಿ ಹೇಳಿದೆವು: "ಓ ಅಲ್ಲಾಹನ ಸಂದೇಶವಾಹಕರೇ! ನಾವು ಈಗಾಗಲೇ ನಿಮಗೆ ನಿಷ್ಠೆಯ ಪ್ರತಿಜ್ಞೆ ಮಾಡಿದ್ದೇವೆ. ಇನ್ನು ಯಾವುದರ ಬಗ್ಗೆ ನಾವು ನಿಮಗೆ ನಿಷ್ಠೆಯ ಪ್ರತಿಜ್ಞೆ ಮಾಡಬೇಕು?" ಅವರು ಉತ್ತರಿಸಿದರು: "ನೀವು ಅಲ್ಲಾಹನನ್ನು ಮಾತ್ರ ಆರಾಧಿಸುತ್ತೀರಿ ಮತ್ತು ಅವನೊಂದಿಗೆ ಏನನ್ನೂ ಸಹಭಾಗಿಯಾಗಿ ಮಾಡುವುದಿಲ್ಲ, ನೀವು ಐದು ವೇಳೆಯ ನಮಾಝ್‌ಗಳನ್ನು ನಿರ್ವಹಿಸುತ್ತೀರಿ, ನೀವು ಅನುಸರಿಸುತ್ತೀರಿ, — ಮತ್ತು ಅವರು ರಹಸ್ಯವಾಗಿ ಹೇಳಿದರು — ಜನರಲ್ಲಿ ಏನನ್ನೂ ಬೇಡುವುದಿಲ್ಲ ಎಂದು ನಿಷ್ಠೆಯ ಪ್ರತಿಜ್ಞೆ ಮಾಡಬೇಕು." ನಂತರ ನಾನು ಆ ಜನರನ್ನು ಯಾವ ರೀತಿ ನೋಡಿದೆನೆಂದರೆ, ಅವರಲ್ಲೊಬ್ಬನ ಚಾಟಿ ಕೆಳಗೆ ಬಿದ್ದರೂ ಅದನ್ನು ಹೆಕ್ಕಿ ಕೊಡಲು ಅವರು ಯಾರನ್ನೂ ಕೇಳುತ್ತಿರಲಿಲ್ಲ."
الترجمة
العربية বাংলা Bosanski English Español فارسی Français Bahasa Indonesia Tagalog Türkçe اردو 中文 हिन्दी Tiếng Việt සිංහල Hausa Kurdî Kiswahili Português Русский Svenska ગુજરાતી አማርኛ Yorùbá ئۇيغۇرچە پښتو অসমীয়া دری Кыргызча or Malagasy नेपाली Čeština Oromoo Română Nederlands Soomaali తెలుగు മലയാളം Српски ไทย mr Kinyarwanda Lietuviųالشرح
ಒಮ್ಮೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೆಲವು ಸಹಾಬಿಗಳ ಜೊತೆಯಲ್ಲಿದ್ದರು. ಆಗ ಅವರು ಅವರೊಂದಿಗೆ ನಿಷ್ಠೆಯ ಪ್ರತಿಜ್ಞೆ ಮಾಡಲು ಮತ್ತು ಈ ಕೆಳಗಿನ ವಿಷಯಗಳಿಗೆ ಬದ್ಧವಾಗಿರಲು ಮೂರು ಬಾರಿ ಕೇಳಿಕೊಂಡರು: ಮೊದಲನೆಯದಾಗಿ: ಅಲ್ಲಾಹನ ಆಜ್ಞೆಗಳನ್ನು ಪಾಲಿಸುತ್ತಾ ಮತ್ತು ಅವನ ನಿಷೇಧಗಳಿಂದ ದೂರವಿರುತ್ತಾ ಅವನನ್ನು ಮಾತ್ರ ಆರಾಧಿಸುವುದು ಹಾಗೂ ಅವನೊಂದಿಗೆ ಏನನ್ನೂ ಸಹಭಾಗಿಯಾಗಿ ಮಾಡದಿರುವುದು. ಎರಡನೆಯದಾಗಿ: ಪ್ರತಿ ದಿನ-ರಾತ್ರಿಯಲ್ಲಿ ಐದು ವೇಳೆಯ ಕಡ್ಡಾಯ ನಮಾಝ್‌ಗಳನ್ನು ಸಂಸ್ಥಾಪಿಸುವುದು. ಮೂರನೆಯದಾಗಿ: ಒಳಿತಿನ ಕಾರ್ಯಗಳಲ್ಲಿ ಮುಸಲ್ಮಾನರ ಮೇಲೆ ಆಡಳಿತ ವಹಿಸಿಕೊಂಡವರ ಮಾತುಗಳನ್ನು ಕೇಳುವುದು ಮತ್ತು ಅನುಸರಿಸುವುದು. ನಾಲ್ಕನೆಯದಾಗಿ: ಎಲ್ಲಾ ಬೇಡಿಕೆಗಳಿಗಾಗಿ ಅಲ್ಲಾಹನನ್ನು ಮಾತ್ರ ಅವಲಂಬಿಸುವುದು ಮತ್ತು ಜನರಲ್ಲಿ ಏನನ್ನೂ ಕೇಳದಿರುವುದು. ಇದನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಗುಟ್ಟಾಗಿ ಹೇಳಿದರು. ಸಹಾಬಿಗಳು (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಾವು ನಿಷ್ಠೆಯ ಪ್ರತಿಜ್ಞೆ ಮಾಡಿದ್ದನ್ನು ಅನುಸರಿಸಿದರು. ಎಲ್ಲಿಯವರೆಗೆಂದರೆ, ಹದೀಸಿನ ವರದಿಗಾರರು ಹೇಳಿದರು: ಆ ಸಹಾಬಿಗಳಲ್ಲಿ ಕೆಲವರನ್ನು ನಾನು ನೋಡಿದ್ದೇನೆ. ಅವರ ಚಾಟಿ ಕೆಳಗೆ ಬಿದ್ದರೂ ಅದನ್ನು ಹೆಕ್ಕಿ ಕೊಡಲು ಅವರು ಯಾರನ್ನೂ ಕೇಳುತ್ತಿರಲಿಲ್ಲ. ಬದಲಾಗಿ ಅವರೇ (ಮೃಗದ ಮೇಲಿಂದ) ಇಳಿದು ಅದನ್ನು ಹೆಕ್ಕಿಕೊಳ್ಳುತ್ತಿದ್ದರು.فوائد الحديث
ಜನರೊಡನೆ ಬೇಡುವುದನ್ನು ಬಿಟ್ಟುಬಿಡಲು, ಕೇಳುವುದು ಎಂಬ ಹೆಸರಿರುವ ಎಲ್ಲದರಿಂದಲೂ ದೂರವಿರಲು ಮತ್ತು ಒಂದು ಚಿಕ್ಕ ವಿಷಯದಲ್ಲಾದರೂ ಸಹ ಜನರಿಂದ ಸಂಪೂರ್ಣ ನಿರಪೇಕ್ಷರಾಗಲು ಪ್ರೋತ್ಸಾಹಿಸಲಾಗಿದೆ.
ಇಲ್ಲಿ ಇಹಲೋಕಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಕೇಳುವುದನ್ನು ಮಾತ್ರ ನಿಷೇಧಿಸಲಾಗಿದೆ. ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿದ ವಿಷಯಗಳನ್ನು ಕೇಳುವುದನ್ನು ನಿಷೇಧಿಸಲಾಗಿಲ್ಲ.
التصنيفات
Oneness of Allah's Worship