ಯಹೂದಿಗಳು ಮತ್ತು ಕ್ರೈಸ್ತರ ಮೇಲೆ ಅಲ್ಲಾಹನ ಶಾಪವಿರಲಿ. ಏಕೆಂದರೆ, ಅವರು ತಮ್ಮ ಪ್ರವಾದಿಗಳ ಸಮಾಧಿಗಳನ್ನು ಆರಾಧನಾ ಸ್ಥಳಗಳನ್ನಾಗಿ…

ಯಹೂದಿಗಳು ಮತ್ತು ಕ್ರೈಸ್ತರ ಮೇಲೆ ಅಲ್ಲಾಹನ ಶಾಪವಿರಲಿ. ಏಕೆಂದರೆ, ಅವರು ತಮ್ಮ ಪ್ರವಾದಿಗಳ ಸಮಾಧಿಗಳನ್ನು ಆರಾಧನಾ ಸ್ಥಳಗಳನ್ನಾಗಿ ಮಾಡಿಕೊಂಡರು

ಆಯಿಶ ಮತ್ತು ಅಬ್ದುಲ್ಲಾ ಬಿನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರಿಬ್ಬರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮರಣಶಯ್ಯೆಯಲ್ಲಿದ್ದಾಗ, ಅವರು ತಮ್ಮ ಮುಖವನ್ನು ಬಟ್ಟೆಯಿಂದ ಮುಚ್ಚತೊಡಗಿದರು. ಅವರಿಗೆ ಅದರಿಂದ ಸಂಕಟವಾಗುವಾಗ ಅದನ್ನು ಮುಖದಿಂದ ತೆಗೆಯುತ್ತಾ ಹೇಳುತ್ತಿದ್ದರು: "ಯಹೂದಿಗಳು ಮತ್ತು ಕ್ರೈಸ್ತರ ಮೇಲೆ ಅಲ್ಲಾಹನ ಶಾಪವಿರಲಿ. ಏಕೆಂದರೆ, ಅವರು ತಮ್ಮ ಪ್ರವಾದಿಗಳ ಸಮಾಧಿಗಳನ್ನು ಆರಾಧನಾ ಸ್ಥಳಗಳನ್ನಾಗಿ ಮಾಡಿಕೊಂಡರು." ಅವರು ಮಾಡಿದ ಕಾರ್ಯದ ಬಗ್ಗೆ ಪ್ರವಾದಿಯವರು ಎಚ್ಚರಿಸುತ್ತಿದ್ದರು.

[صحيح] [متفق عليه]

الشرح

ಇಲ್ಲಿ ಆಯಿಶ ಮತ್ತು ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ತಿಳಿಸುವುದೇನೆಂದರೆ, ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮರಣವು ಹತ್ತಿರವಾದಾಗ ಅವರು ತಮ್ಮ ಮುಖದ ಮೇಲೆ ಬಟ್ಟೆಯ ತುಂಡನ್ನು ಹಾಕುತ್ತಿದ್ದರು. ಮರಣದ ಕಡು ನೋವಿನಿಂದ ಉಸಿರಾಡಲು ಕಷ್ಟವಾಗುವಾಗ ಅದನ್ನು ಮುಖದಿಂದ ತೆಗೆಯುತ್ತಿದ್ದರು. ಆ ಕಠಿಣ ಪರಿಸ್ಥಿತಿಯಲ್ಲಿ ಅವರು ಹೇಳುತ್ತಿದ್ದರು: "ಯಹೂದಿಗಳು ಮತ್ತು ಕ್ರೈಸ್ತರ ಮೇಲೆ ಅಲ್ಲಾಹನ ಶಾಪವಿರಲಿ ಮತ್ತು ಅವನು ಅವರನ್ನು ತನ್ನ ದಯೆಯಿಂದ ದೂರವಿಡಲಿ. ಏಕೆಂದರೆ ಅವರು ತಮ್ಮ ಪ್ರವಾದಿಗಳ ಸಮಾಧಿಗಳ ಮೇಲೆ ಆರಾಧನಾಲಯಗಳನ್ನು ನಿರ್ಮಿಸಿದರು." ಈ ವಿಷಯವು ಅಷ್ಟೊಂದು ಅಪಾಯಕಾರಿಯಿಲ್ಲದಿದ್ದರೆ ಅವರು ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಅದರ ಬಗ್ಗೆ ಮಾತನಾಡುತ್ತಿರಲಿಲ್ಲ. ಅದು ಅಪಾಯಕಾರಿಯಾಗಿರುವುದರಿಂದಲೇ ಅವರು ಇಂತಹ ಕೃತ್ಯಗಳನ್ನು ಅನುಕರಣೆ ಮಾಡದಂತೆ ತಮ್ಮ ಸಮುದಾಯಕ್ಕೆ ಎಚ್ಚರಿಕೆ ನೀಡುತ್ತಿದ್ದರು. ಏಕೆಂದರೆ ಅದು ಯಹೂದಿಗಳು ಮತ್ತು ಕ್ರೈಸ್ತರ ಕೃತ್ಯಗಳಾಗಿದ್ದು, ಅದು ಅಲ್ಲಾಹನ ಜೊತೆ ಸಹಭಾಗಿತ್ವ (ಶಿರ್ಕ್) ಮಾಡುವುದಕ್ಕೆ ಕಾರಣವಾಗುತ್ತದೆ.

فوائد الحديث

ಅಲ್ಲಾಹನಿಗೆ ನಮಾಝ್ ಮಾಡುವುದಕ್ಕಾಗಿ ಪ್ರವಾದಿಗಳ ಮತ್ತು ಮಹಾಪುರುಷರ ಸಮಾಧಿಗಳ ಮೇಲೆ ಮಸೀದಿಗಳನ್ನು ನಿರ್ಮಿಸುವುದನ್ನು ವಿರೋಧಿಸಲಾಗಿದೆ. ಏಕೆಂದರೆ ಅದು ಶಿರ್ಕ್ (ದೇವಸಹಭಾಗಿತ್ವ) ಗೆ ಕಾರಣವಾಗುತ್ತದೆ.

ತೌಹೀದಿನ (ಏಕದೇವತ್ವ) ಬಗ್ಗೆ ಪ್ರವಾದಿಯರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇದ್ದ ತೀವ್ರ ಕಾಳಜಿಯನ್ನು ತಿಳಿಸಲಾಗಿದೆ. ಅವರು ಅದಕ್ಕೆ ಬಹಳ ಪ್ರಾಮುಖ್ಯತೆ ನೀಡುತ್ತಿದ್ದರು ಮತ್ತು ಸಮಾಧಿಗಳನ್ನು ಮಿತಿಮೀರಿ ಗೌರವಿಸುವುದರ ಬಗ್ಗೆ ಅತಿಯಾಗಿ ಭಯಪಡುತ್ತಿದ್ದರು. ಏಕೆಂದರೆ ಅದು ಶಿರ್ಕ್ (ದೇವಸಹಭಾಗಿತ್ವ) ಗೆ ಕಾರಣವಾಗುತ್ತದೆ.

ಯಹೂದಿಗಳನ್ನು ಮತ್ತು ಕ್ರೈಸ್ತರನ್ನು ಹಾಗೂ ಅವರ ಕೃತ್ಯಗಳನ್ನು ಅನುಕರಿಸಿ ಸಮಾಧಿಗಳ ಮೇಲೆ ಆರಾಧನಾಲಯಗಳನ್ನು ನಿರ್ಮಿಸುವವರನ್ನು ಶಪಿಸಲು ಅನುಮತಿಯಿದೆ.

ಸಮಾಧಿಗಳ ಮೇಲೆ ಕಟ್ಟಡಗಳನ್ನು ನಿರ್ಮಿಸುವುದು ಯಹೂದಿಗಳ ಮತ್ತು ಕ್ರೈಸ್ತರ ಸಂಪ್ರದಾಯವಾಗಿದೆ. ಅದನ್ನು ಅನುಕರಿಸುವುದನ್ನು ಈ ಹದೀಸಿನಲ್ಲಿ ವಿರೋಧಿಸಲಾಗಿದೆ.

ಮಸೀದಿಗಳನ್ನು ನಿರ್ಮಿಸಲಾಗಿರದಿದ್ದರೂ ಸಹ ಸಮಾಧಿಗಳ ಬಳಿ ಅಥವಾ ಅವುಗಳಿಗೆ ಮುಖ ಮಾಡಿ ನಮಾಝ್ ನಿರ್ವಹಿಸುವುದು ಸಮಾಧಿಗಳನ್ನು ಮಸೀದಿಗಳನ್ನಾಗಿ ಮಾಡುವುದರಲ್ಲಿ ಒಳಪಡುತ್ತದೆ.

التصنيفات

Oneness of Allah's Worship