إعدادات العرض
ಖಂಡಿತವಾಗಿಯೂ ಅಲ್ಲಾಹು ಒಬ್ಬ ದಾಸನನ್ನು ಪ್ರೀತಿಸಿದಾಗ, ಅವನು ಜಿಬ್ರೀಲ್ ರನ್ನು ಕರೆದು ಹೇಳುತ್ತಾನೆ: 'ಖಂಡಿತವಾಗಿಯೂ ನಾನು…
ಖಂಡಿತವಾಗಿಯೂ ಅಲ್ಲಾಹು ಒಬ್ಬ ದಾಸನನ್ನು ಪ್ರೀತಿಸಿದಾಗ, ಅವನು ಜಿಬ್ರೀಲ್ ರನ್ನು ಕರೆದು ಹೇಳುತ್ತಾನೆ: 'ಖಂಡಿತವಾಗಿಯೂ ನಾನು ಇಂಥವನನ್ನು ಪ್ರೀತಿಸುತ್ತೇನೆ, ಆದ್ದರಿಂದ ನೀನೂ ಅವನನ್ನು ಪ್ರೀತಿಸು'. ಅವರು (ಪ್ರವಾದಿ) ಹೇಳಿದರು: ಆಗ ಜಿಬ್ರೀಲ್ ಅವನನ್ನು ಪ್ರೀತಿಸುತ್ತಾರೆ
ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಖಂಡಿತವಾಗಿಯೂ ಅಲ್ಲಾಹು ಒಬ್ಬ ದಾಸನನ್ನು ಪ್ರೀತಿಸಿದಾಗ, ಅವನು ಜಿಬ್ರೀಲ್ ರನ್ನು ಕರೆದು ಹೇಳುತ್ತಾನೆ: 'ಖಂಡಿತವಾಗಿಯೂ ನಾನು ಇಂಥವನನ್ನು ಪ್ರೀತಿಸುತ್ತೇನೆ, ಆದ್ದರಿಂದ ನೀನೂ ಅವನನ್ನು ಪ್ರೀತಿಸು'. ಅವರು (ಪ್ರವಾದಿ) ಹೇಳಿದರು: ಆಗ ಜಿಬ್ರೀಲ್ ಅವನನ್ನು ಪ್ರೀತಿಸುತ್ತಾರೆ. ನಂತರ ಅವರು (ಜಿಬ್ರೀಲ್) ಆಕಾಶದಲ್ಲಿ ಕೂಗಿ ಹೇಳುತ್ತಾರೆ: 'ಖಂಡಿತವಾಗಿಯೂ ಅಲ್ಲಾಹು ಇಂಥವನನ್ನು ಪ್ರೀತಿಸುತ್ತಾನೆ, ಆದ್ದರಿಂದ ನೀವೂ ಅವನನ್ನು ಪ್ರೀತಿಸಿರಿ'. ಆಗ ಆಕಾಶದ ನಿವಾಸಿಗಳು (ದೇವದೂತರುಗಳು) ಅವನನ್ನು ಪ್ರೀತಿಸುತ್ತಾರೆ. ಅವರು (ಪ್ರವಾದಿ) ಹೇಳಿದರು: ನಂತರ ಭೂಮಿಯಲ್ಲಿ ಅವನಿಗಾಗಿ ಸ್ವೀಕಾರವನ್ನು ಇರಿಸಲಾಗುತ್ತದೆ. ಅವನು (ಅಲ್ಲಾಹು) ಒಬ್ಬ ದಾಸನನ್ನು ದ್ವೇಷಿಸಿದಾಗ, ಅವನು ಜಿಬ್ರೀಲ್ ಅವರನ್ನು ಕರೆದು ಹೇಳುತ್ತಾನೆ: 'ಖಂಡಿತವಾಗಿಯೂ ನಾನು ಇಂಥವನನ್ನು ದ್ವೇಷಿಸುತ್ತೇನೆ, ಆದ್ದರಿಂದ ನೀನೂ ಅವನನ್ನು ದ್ವೇಷಿಸು'. ಅವರು (ಪ್ರವಾದಿ) ಹೇಳಿದರು: ಆಗ ಜಿಬ್ರೀಲ್ ಅವನನ್ನು ದ್ವೇಷಿಸುತ್ತಾರೆ. ನಂತರ ಅವರು (ಜಿಬ್ರೀಲ್) ಆಕಾಶದ ನಿವಾಸಿಗಳಲ್ಲಿ ಕೂಗಿ ಹೇಳುತ್ತಾರೆ: 'ಖಂಡಿತವಾಗಿಯೂ ಅಲ್ಲಾಹು ಇಂಥವನನ್ನು ದ್ವೇಷಿಸುತ್ತಾನೆ, ಆದ್ದರಿಂದ ನೀವೂ ಅವನನ್ನು ದ್ವೇಷಿಸಿರಿ'. ಅವರು (ಪ್ರವಾದಿ) ಹೇಳಿದರು: ಆಗ ಅವರು (ಆಕಾಶದ ನಿವಾಸಿಗಳು) ಅವನನ್ನು ದ್ವೇಷಿಸುತ್ತಾರೆ. ನಂತರ ಭೂಮಿಯಲ್ಲಿ ಅವನಿಗಾಗಿ ದ್ವೇಷವನ್ನು ಇರಿಸಲಾಗುತ್ತದೆ".
الترجمة
العربية বাংলা Bosanski English Español فارسی Français Indonesia Русский Tagalog Türkçe اردو 中文 हिन्दी Tiếng Việt Kurdî Magyar ქართული සිංහල Kiswahili Română অসমীয়া ไทย Hausa Português मराठी دری አማርኛ ភាសាខ្មែរ Македонски Nederlands ગુજરાતી ਪੰਜਾਬੀ മലയാളംالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಅಲ್ಲಾಹು ಅವನ ಆದೇಶಗಳನ್ನು ಪಾಲಿಸುವ ಮತ್ತು ಅವನ ನಿಷೇಧಗಳಿಂದ ದೂರವಿರುವ ಸತ್ಯವಿಶ್ವಾಸಿ ದಾಸನನ್ನು ಪ್ರೀತಿಸಿದರೆ, ಜಿಬ್ರೀಲ್ ರನ್ನು ಕರೆದು ಹೇಳುತ್ತಾನೆ: ಸರ್ವಶಕ್ತನಾದ ಅಲ್ಲಾಹು ಇಂಥವನನ್ನು ಪ್ರೀತಿಸುತ್ತಾನೆ, ಆದ್ದರಿಂದ ನೀನೂ ಅವನನ್ನು ಪ್ರೀತಿಸು. ಆಗ ದೇವದೂತರುಗಳ ನಾಯಕರಾದ ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ) ಅವನನ್ನು ಪ್ರೀತಿಸುತ್ತಾರೆ. ನಂತರ ಜಿಬ್ರೀಲ್ ಆಕಾಶದ ದೇವದೂತರುಗಳನ್ನು ಕೂಗಿ ಕರೆದು ಹೇಳುತ್ತಾರೆ: ಖಂಡಿತವಾಗಿಯೂ ನಿಮ್ಮ ಪರಿಪಾಲಕನು ಇಂಥವನನ್ನು ಪ್ರೀತಿಸುತ್ತಾನೆ, ಆದ್ದರಿಂದ ನೀವೂ ಅವನನ್ನು ಪ್ರೀತಿಸಿರಿ. ಆಗ ಆಕಾಶದ ನಿವಾಸಿಗಳು ಅವನನ್ನು ಪ್ರೀತಿಸುತ್ತಾರೆ. ನಂತರ ಸತ್ಯವಿಶ್ವಾಸಿಗಳ ಹೃದಯಗಳಲ್ಲಿ ಅವನಿಗಾಗಿ ಪ್ರೀತಿ, ಅವನ ಕಡೆಗೆ ಒಲವು ಮತ್ತು ಅವನ ಬಗ್ಗೆ ಸಂತೃಪ್ತಿ ಮೂಡಿಸುವ ಮೂಲಕ ಸ್ವೀಕಾರವನ್ನು ಇರಿಸಲಾಗುತ್ತದೆ. ಮತ್ತು ಅಲ್ಲಾಹು ಒಬ್ಬ ದಾಸನನ್ನು ದ್ವೇಷಿಸಿದಾಗ, ಅವನು ಜಿಬ್ರೀಲ್ ರನ್ನು ಕರೆದು ಹೇಳುತ್ತಾನೆ: ನಾನು ಇಂಥವನನ್ನು ದ್ವೇಷಿಸುತ್ತೇನೆ, ಆದ್ದರಿಂದ ನೀನೂ ಅವನನ್ನು ದ್ವೇಷಿಸು. ಆಗ ಜಿಬ್ರೀಲ್ ಅವನನ್ನು ದ್ವೇಷಿಸುತ್ತಾರೆ. ನಂತರ ಜಿಬ್ರೀಲ್ ಆಕಾಶದ ನಿವಾಸಿಗಳನ್ನು ಕೂಗಿ ಕರೆದು ಹೇಳುತ್ತಾರೆ: ಖಂಡಿತವಾಗಿಯೂ ನಿಮ್ಮ ಪರಿಪಾಲಕನು ಇಂಥವನನ್ನು ದ್ವೇಷಿಸುತ್ತಾನೆ, ಆದ್ದರಿಂದ ನೀವೂ ಅವನನ್ನು ದ್ವೇಷಿಸಿರಿ. ಆಗ ಅವರು ಅವನನ್ನು ದ್ವೇಷಿಸುತ್ತಾರೆ. ನಂತರ ಸತ್ಯವಿಶ್ವಾಸಿಗಳ ಹೃದಯಗಳಲ್ಲಿ ಅವನಿಗಾಗಿ ದ್ವೇಷ ಮತ್ತು ಅಸಹ್ಯವನ್ನು ಇರಿಸಲಾಗುತ್ತದೆ.فوائد الحديث
ಅಬೂ ಮುಹಮ್ಮದ್ ಇಬ್ನ್ ಅಬೀ ಜಮ್ರಾ ಹೇಳುತ್ತಾರೆ: "ಈ ಆದೇಶವನ್ನು ಇತರ ದೇವದೂತರುಗಳಿಗಿಂತ ಮೊದಲು ಜಿಬ್ರೀಲ್ ರಿಗೆ ನೀಡುವುದು ಏಕೆಂದರೆ, ಅಲ್ಲಾಹನ ಬಳಿ ಇತರ ದೇವದೂತರುಗಳಿಗಿಂತ ಅವರಿಗೆ ಉನ್ನತ ಸ್ಥಾನಮಾನವಿದೆಯೆಂದು ಪ್ರಕಟಿಸುವುದಕ್ಕಾಗಿದೆ."
ಯಾರನ್ನು ಅಲ್ಲಾಹು ಪ್ರೀತಿಸುತ್ತಾನೋ, ಅವನನ್ನು ಆಕಾಶ ಮತ್ತು ಭೂಮಿಯ ನಿವಾಸಿಗಳು ಪ್ರೀತಿಸುತ್ತಾರೆ, ಮತ್ತು ಯಾರನ್ನು ಅಲ್ಲಾಹು ದ್ವೇಷಿಸುತ್ತಾನೋ, ಅವನನ್ನು ಆಕಾಶ ಮತ್ತು ಭೂಮಿಯ ನಿವಾಸಿಗಳು ದ್ವೇಷಿಸುತ್ತಾರೆ.
ಅಸ್ಸಿಂದಿ ಹೇಳುತ್ತಾರೆ: "ಮತ್ತು ಭೂಮಿಯಲ್ಲಿ ಅವನಿಗಾಗಿ ಸ್ವೀಕಾರವನ್ನು ಇರಿಸಲಾಗುತ್ತದೆ." ಇದು ಅವರನ್ನು ಎಲ್ಲರೂ ಸ್ವೀಕರಿಸುತ್ತಾರೆ ಎಂದು ಸೂಚಿಸಬೇಕೆಂದಿಲ್ಲ. ಬದಲಿಗೆ ಅಲ್ಲಾಹು ಭೂಮಿಯಲ್ಲಿ ಅವನಿಗೆ ಎಷ್ಟು ಸ್ವೀಕಾರವನ್ನು ಬಯಸಿದ್ದಾನೋ ಅಷ್ಟು ಇರುತ್ತದೆ. ಏಕೆಂದರೆ, ದುಷ್ಟರಿಗೆ ಸಜ್ಜನರೊಂದಿಗೆ ದ್ವೇಷವಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ.
ಎಲ್ಲಾ ರೀತಿಯ ಪುಣ್ಯ ಕಾರ್ಯಗಳನ್ನು, ಅವು ಕಡ್ಡಾಯವಾಗಿರಲಿ ಅಥವಾ ಸುನ್ನತ್ ಆಗಿರಲಿ, ಪೂರೈಸಲು ಪ್ರೋತ್ಸಾಹಿಸಲಾಗಿದೆ ಮತ್ತು ಪಾಪಗಳು ಹಾಗೂ ಬಿದ್ಅತ್‌ಗಳ ಬಗ್ಗೆ (ನವೀನಾಚರಣೆ) ಎಚ್ಚರಿಕೆ ನೀಡಲಾಗಿದೆ. ಏಕೆಂದರೆ ಅವು (ಅಲ್ಲಾಹನ) ಅಸಮಾಧಾನಕ್ಕೆ ಕಾರಣವಾಗುವ ಅಂಶಗಳಾಗಿವೆ.
ಇಬ್ನ್ ಹಜರ್ ಹೇಳುತ್ತಾರೆ: "ಜನರ ಹೃದಯಗಳಲ್ಲಿರುವ ಪ್ರೀತಿಯು ಅಲ್ಲಾಹನ ಪ್ರೀತಿಯ ಸಂಕೇತವಾಗಿದೆ ಎಂದು ಇದರಿಂದ ತಿಳಿಯಬಹುದು. ಜನಾಝಾಗಳ (ಅಂತ್ಯಕ್ರಿಯೆ) ಕುರಿತಾದ ಹದೀಸ್ ಇದನ್ನು ಬೆಂಬಲಿಸುತ್ತದೆ: "ನೀವು ಭೂಮಿಯಲ್ಲಿ ಅಲ್ಲಾಹನ ಸಾಕ್ಷಿಗಳಾಗಿದ್ದೀರಿ"."
ಇಬ್ನುಲ್-ಅರಬೀ ಅಲ್-ಮಾಲಿಕೀ ಹೇಳುತ್ತಾರೆ: "ಭೂಮಿಯ ನಿವಾಸಿಗಳು" ಎಂದರೆ ಅವನನ್ನು ತಿಳಿದಿರುವವರೇ ಹೊರತು, ಅವನನ್ನು ತಿಳಿಯದ ಮತ್ತು ಅವನ ಬಗ್ಗೆ ಕೇಳದವರಲ್ಲ."
