ನಿಶ್ಚಯವಾಗಿಯೂ ನಿಮ್ಮ ತಂದೆಯರ ಮೇಲೆ ಆಣೆ ಮಾಡುವುದನ್ನು ಸರ್ವಶಕ್ತನಾದ ಅಲ್ಲಾಹು ನಿಮಗೆ ವಿರೋಧಿಸುತ್ತಾನೆ

ನಿಶ್ಚಯವಾಗಿಯೂ ನಿಮ್ಮ ತಂದೆಯರ ಮೇಲೆ ಆಣೆ ಮಾಡುವುದನ್ನು ಸರ್ವಶಕ್ತನಾದ ಅಲ್ಲಾಹು ನಿಮಗೆ ವಿರೋಧಿಸುತ್ತಾನೆ

ಉಮರ್ ಬಿನ್ ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಶ್ಚಯವಾಗಿಯೂ ನಿಮ್ಮ ತಂದೆಯರ ಮೇಲೆ ಆಣೆ ಮಾಡುವುದನ್ನು ಸರ್ವಶಕ್ತನಾದ ಅಲ್ಲಾಹು ನಿಮಗೆ ವಿರೋಧಿಸುತ್ತಾನೆ." ಉಮರ್ ಹೇಳಿದರು: "ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇದನ್ನು ಹೇಳುವುದನ್ನು ಕೇಳಿದ ನಂತರ ನಾನು ಉದ್ದೇಶಪೂರ್ವಕವಾಗಿ ಅಥವಾ ಇತರರ ಮಾತನ್ನು ಉಲ್ಲೇಖಿಸಿ ಅವರ ಮೇಲೆ ಆಣೆ ಮಾಡಿಲ್ಲ."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ತಂದೆಯರ ಮೇಲೆ ಆಣೆ ಮಾಡುವುದನ್ನು ಸರ್ವಶಕ್ತನಾದ ಅಲ್ಲಾಹು ನಿಮಗೆ ವಿರೋಧಿಸುತ್ತಾನೆ. ಆದ್ದರಿಂದ, ಆಣೆ ಮಾಡಲು ಉದ್ದೇಶಿಸುವವರು ಅಲ್ಲಾಹನ ಮೇಲೆ ಮಾತ್ರ ಆಣೆ ಮಾಡಬೇಕು. ಇತರರ ಮೇಲೆ ಆಣೆ ಮಾಡಬಾರದು. ನಂತರ ಉಮರ್ ಬಿನ್ ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳುವುದೇನೆಂದರೆ, ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇದನ್ನು ವಿರೋಧಿಸುವುದನ್ನು ಕೇಳಿದ ನಂತರ, ಅವರು ಉದ್ದೇಶಪೂರ್ವಕವಾಗಿ ಅಥವಾ ಇತರರು ಅಲ್ಲಾಹೇತರರ ಮೇಲೆ ಆಣೆ ಮಾಡುವುದನ್ನು ಉಲ್ಲೇಖಿಸಿ ಅವರ ಮೇಲೆ ಆಣೆ ಮಾಡಿಲ್ಲ.

فوائد الحديث

ಅಲ್ಲಾಹನ ಹೊರತು ಬೇರೆಯವರ ಮೇಲೆ ಆಣೆ ಮಾಡುವುದನ್ನು ನಿಷೇಧಿಸಲಾಗಿದೆ. ಇಲ್ಲಿ ತಂದೆಯರ ಮೇಲೆ ಆಣೆ ಮಾಡುವುದನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿದ್ದೇಕೆಂದರೆ, ಅದು ಅಜ್ಞಾನಕಾಲದಲ್ಲಿ ಸಾಮಾನ್ಯವಾಗಿತ್ತು.

ಆಣೆ ಮಾಡುವುದು ಎಂದರೆ, ಯಾವುದೇ ಒಂದು ವಿಷಯವನ್ನು ದೃಢೀಕರಿಸುವುದಕ್ಕಾಗಿ ಅಲ್ಲಾಹನ ಮೇಲೆ ಅಥವಾ ಅವನ ಹೆಸರುಗಳ ಮೇಲೆ ಅಥವಾ ಅವನ ಗುಣಲಕ್ಷಣಗಳ ಮೇಲೆ ಪ್ರಮಾಣ ಮಾಡುವುದು.

ಆಜ್ಞೆಯನ್ನು ತಕ್ಷಣ ಅನುಸರಿಸುವುದು, ಉತ್ತಮ ಗ್ರಹಿಕೆ ಮತ್ತು ಧರ್ಮನಿಷ್ಠೆಯನ್ನು ಹೊಂದಿರುವ ಉಮರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಶ್ರೇಷ್ಠತೆಯನ್ನು ತಿಳಿಸಲಾಗಿದೆ.

التصنيفات

Oneness of Allah's Worship