ನಿಮ್ಮಲ್ಲಿ ಪ್ರತಿಯೊಬ್ಬರೊಂದಿಗೂ ಅಲ್ಲಾಹು ನೇರವಾಗಿ ಮಾತನಾಡುವನು. ಅಲ್ಲಾಹು ಮತ್ತು ಅವನ ನಡುವೆ ಯಾವುದೇ ಅನುವಾದಕನು ಇರುವುದಿಲ್ಲ

ನಿಮ್ಮಲ್ಲಿ ಪ್ರತಿಯೊಬ್ಬರೊಂದಿಗೂ ಅಲ್ಲಾಹು ನೇರವಾಗಿ ಮಾತನಾಡುವನು. ಅಲ್ಲಾಹು ಮತ್ತು ಅವನ ನಡುವೆ ಯಾವುದೇ ಅನುವಾದಕನು ಇರುವುದಿಲ್ಲ

ಅದೀ ಬಿನ್ ಹಾತಿಂ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮಲ್ಲಿ ಪ್ರತಿಯೊಬ್ಬರೊಂದಿಗೂ ಅಲ್ಲಾಹು ನೇರವಾಗಿ ಮಾತನಾಡುವನು. ಅಲ್ಲಾಹು ಮತ್ತು ಅವನ ನಡುವೆ ಯಾವುದೇ ಅನುವಾದಕನು ಇರುವುದಿಲ್ಲ. ಆಗ ಅವನು ತನ್ನ ಬಲಭಾಗಕ್ಕೆ ನೋಡುವನು. ಅಲ್ಲಿ ತಾನು ಮುಂದಕ್ಕೆ ಕಳುಹಿಸಿದ ಕರ್ಮಗಳಲ್ಲದೆ ಬೇರೇನೂ ಅವನು ಕಾಣುವುದಿಲ್ಲ. ಅವನು ತನ್ನ ಎಡಭಾಗಕ್ಕೆ ನೋಡುವನು. ಅಲ್ಲಿ ತಾನು ಮುಂದಕ್ಕೆ ಕಳುಹಿಸಿದ ಕರ್ಮಗಳಲ್ಲದೆ ಬೇರೇನೂ ಅವನು ಕಾಣುವುದಿಲ್ಲ. ಅವನು ತನ್ನ ಮುಂಭಾಗಕ್ಕೆ ನೋಡುವನು. ಅಲ್ಲಿ ಅವನು ತನ್ನ ಮುಂದೆ ನರಕವನ್ನಲ್ಲದೆ ಬೇರೇನೂ ಕಾಣುವುದಿಲ್ಲ. ಆದ್ದರಿಂದ ನೀವು ಒಂದು ತುಂಡು ಖರ್ಜೂರದ ಮೂಲಕವಾದರೂ ನಿಮ್ಮನ್ನು ನರಕದಿಂದ ಕಾಪಾಡಿಕೊಳ್ಳಿರಿ."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ ಪುನರುತ್ಥಾನ ದಿನದಂದು ಪ್ರತಿಯೊಬ್ಬ ಸತ್ಯವಿಶ್ವಾಸಿಯು ಅಲ್ಲಾಹನ ಮುಂದೆ ಏಕಾಂಗಿಯಾಗಿ ನಿಲ್ಲುವನು. ಅಲ್ಲಾಹು ಅವನೊಡನೆ ಯಾವುದೇ ಮಧ್ಯವರ್ತಿಯಿಲ್ಲದೆ ಮಾತನಾಡುವನು. ಅವನ ಮತ್ತು ಅಲ್ಲಾಹನ ನಡುವೆ ಯಾವುದೇ ಭಾಷಾಂತರಕಾರನು ಇರುವುದಿಲ್ಲ. ಆಗ ಅವನು ಭಯದಿಂದ ನಡುಗುತ್ತಾ ತನ್ನ ಎಡಕ್ಕೂ ಬಲಕ್ಕೂ ನೋಡುವನು. ಬಹುಶಃ ತನ್ನ ಮುಂಭಾಗದಲ್ಲಿರುವ ನರಕದಿಂದ ಪಾರಾಗಲು ಯಾವುದಾದರೂ ದಾರಿ ಕಾಣಬಹುದೋ ಎಂದು. ಅವನು ತನ್ನ ಎಡಭಾಗಕ್ಕೆ ನೋಡಿದಾಗ, ಅಲ್ಲಿ ತಾನು ಮುಂದಕ್ಕೆ ಕಳುಹಿಸಿದ ಸತ್ಕರ್ಮಗಳನ್ನಲ್ಲದೆ ಬೇರೇನೂ ಅವನು ಕಾಣುವುದಿಲ್ಲ. ಅವನು ತನ್ನ ಎಡಭಾಗಕ್ಕೆ ನೋಡಿದಾಗ, ಅಲ್ಲಿ ತಾನು ಮುಂದಕ್ಕೆ ಕಳುಹಿಸಿದ ದುಷ್ಕರ್ಮಗಳನ್ನಲ್ಲದೆ ಬೇರೇನೂ ಅವನು ಕಾಣುವುದಿಲ್ಲ. ಅವನು ತನ್ನ ಮುಂಭಾಗಕ್ಕೆ ನೋಡಿದಾಗ, ಅಲ್ಲಿ ನರಕವನ್ನಲ್ಲದೆ ಬೇರೇನೂ ಅವನು ಕಾಣುವುದಿಲ್ಲ. ಅದರಿಂದ ತಪ್ಪಿಸಿಕೊಳ್ಳಲು ಅವನಿಗೆ ಸಾಧ್ಯವಾಗುವುದಿಲ್ಲ. ಏಕೆಂದರೆ ಸಿರಾತ್ (ಸೇತುವೆ) ನ ಮೇಲೆ ಅವನು ಅನಿವಾರ್ಯವಾಗಿ ಚಲಿಸಬೇಕಾಗಿದೆ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: ನಿಮ್ಮ ಮತ್ತು ನರಕಾಗ್ನಿಯ ನಡುವೆ ದಾನ-ಧರ್ಮ ಮತ್ತು ಸತ್ಕರ್ಮದ ತಡೆಗೋಡೆಯನ್ನು ಕಟ್ಟಿರಿ. ಅದು ಅರ್ಧ ತುಂಡು ಖರ್ಜೂರವನ್ನು ದಾನ ಮಾಡುವ ಮೂಲಕವಾದರೂ ಸರಿ.

فوائد الحديث

ಸಣ್ಣ ರೂಪದಲ್ಲಾದರೂ ದಾನ ಮಾಡುವುದನ್ನು, ಪ್ರಶಂಸಾರ್ಹ ಗುಣಗಳನ್ನು ಅಳವಡಿಸಿಕೊಳ್ಳುವುದನ್ನು, ಸೌಮ್ಯವಾಗಿ ವ್ಯವಹರಿಸುವುದನ್ನು ಮತ್ತು ನಯವಾಗಿ ಮಾತನಾಡುವುದನ್ನು ಪ್ರೋತ್ಸಾಹಿಸಲಾಗಿದೆ.

ಪುನರುತ್ಥಾನ ದಿನದಂದು ಅಲ್ಲಾಹು ಮನುಷ್ಯನ ಸಮೀಪದಲ್ಲಿರುವನು. ಏಕೆಂದರೆ, ಅವನ ಮತ್ತು ಅಲ್ಲಾಹನ ನಡುವೆ ಯಾವುದೇ ಪರದೆ, ಮಧ್ಯವರ್ತಿ ಅಥವಾ ಅನುವಾದಕ ಇರುವುದಿಲ್ಲ. ಆದ್ದರಿಂದ ಸತ್ಯವಿಶ್ವಾಸಿಗಳು ಅಲ್ಲಾಹನ ಆಜ್ಞೆಗಳಿಗೆ ವಿರುದ್ಧವಾಗಿ ಸಾಗುವುದರ ಬಗ್ಗೆ ಎಚ್ಚರವಹಿಸಬೇಕಾಗಿದೆ.

ಮನುಷ್ಯನು ತಾನು ನೀಡುವ ದಾನವನ್ನು ಕ್ಷುಲ್ಲಕವಾಗಿ ಪರಿಗಣಿಸಬಾರದು. ಅದೊಂದು ಸಣ್ಣ ವಸ್ತುವಾದರೂ ಸಹ. ಏಕೆಂದರೆ, ಅದು ಅವನನ್ನು ನರಕದಿಂದ ಕಾಪಾಡುತ್ತದೆ.

التصنيفات

Oneness of Allah's Names and Attributes, Voluntary Charity