ಅವರು ಎಂತಹ ಜನರೆಂದರೆ, ಅವರಲ್ಲಿ ಒಬ್ಬ ನೀತಿವಂತ ದಾಸ ಅಥವಾ ಒಬ್ಬ ನೀತಿವಂತ ವ್ಯಕ್ತಿ ಮರಣಹೊಂದಿದರೆ, ಅವರು ಅವನ ಸಮಾಧಿಯ ಮೇಲೆ…

ಅವರು ಎಂತಹ ಜನರೆಂದರೆ, ಅವರಲ್ಲಿ ಒಬ್ಬ ನೀತಿವಂತ ದಾಸ ಅಥವಾ ಒಬ್ಬ ನೀತಿವಂತ ವ್ಯಕ್ತಿ ಮರಣಹೊಂದಿದರೆ, ಅವರು ಅವನ ಸಮಾಧಿಯ ಮೇಲೆ ಆರಾಧನಾಲಯವನ್ನು ನಿರ್ಮಿಸುತ್ತಿದ್ದರು

ಸತ್ಯವಿಶ್ವಾಸಿಗಳ ಮಾತೆ ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಒಮ್ಮೆ ಉಮ್ಮು ಸಲಮ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅಬಿಸೀನಿಯಾದಲ್ಲಿ ನೋಡಿದ ಮಾರಿಯ ಎಂಬ ಹೆಸರಿನ ಇಗರ್ಜಿಯ ಬಗ್ಗೆ ಮತ್ತು ಅದರಲ್ಲಿ ಅವರು ನೋಡಿದ ಚಿತ್ರಗಳ ಬಗ್ಗೆ ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಗಮನ ಸೆಳೆದಾಗ, ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅವರು ಎಂತಹ ಜನರೆಂದರೆ, ಅವರಲ್ಲಿ ಒಬ್ಬ ನೀತಿವಂತ ದಾಸ ಅಥವಾ ಒಬ್ಬ ನೀತಿವಂತ ವ್ಯಕ್ತಿ ಮರಣಹೊಂದಿದರೆ, ಅವರು ಅವನ ಸಮಾಧಿಯ ಮೇಲೆ ಆರಾಧನಾಲಯವನ್ನು ನಿರ್ಮಿಸುತ್ತಿದ್ದರು ಮತ್ತು ಅದರಲ್ಲಿ ಆ ಚಿತ್ರಗಳನ್ನು ರಚಿಸುತ್ತಿದ್ದರು. ಅವರು ಅಲ್ಲಾಹನ ದೃಷ್ಟಿಯಲ್ಲಿ ಸೃಷ್ಟಿಗಳಲ್ಲೇ ಅತ್ಯಂತ ನಿಕೃಷ್ಟರು."

[صحيح] [متفق عليه]

الشرح

ಸತ್ಯವಿಶ್ವಾಸಿಗಳ ಮಾತೆ ಉಮ್ಮು ಸಲಮ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಅಬಿಸೀನಿಯಾದಲ್ಲಿದ್ದಾಗ, ಅಲ್ಲಿ ಮಾರಿಯ ಎಂಬ ಹೆಸರಿನ ಇಗರ್ಜಿಯನ್ನು ನೋಡಿದ್ದನ್ನು, ಮತ್ತು ಅದರಲ್ಲಿನ ಚಿತ್ರಗಳು ಮತ್ತು ಅಲಂಕಾರಗಳನ್ನು ಕಂಡು ಆಶ್ಚರ್ಯಪಟ್ಟದ್ದನ್ನು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆ ಚಿತ್ರಗಳನ್ನು ರಚಿಸಿದ ಕಾರಣವನ್ನು ವಿವರಿಸಿದರು. ಅವರು ಹೇಳಿದರು: ನೀನು ಹೇಳಿದ ಆ ಜನರು ಎಂತಹವರೆಂದರೆ, ಅವರಲ್ಲಿ ಒಬ್ಬ ನೀತಿವಂತ ವ್ಯಕ್ತಿ ಮರಣಹೊಂದಿದರೆ, ಅವರು ಆತನ ಸಮಾಧಿಯ ಮೇಲೆ ಆರಾಧನಾಲಯವನ್ನು ನಿರ್ಮಿಸಿ ಆ ಚಿತ್ರಗಳನ್ನು ರಚಿಸುತ್ತಿದ್ದರು. ಅಂತಹ ಕೆಲಸಗಳನ್ನು ಮಾಡುವವರು ಅಲ್ಲಾಹನ ದೃಷ್ಟಿಯಲ್ಲಿ ಸೃಷ್ಟಿಗಳಲ್ಲೇ ಅತ್ಯಂತ ಕೆಟ್ಟವರು ಎಂದು ಅವರು ಸ್ಪಷ್ಟಪಡಿಸಿದರು. ಏಕೆಂದರೆ ಅವರ ಆ ಕೆಲಸವು ಶಿರ್ಕ್ (ಅಲ್ಲಾಹನೊಂದಿಗೆ ಸಹಭಾಗಿಗಳನ್ನು ಸೇರಿಸುವುದು) ಗೆ ಕಾರಣವಾಗುತ್ತದೆ.

فوائد الحديث

ಶಿರ್ಕ್‌ಗೆ ಕಾರಣವಾಗುವ ಎಲ್ಲಾ ಮಾರ್ಗಗಳನ್ನು ತಡೆಗಟ್ಟುವ ಉದ್ದೇಶದಿಂದ, ಸಮಾಧಿಗಳ ಮೇಲೆ ಮಸೀದಿಗಳನ್ನು ನಿರ್ಮಿಸುವುದು, ಸಮಾಧಿಗಳ ಬಳಿ ನಮಾಝ್ ಮಾಡುವುದು ಅಥವಾ ಮೃತದೇಹಗಳನ್ನು ಮಸೀದಿಗಳಲ್ಲಿ ದಫನ ಮಾಡುವುದು ಮುಂತಾದವುಗಳನ್ನು ನಿಷೇಧಿಸಲಾಗಿದೆ.

ಸಮಾಧಿಗಳ ಮೇಲೆ ಆರಾಧನಾಲಯಗಳನ್ನು ನಿರ್ಮಿಸುವುದು ಮತ್ತು ಅವುಗಳಲ್ಲಿ ಚಿತ್ರಗಳನ್ನು ಸ್ಥಾಪಿಸುವುದು ಯಹೂದಿಗಳು ಮತ್ತು ಕ್ರೈಸ್ತರ ಆಚರಣೆಯಾಗಿದೆ. ಅದನ್ನು ಮಾಡುವವರು ಅವರನ್ನು ಅನುಕರಿಸುತ್ತಿದ್ದಾರೆ.

ಜೀವಂತ ವಸ್ತುಗಳ ಚಿತ್ರಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ.

ಸಮಾಧಿಯ ಮೇಲೆ ಮಸೀದಿಯನ್ನು ನಿರ್ಮಿಸಿ, ಅದರಲ್ಲಿ ಚಿತ್ರಗಳನ್ನು ರಚಿಸುವವನು ಅಲ್ಲಾಹನ ದೃಷ್ಟಿಯಲ್ಲಿ ಸೃಷ್ಟಿಗಳಲ್ಲೇ ಅತ್ಯಂತ ನಿಕೃಷ್ಟನಾಗಿದ್ದಾನೆ.

ಶಿರ್ಕ್‌ಗೆ ಕಾರಣವಾಗಬಹುದಾದ ಎಲ್ಲಾ ಮಾರ್ಗಗಳನ್ನು ಮುಚ್ಚುವ ಮೂಲಕ ಇಸ್ಲಾಮಿ ಶರಿಯತ್ (ಧರ್ಮಶಾಸ್ತ್ರ) ತೌಹೀದ್ (ಏಕದೇವವಿಶ್ವಾಸ) ಗೆ ಸಂಪೂರ್ಣ ರಕ್ಷಣೆ ನೀಡಿದೆ.

ಮಹಾಪುರುಷರ ವಿಷಯದಲ್ಲಿ ಹದ್ದುಮೀರಿ ವರ್ತಿಸುವುದನ್ನು ನಿಷೇಧಿಸಲಾಗಿದೆ. ಏಕೆಂದರೆ ಅದು ಶಿರ್ಕ್‌ಗೆ ಕಾರಣವಾಗುತ್ತದೆ.

التصنيفات

Oneness of Allah's Worship, The rulings of mosques