ಕೆಲವು ಜನರಿಗೆ ಏನಾಗಿದೆ? ಅವರು ತಮ್ಮ ನಮಾಝ್‌ನಲ್ಲಿ ತಮ್ಮ ದೃಷ್ಟಿಗಳನ್ನು ಆಕಾಶದ ಕಡೆಗೆ ಏಕೆ ಎತ್ತುತ್ತಾರೆ?". ಆ ವಿಷಯದಲ್ಲಿ ಅವರು…

ಕೆಲವು ಜನರಿಗೆ ಏನಾಗಿದೆ? ಅವರು ತಮ್ಮ ನಮಾಝ್‌ನಲ್ಲಿ ತಮ್ಮ ದೃಷ್ಟಿಗಳನ್ನು ಆಕಾಶದ ಕಡೆಗೆ ಏಕೆ ಎತ್ತುತ್ತಾರೆ?". ಆ ವಿಷಯದಲ್ಲಿ ಅವರು ತೀಕ್ಷ್ಣವಾಗಿ ಮಾತನಾಡಿದರು. ಎಷ್ಟರವರೆಗೆಂದರೆ ಅವರು ಹೇಳಿದರು: "ಅವರು ಖಂಡಿತವಾಗಿಯೂ ಹಾಗೆ ಮಾಡುವುದನ್ನು ನಿಲ್ಲಿಸಬೇಕು, ಅಥವಾ ಖಂಡಿತವಾಗಿಯೂ ಅವರ ದೃಷ್ಟಿಗಳನ್ನು ಕಿತ್ತುಕೊಳ್ಳಲಾಗುವುದು

ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಕೆಲವು ಜನರಿಗೆ ಏನಾಗಿದೆ? ಅವರು ತಮ್ಮ ನಮಾಝ್‌ನಲ್ಲಿ ತಮ್ಮ ದೃಷ್ಟಿಗಳನ್ನು ಆಕಾಶದ ಕಡೆಗೆ ಏಕೆ ಎತ್ತುತ್ತಾರೆ?". ಆ ವಿಷಯದಲ್ಲಿ ಅವರು ತೀಕ್ಷ್ಣವಾಗಿ ಮಾತನಾಡಿದರು. ಎಷ್ಟರವರೆಗೆಂದರೆ ಅವರು ಹೇಳಿದರು: "ಅವರು ಖಂಡಿತವಾಗಿಯೂ ಹಾಗೆ ಮಾಡುವುದನ್ನು ನಿಲ್ಲಿಸಬೇಕು, ಅಥವಾ ಖಂಡಿತವಾಗಿಯೂ ಅವರ ದೃಷ್ಟಿಗಳನ್ನು ಕಿತ್ತುಕೊಳ್ಳಲಾಗುವುದು".

[صحيح] [رواه البخاري]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝ್‌ನಲ್ಲಿ ಪ್ರಾರ್ಥನೆ (ದುಆ) ಮಾಡುವಾಗ ಅಥವಾ ಬೇರೆ ಸಮಯದಲ್ಲಿ ತಮ್ಮ ದೃಷ್ಟಿಗಳನ್ನು ಆಕಾಶದ ಕಡೆಗೆ ಎತ್ತುವವರ ಬಗ್ಗೆ ಎಚ್ಚರಿಸಿದರು. ನಂತರ, ಹಾಗೆ ಮಾಡುವವರ ಬಗ್ಗೆ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಗದರಿಕೆ ಮತ್ತು ಎಚ್ಚರಿಕೆಯು ತೀವ್ರ ಸ್ವರೂಪ ಪಡೆಯಿತು. ಅವರಿಗೆ ತಿಳಿಯದಂತೆಯೇ ಅವರ ದೃಷ್ಟಿಗಳನ್ನು ಕಿತ್ತುಕೊಳ್ಳಲಾಗಬಹುದು ಮತ್ತು ಹಠಾತ್ತನೆ ನಿವಾರಿಸಲಾಗಬಹುದು ಮತ್ತು ಅವರು ದೃಷ್ಟಿ ಎಂಬ ಅನುಗ್ರಹವನ್ನು ಕಳೆದುಕೊಂಡು ಬಿಡುವರು ಎಂದು ಅವರು ಭಯಪಡಬೇಕಾಗಿದೆ.

فوائد الحديث

ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತಮ ಧರ್ಮಬೋಧನೆಯನ್ನು ಮತ್ತು ಸತ್ಯವನ್ನು ಸ್ಪಷ್ಟಪಡಿಸುವ ವಿಧಾನವನ್ನು ತಿಳಿಸಲಾಗಿದೆ. ಏಕೆಂದರೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಪ್ಪು ಮಾಡಿದವರನ್ನು ಹೆಸರೆತ್ತಿ ಹೇಳಲಿಲ್ಲ. ಏಕೆಂದರೆ ಉದ್ದೇಶವು ಸತ್ಯವನ್ನು ಸ್ಪಷ್ಟಪಡಿಸುವುದಾಗಿತ್ತು ಮತ್ತು ಅದು ಪೂರ್ಣವಾಗಿದೆ. ಏಕೆಂದರೆ ಹೀಗೆ ಮಾಡುವುದರಿಂದ ತಪ್ಪು ಮಾಡಿದವರನ್ನು ಮರೆಮಾಚಲಾಗುತ್ತದೆ ಮತ್ತು (ಸತ್ಯವನ್ನು) ಸ್ವೀಕರಿಸಲು ಹೆಚ್ಚು ಪ್ರೇರಣೆಯಾಗುತ್ತದೆ.

ನಮಾಝ್‌ನಲ್ಲಿ ದೃಷ್ಟಿಯನ್ನು ಆಕಾಶದ ಕಡೆಗೆ ಎತ್ತುವವನಿಗೆ ತೀವ್ರ ನಿಷೇಧ ಮತ್ತು ಉಗ್ರ ಎಚ್ಚರಿಕೆಯನ್ನು ನೀಡಲಾಗಿದೆ.

'ಔನುಲ್ ಮಅಬೂದ್' ಗ್ರಂಥದಲ್ಲಿ ಹೀಗೆ ಹೇಳಲಾಗಿದೆ: "ಇದರ ಹಿಂದಿನ ಕಾರಣವೇನೆಂದರೆ, ಅವನು ತನ್ನ ದೃಷ್ಟಿಯನ್ನು ಆಕಾಶದ ಕಡೆಗೆ ಎತ್ತಿದಾಗ, ಅವನು ಖಿಬ್ಲಾದ ದಿಕ್ಕಿನಿಂದ ಹೊರಬರುತ್ತಾನೆ ಮತ್ತು ಅದರಿಂದ ಹಾಗೂ ನಮಾಝ್‌ನ (ಸರಿಯಾದ) ಸ್ಥಿತಿಯಿಂದ ವಿಮುಖನಾಗುತ್ತಾನೆ."

ದೃಷ್ಟಿಯನ್ನು ಮೇಲೆತ್ತುವುದು ನಮಾಝ್‌ನ ಏಕಾಗ್ರತೆಗೆ ವಿರುದ್ಧವಾಗಿದೆ.

ನಮಾಝ್‌ನ ಮಹಾನ್ ಪ್ರಾಮುಖ್ಯತೆಯನ್ನು, ಮತ್ತು ನಮಾಝ್ ಮಾಡುವವನು ಅದರಲ್ಲಿ ಅಲ್ಲಾಹನೊಂದಿಗೆ ಪರಿಪೂರ್ಣ ಶಿಷ್ಟಾಚಾರವನ್ನು (ಅದಬ್) ಪಾಲಿಸುವುದು ಕಡ್ಡಾಯವಾಗಿದೆಯೆಂದು ತಿಳಿಸಲಾಗಿದೆ.

التصنيفات

Mistakes during Prayer