إعدادات العرض
ಖಂಡಿತವಾಗಿಯೂ ನಿಮ್ಮಲ್ಲೊಬ್ಬನು ಮರಣ ಹೊಂದಿದರೆ, (ಪರಲೋಕದಲ್ಲಿರುವ) ಅವನ ಸ್ಥಾನವನ್ನು ಅವನಿಗೆ ಬೆಳಿಗ್ಗೆ ಮತ್ತು ಸಂಜೆ…
ಖಂಡಿತವಾಗಿಯೂ ನಿಮ್ಮಲ್ಲೊಬ್ಬನು ಮರಣ ಹೊಂದಿದರೆ, (ಪರಲೋಕದಲ್ಲಿರುವ) ಅವನ ಸ್ಥಾನವನ್ನು ಅವನಿಗೆ ಬೆಳಿಗ್ಗೆ ಮತ್ತು ಸಂಜೆ ತೋರಿಸಲಾಗುತ್ತದೆ
ಅಬ್ದುಲ್ಲಾ ಬಿನ್ ಉಮರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಖಂಡಿತವಾಗಿಯೂ ನಿಮ್ಮಲ್ಲೊಬ್ಬನು ಮರಣ ಹೊಂದಿದರೆ, (ಪರಲೋಕದಲ್ಲಿರುವ) ಅವನ ಸ್ಥಾನವನ್ನು ಅವನಿಗೆ ಬೆಳಿಗ್ಗೆ ಮತ್ತು ಸಂಜೆ ತೋರಿಸಲಾಗುತ್ತದೆ. ಅವನು ಸ್ವರ್ಗವಾಸಿಗಳಲ್ಲಿ ಸೇರಿದವನಾಗಿದ್ದರೆ ಸ್ವರ್ಗದ (ಸ್ಥಾನವನ್ನು) ಮತ್ತು ನರಕವಾಸಿಗಳಲ್ಲಿ ಸೇರಿದವನಾಗಿದ್ದರೆ ನರಕದ ಸ್ಥಾನವನ್ನು ತೋರಿಸಲಾಗುತ್ತದೆ. ನಂತರ ಅವನಿಗೆ ಹೇಳಲಾಗುತ್ತದೆ: 'ಅಲ್ಲಾಹು ನಿನ್ನನ್ನು ಪುನರುತ್ಥಾನ ದಿನದಂದು ಎಬ್ಬಿಸುವವರೆಗೆ ಇದೇ ನಿನ್ನ ಸ್ಥಾನವಾಗಿದೆ' ".
الترجمة
العربية বাংলা Bosanski English Español فارسی Français Bahasa Indonesia Русский Türkçe اردو हिन्दी Tagalog 中文 ئۇيغۇرچە Kurdî Português Tiếng Việt Kiswahili Nederlands অসমীয়া ગુજરાતી සිංහල Magyar ქართული Hausa Română ไทย తెలుగు मराठी ភាសាខ្មែរ دری አማርኛ Македонски Українська ਪੰਜਾਬੀ മലയാളം Mooreالشرح
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುವುದೇನೆಂದರೆ, ಒಬ್ಬ ದಾಸನು ಮರಣ ಹೊಂದಿದಾಗ, ಅವನಿಗೆ ಸ್ವರ್ಗ ಅಥವಾ ನರಕದಲ್ಲಿರುವ ಅವನ ನಿರ್ದಿಷ್ಟ ನಿವಾಸ ಮತ್ತು ಸ್ಥಾನವನ್ನು ಬೆಳಿಗ್ಗೆ ಮತ್ತು ಸಂಜೆ ತೋರಿಸಲಾಗುತ್ತದೆ. ಅವನು ಸ್ವರ್ಗವಾಸಿಗಳಲ್ಲಿ ಸೇರಿದವನಾಗಿದ್ದರೆ ಸ್ವರ್ಗದಲ್ಲಿನ ಅವನ ಸ್ಥಾನ, ಮತ್ತು ಅವನು ನರಕವಾಸಿಗಳಲ್ಲಿ ಸೇರಿದವನಾಗಿದ್ದರೆ ನರಕದಲ್ಲಿನ ಅವನ ಸ್ಥಾನ. ಅವನೊಂದಿಗೆ ಹೇಳಲಾಗುತ್ತದೆ: ಪುನರುತ್ಥಾನ ದಿನದಂದು ನಿನ್ನನ್ನು ಕಳುಹಿಸಲಾಗುವ ನಿನ್ನ ಸ್ಥಾನ ಇದೇ. ಇದರಲ್ಲಿ ಸತ್ಯವಿಶ್ವಾಸಿಗೆ ಸುಖಾನುಗ್ರಹಗಳಿವೆ ಮತ್ತು ಸತ್ಯನಿಷೇಧಿಗೆ ಶಿಕ್ಷೆಯಿದೆ.دفوائد الحديث
ಸಮಾಧಿಯ ಶಿಕ್ಷೆ ಮತ್ತು ಸುಖವು ಸತ್ಯವಾಗಿದೆ.
ಇಬ್ನ್ ಹಜರ್ ಹೇಳುತ್ತಾರೆ: "ಈ ಸ್ಥಾನವನ್ನು ದೇವಭಯವುಳ್ಳ ಸತ್ಯವಿಶ್ವಾಸಿಗೆ ಮತ್ತು ಸತ್ಯನಿಷೇಧಿಗೆ ತೋರಿಸುವುದರ ಉದ್ದೇಶ ಸ್ಪಷ್ಟ. ಆದರೆ, ಪಾಪಗಳನ್ನು ಮಾಡಿರುವ ಸತ್ಯವಿಶ್ವಾಸಿಗೆ ಸಂಬಂಧಿಸಿದಂತೆ, ಅವನು ಅಂತಿಮವಾಗಿ ಸೇರುವ ಸ್ವರ್ಗದಲ್ಲಿನ ಅವನ ಸ್ಥಾನವನ್ನು ಅವನಿಗೂ ತೋರಿಸುವ ಸಾಧ್ಯತೆಯಿದೆ."
