ಒಬ್ಬ ಮುಸ್ಲಿಂ ವ್ಯಕ್ತಿಯು ತನ್ನ ಸಹೋದರನಿಗಾಗಿ ಅವನ ಅನುಪಸ್ಥಿತಿಯಲ್ಲಿ ಮಾಡುವ ಪ್ರಾರ್ಥನೆಯು ಸ್ವೀಕರಿಸಲ್ಪಡುತ್ತದೆ

ಒಬ್ಬ ಮುಸ್ಲಿಂ ವ್ಯಕ್ತಿಯು ತನ್ನ ಸಹೋದರನಿಗಾಗಿ ಅವನ ಅನುಪಸ್ಥಿತಿಯಲ್ಲಿ ಮಾಡುವ ಪ್ರಾರ್ಥನೆಯು ಸ್ವೀಕರಿಸಲ್ಪಡುತ್ತದೆ

ಉಮ್ಮು ದರ್ದಾಅ್ ಮತ್ತು ಅಬೂ ದರ್ದಾಅ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುತ್ತಿದ್ದರು: "ಒಬ್ಬ ಮುಸ್ಲಿಂ ವ್ಯಕ್ತಿಯು ತನ್ನ ಸಹೋದರನಿಗಾಗಿ ಅವನ ಅನುಪಸ್ಥಿತಿಯಲ್ಲಿ ಮಾಡುವ ಪ್ರಾರ್ಥನೆಯು ಸ್ವೀಕರಿಸಲ್ಪಡುತ್ತದೆ. ಅವನ ತಲೆಯ ಬಳಿ ಹೊಣೆ ವಹಿಸಿಕೊಡಲಾದ ಒಬ್ಬ ದೇವದೂತರು ಇರುತ್ತಾರೆ. ಪ್ರತಿ ಬಾರಿ ಅವನು ತನ್ನ ಸಹೋದರನಿಗಾಗಿ ಒಳಿತನ್ನು ಪ್ರಾರ್ಥಿಸಿದಾಗ, ಹೊಣೆ ವಹಿಸಿಕೊಡಲಾದ ದೇವದೂತರು ಹೇಳುತ್ತಾರೆ: 'ಆಮೀನ್ (ಅಲ್ಲಾಹನೇ, ಈ ಪ್ರಾರ್ಥನೆಯನ್ನು ಸ್ವೀಕರಿಸು), ಮತ್ತು ನಿನಗೂ ಅಂತಹದ್ದೇ ಇರಲಿ' ".

[صحيح] [رواه مسلم]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಒಬ್ಬ ಮುಸ್ಲಿಂ ತನ್ನ ಮುಸ್ಲಿಂ ಸಹೋದರನ ಅನುಪಸ್ಥಿತಿಯಲ್ಲಿ ಅವನಿಗಾಗಿ ಮಾಡುವ ಪ್ರಾರ್ಥನೆಯು ಸ್ವೀಕರಿಸಲ್ಪಡುತ್ತದೆ. ಏಕೆಂದರೆ ಅದು ನಿಷ್ಕಳಂಕತೆಯಲ್ಲಿ (ಇಖ್ಲಾಸ್) ಹೆಚ್ಚು ಪರಿಣಾಮಕಾರಿಯಾಗಿದೆ. ಪ್ರಾರ್ಥಿಸುವವನ ತಲೆಯ ಬಳಿ ಹೊಣೆ ವಹಿಸಿಕೊಡಲಾದ ಒಬ್ಬ ದೇವದೂತರು ಇರುತ್ತಾರೆ. ಪ್ರತಿ ಬಾರಿ ಅವನು ತನ್ನ ಸಹೋದರನಿಗಾಗಿ ಒಳಿತನ್ನು ಪ್ರಾರ್ಥಿಸಿದಾಗ, ಹೊಣೆ ವಹಿಸಿಕೊಡಲಾದ ದೇವದೂತರು ಹೇಳುತ್ತಾರೆ: ಆಮೀನ್, ಮತ್ತು ನೀನು ಪ್ರಾರ್ಥಿಸಿದ್ದು ನಿನಗೂ ಇರಲಿ.

فوائد الحديث

ಸತ್ಯವಿಶ್ವಾಸಿಗಳು ಪರಸ್ಪರರಿಗೆ - ಅದು ಪ್ರಾರ್ಥನೆಯ ಮೂಲಕವಾದರೂ - ಒಳಿತು ಮಾಡಲು ಪ್ರೋತ್ಸಾಹಿಸಲಾಗಿದೆ.

ಪರೋಕ್ಷವಾಗಿ ಮಾಡುವ ಪ್ರಾರ್ಥನೆಯು ಈಮಾನ್ (ವಿಶ್ವಾಸ) ಮತ್ತು ಸಹೋದರತ್ವದ ಸತ್ಯತೆಗೆ ಸ್ಪಷ್ಟವಾದ ದ್ಯೋತಕವಾಗಿದೆ.

ಪರೋಕ್ಷವಾಗಿ ಮಾಡುವ ಪ್ರಾರ್ಥನೆಗೆ ಮಾತ್ರ ಈ ವಿಶೇಷತೆಯನ್ನು ನೀಡಲಾಗಿದೆ. ಏಕೆಂದರೆ ಅದು ನಿಷ್ಕಳಂಕತೆ ಮತ್ತು ಹೃದಯದ ಏಕಾಗ್ರತೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ.

ಒಬ್ಬ ಮುಸ್ಲಿಮ್ ತನ್ನ ಸಹೋದರನಿಗಾಗಿ ಅವನ ಅನುಪಸ್ಥಿತಿಯಲ್ಲಿ ಪ್ರಾರ್ಥಿಸುವುದು ಪ್ರಾರ್ಥನೆಯು ಸ್ವೀಕರಿಸಲ್ಪಡುವ ಕಾರಣಗಳಲ್ಲಿ ಒಂದಾಗಿದೆ.

ಇಮಾಮ್ ನವವಿ ಹೇಳುತ್ತಾರೆ: ತನ್ನ ಮುಸ್ಲಿಂ ಸಹೋದರನಿಗಾಗಿ ಅವನ ಅನುಪಸ್ಥಿತಿಯಲ್ಲಿ ಪ್ರಾರ್ಥಿಸುವುದರ ಶ್ರೇಷ್ಠತೆಯನ್ನು ವಿವರಿಸಲಾಗಿದೆ. ಒಬ್ಬನು ಮುಸ್ಲಿಮರ ಒಂದು ಗುಂಪಿಗಾಗಿ ಪ್ರಾರ್ಥಿಸಿದರೂ, ಈ ಶ್ರೇಷ್ಠತೆಯು ದೊರೆಯುತ್ತದೆ. ಒಬ್ಬನು ಎಲ್ಲಾ ಮುಸ್ಲಿಮರಿಗಾಗಿ ಪ್ರಾರ್ಥಿಸಿದರೂ, ಆಗಲೂ ಇದು ದೊರೆಯುತ್ತದೆ ಎಂಬುದು ಸ್ಪಷ್ಟ. ಸಜ್ಜನ ಪೂರ್ವಿಕರಲ್ಲಿ (ಸಲಫ್) ಕೆಲವರು ತಮಗಾಗಿ ಪ್ರಾರ್ಥಿಸಲು ಬಯಸಿದರೆ, ತಮ್ಮ ಮುಸ್ಲಿಂ ಸಹೋದರನಿಗಾಗಿ ಅದೇ ಪ್ರಾರ್ಥನೆಯನ್ನು ಮಾಡುತ್ತಿದ್ದರು. ಏಕೆಂದರೆ ಅದು ಸ್ವೀಕರಿಸಲ್ಪಡುತ್ತದೆ, ಮತ್ತು ಅವರಿಗೂ ಅದರಂತಿರುವುದು (ಅವರು ಪ್ರಾರ್ಥಿಸಿದ್ದು) ದೊರೆಯುತ್ತದೆ.

ದೇವದೂತರುಗಳ ಕೆಲವು ಕೆಲಸಗಳನ್ನು, ಅವರಲ್ಲಿ ಕೆಲವರನ್ನು ಅಲ್ಲಾಹು ಈ ಕಾರ್ಯಕ್ಕಾಗಿ ನಿಯೋಜಿಸಿದ್ದಾನೆ ಎಂಬುದನ್ನು ವಿವರಿಸಲಾಗಿದೆ.

التصنيفات

ದೇವದೂತರಲ್ಲಿ ವಿಶ್ವಾಸವಿಡುವುದು, Merits of Supplication