ನರಕವಾಸಿಗಳಲ್ಲಿ ಅತ್ಯಂತ ಕನಿಷ್ಠ ಶಿಕ್ಷೆಯನ್ನು ಅನುಭವಿಸುವವನು ಯಾರೆಂದರೆ, ಬೆಂಕಿಯಿಂದ ಮಾಡಿದ ಎರಡು ಚಪ್ಪಲಿಗಳು ಮತ್ತು ಎರಡು…

ನರಕವಾಸಿಗಳಲ್ಲಿ ಅತ್ಯಂತ ಕನಿಷ್ಠ ಶಿಕ್ಷೆಯನ್ನು ಅನುಭವಿಸುವವನು ಯಾರೆಂದರೆ, ಬೆಂಕಿಯಿಂದ ಮಾಡಿದ ಎರಡು ಚಪ್ಪಲಿಗಳು ಮತ್ತು ಎರಡು ಚಪ್ಪಲಿದಾರಗಳನ್ನು ಧರಿಸಿದವನು. ಅವುಗಳಿಂದ ಅವನ ಮಿದುಳು ಪಾತ್ರೆಯು ಕುದಿಯುವಂತೆ ಕುದಿಯುತ್ತದೆ. ಅವನು ತನಗಿಂತ ಹೆಚ್ಚು ಕಠಿಣವಾದ ಶಿಕ್ಷೆಯನ್ನು ಅನುಭವಿಸುವವರು ಯಾರೂ ಇರಲಾರರು ಎಂದು ಭಾವಿಸುತ್ತಾನೆ. ಆದರೆ ವಾಸ್ತವವಾಗಿ ಅವನು ಅವರಲ್ಲಿ ಅತ್ಯಂತ ಕನಿಷ್ಠ ಶಿಕ್ಷೆಯನ್ನು ಅನುಭವಿಸುವವನಾಗಿದ್ದಾನೆ

ನುಅಮಾನ್ ಬಿನ್ ಬಶೀರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನರಕವಾಸಿಗಳಲ್ಲಿ ಅತ್ಯಂತ ಕನಿಷ್ಠ ಶಿಕ್ಷೆಯನ್ನು ಅನುಭವಿಸುವವನು ಯಾರೆಂದರೆ, ಬೆಂಕಿಯಿಂದ ಮಾಡಿದ ಎರಡು ಚಪ್ಪಲಿಗಳು ಮತ್ತು ಎರಡು ಚಪ್ಪಲಿದಾರಗಳನ್ನು ಧರಿಸಿದವನು. ಅವುಗಳಿಂದ ಅವನ ಮಿದುಳು ಪಾತ್ರೆಯು ಕುದಿಯುವಂತೆ ಕುದಿಯುತ್ತದೆ. ಅವನು ತನಗಿಂತ ಹೆಚ್ಚು ಕಠಿಣವಾದ ಶಿಕ್ಷೆಯನ್ನು ಅನುಭವಿಸುವವರು ಯಾರೂ ಇರಲಾರರು ಎಂದು ಭಾವಿಸುತ್ತಾನೆ. ಆದರೆ ವಾಸ್ತವವಾಗಿ ಅವನು ಅವರಲ್ಲಿ ಅತ್ಯಂತ ಕನಿಷ್ಠ ಶಿಕ್ಷೆಯನ್ನು ಅನುಭವಿಸುವವನಾಗಿದ್ದಾನೆ."

[صحيح] [متفق عليه]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಪುನರುತ್ಥಾನ ದಿನದಂದು ನರಕವಾಸಿಗಳಲ್ಲಿ ಅತ್ಯಂತ ಕನಿಷ್ಠ ಶಿಕ್ಷೆಯನ್ನು ಅನುಭವಿಸುವವನು ಯಾರೆಂದರೆ, ಎರಡು ಚಪ್ಪಲಿಗಳು ಮತ್ತು ಚಪ್ಪಲಿದಾರಗಳನ್ನು ಧರಿಸಿದವನು. ಅವುಗಳ ಶಾಖದಿಂದ ಅವನ ಮಿದುಳು ತಾಮ್ರದ ಪಾತ್ರೆಯು ಕುದಿಯುವಂತೆ ಕುದಿಯುತ್ತದೆ. ಅವನು ತನಗಿಂತ ಹೆಚ್ಚು ಕಠಿಣವಾದ ಶಿಕ್ಷೆಯನ್ನು ಅನುಭವಿಸುವವರು ಯಾರೂ ಇರಲಾರರು ಎಂದು ಭಾವಿಸುತ್ತಾನೆ. ಆದರೆ ವಾಸ್ತವವಾಗಿ ಅವನು ಅವರಲ್ಲಿ ಅತ್ಯಂತ ಕನಿಷ್ಠ ಶಿಕ್ಷೆಯನ್ನು ಅನುಭವಿಸುವವನಾಗಿದ್ದಾನೆ. ಏಕೆಂದರೆ ಅವನು ದೈಹಿಕ ಮತ್ತು ಮಾನಸಿಕ ಶಿಕ್ಷೆಗಳೆರಡನ್ನೂ ಅನುಭವಿಸುತ್ತಿದ್ದಾನೆ.

فوائد الحديث

ನರಕದಲ್ಲಿನ ಈ ಭಯಾನಕ ಶಿಕ್ಷೆಯ ಬಗ್ಗೆ ಪಾಪಿಗಳು ಮತ್ತು ಸತ್ಯನಿಷೇಧಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಅವರು ಅದಕ್ಕೆ ಕಾರಣವಾಗುವ ಕೆಲಸಗಳಿಂದ ದೂರವಿರುವುದಕ್ಕಾಗಿ.

ನರಕವನ್ನು ಪ್ರವೇಶಿಸುವವರ ಶ್ರೇಣಿಗಳಲ್ಲಿ ಅವರ ಕೆಡುಕುಗಳಿಗೆ ಅನುಗುಣವಾಗಿ ವ್ಯತ್ಯಾಸಗಳಿರುತ್ತವೆ.

ನರಕ ಶಿಕ್ಷೆಯ ಭಯಾನಕತೆಯನ್ನು ತಿಳಿಸಲಾಗಿದೆ. ಅಲ್ಲಾಹು ನಮ್ಮನ್ನು ಅದರಿಂದ ರಕ್ಷಿಸಲಿ.

التصنيفات

Descriptions of Paradise and Hell