ನಿಮ್ಮಲ್ಲಿ ಯಾರಾದರೂ ಆಕಳಿಸಿದರೆ, ಅವನು ತನ್ನ ಕೈಯನ್ನು ಬಾಯಿಯ ಮೇಲೆ ಇಟ್ಟುಕೊಳ್ಳಲಿ. ಏಕೆಂದರೆ ಖಂಡಿತವಾಗಿಯೂ ಶೈತಾನನು…

ನಿಮ್ಮಲ್ಲಿ ಯಾರಾದರೂ ಆಕಳಿಸಿದರೆ, ಅವನು ತನ್ನ ಕೈಯನ್ನು ಬಾಯಿಯ ಮೇಲೆ ಇಟ್ಟುಕೊಳ್ಳಲಿ. ಏಕೆಂದರೆ ಖಂಡಿತವಾಗಿಯೂ ಶೈತಾನನು ಪ್ರವೇಶಿಸುತ್ತಾನೆ

ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮಲ್ಲಿ ಯಾರಾದರೂ ಆಕಳಿಸಿದರೆ, ಅವನು ತನ್ನ ಕೈಯನ್ನು ಬಾಯಿಯ ಮೇಲೆ ಇಟ್ಟುಕೊಳ್ಳಲಿ. ಏಕೆಂದರೆ ಖಂಡಿತವಾಗಿಯೂ ಶೈತಾನನು ಪ್ರವೇಶಿಸುತ್ತಾನೆ."

[صحيح] [رواه مسلم]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಯಾರಾದರೂ ಸೋಮಾರಿತನದಿಂದ, ಹೊಟ್ಟೆ ತುಂಬಿರುವುದರಿಂದ ಅಥವಾ ಇತರ ಕಾರಣಗಳಿಂದ ಬಾಯಿಯನ್ನು ತೆರೆದು ಆಕಳಿಸುವುದಾದರೆ, ಅವನು ತನ್ನ ಕೈಯನ್ನು ಬಾಯಿಯ ಮೇಲಿಟ್ಟು ಅದನ್ನು ಮುಚ್ಚಿಕೊಳ್ಳಲಿ. ಏಕೆಂದರೆ ಅವನು ಬಾಯಿಯನ್ನು ತೆರೆದಿಟ್ಟರೆ ಶೈತಾನನು ಬಾಯೊಳಗೆ ಪ್ರವೇಶಿಸುತ್ತಾನೆ. ಕೈ ಇಟ್ಟರೆ ಅದು ಅವನು ಪ್ರವೇಶಿಸುವುದನ್ನು ತಡೆಯುತ್ತದೆ.

فوائد الحديث

ಒಬ್ಬ ವ್ಯಕ್ತಿಯು ಆಕಳಿಸಲು ಉದ್ದೇಶಿಸಿದರೆ, ಅವನು ಅದನ್ನು ಸಾಧ್ಯವಾದಷ್ಟು ತಡೆಗಟ್ಟಬೇಕು. ಅಂದರೆ ಬಾಯಿ ತೆರೆಯದೆ ಮುಚ್ಚಿಡುವ ಮೂಲಕ ಅದನ್ನು ತಡೆಗಟ್ಟಬೇಕು. ತನ್ನ ಬಾಯಿಯನ್ನು ಮುಚ್ಚಿಡಲು ಸಾಧ್ಯವಾಗದಿದ್ದರೆ, ಅವನು ತನ್ನ ಕೈಯನ್ನು ಬಾಯಿಯ ಮೇಲೆ ಇಟ್ಟು, ಕೈಯ ಮೂಲಕ ಬಾಯಿಯನ್ನು ಮುಚ್ಚಬೇಕು.

ಎಲ್ಲಾ ಸಂದರ್ಭಗಳಲ್ಲೂ ಇಸ್ಲಾಂ ಕಲಿಸುವ ಶಿಷ್ಟಾಚಾರಗಳಿಗೆ ಅಂಟಿಕೊಂಡಿರಬೇಕೆಂದು ತಿಳಿಸಲಾಗಿದೆ. ಏಕೆಂದರೆ ಅವು ಪರಿಪೂರ್ಣತೆ ಮತ್ತು ಗುಣನಡತೆಗಳ ಸಾಕಾರರೂಪವಾಗಿವೆ.

ಶೈತಾನನು ಮನುಷ್ಯನೊಳಗೆ ಪ್ರವೇಶಿಸಬಹುದಾದ ಎಲ್ಲಾ ದ್ವಾರಗಳ ಬಗ್ಗೆ ಎಚ್ಚರಿಸಲಾಗಿದೆ.

التصنيفات

Manners of Sneezing and Yawning