ಯಾವ ಜ್ಞಾನವನ್ನು ಅಲ್ಲಾಹನ ಸಂತೃಪ್ತಿಯನ್ನು ಅರಸಿ ಕಲಿಯಬೇಕೋ ಅಂತಹ ಜ್ಞಾನವನ್ನು, ಯಾರು ಈ ಪ್ರಪಂಚದ ಒಂದು ಪಾಲನ್ನು ಪಡೆಯಲು ಮಾತ್ರ…

ಯಾವ ಜ್ಞಾನವನ್ನು ಅಲ್ಲಾಹನ ಸಂತೃಪ್ತಿಯನ್ನು ಅರಸಿ ಕಲಿಯಬೇಕೋ ಅಂತಹ ಜ್ಞಾನವನ್ನು, ಯಾರು ಈ ಪ್ರಪಂಚದ ಒಂದು ಪಾಲನ್ನು ಪಡೆಯಲು ಮಾತ್ರ ಕಲಿಯುತ್ತಾನೋ, ಅವನು ಪುನರುತ್ಥಾನ ದಿನದಂದು ಸ್ವರ್ಗದ ಪರಿಮಳವನ್ನು ಸಹ ಆಸ್ವದಿಸುವುದಿಲ್ಲ

ಅಬೂ ಹುರೈರಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾವ ಜ್ಞಾನವನ್ನು ಅಲ್ಲಾಹನ ಸಂತೃಪ್ತಿಯನ್ನು ಅರಸಿ ಕಲಿಯಬೇಕೋ ಅಂತಹ ಜ್ಞಾನವನ್ನು, ಯಾರು ಈ ಪ್ರಪಂಚದ ಒಂದು ಪಾಲನ್ನು ಪಡೆಯಲು ಮಾತ್ರ ಕಲಿಯುತ್ತಾನೋ, ಅವನು ಪುನರುತ್ಥಾನ ದಿನದಂದು ಸ್ವರ್ಗದ ಪರಿಮಳವನ್ನು ಸಹ ಆಸ್ವದಿಸುವುದಿಲ್ಲ." - ಅಂದರೆ ಅದರ ಸುವಾಸನೆಯನ್ನು.

[صحيح] [رواه أبو داود وابن ماجه وأحمد]

الشرح

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿವರಿಸುವುದೇನೆಂದರೆ, ಯಾರು ಶರೀಅತ್‌ನ (ಧಾರ್ಮಿಕ) ಜ್ಞಾನವನ್ನು ಕಲಿಯುತ್ತಾನೋ – ಮೂಲತಃ ಅದನ್ನು ಅಲ್ಲಾಹನ ಸಂತೃಪ್ತಿಗಾಗಿ ಕಲಿಯಬೇಕಾಗಿದೆ – ಆದರೆ ಅವನು ಅದನ್ನು ಕೇವಲ ಈ ಪ್ರಪಂಚದ ಒಂದು ಪಾಲು ಮತ್ತು ಸುಖಭೋಗವನ್ನು, ಅಂದರೆ ಸಂಪತ್ತು ಅಥವಾ ಸ್ಥಾನಮಾನವನ್ನು, ಪಡೆಯಲು ಮತ್ತು ಗಳಿಸಲು ಕಲಿಯುತ್ತಾನೋ, ಅವನು ಪುನರುತ್ಥಾನ ದಿನದಂದು ಸ್ವರ್ಗದ ಪರಿಮಳವನ್ನು ಸಹ ಕಾಣುವುದಿಲ್ಲ.

فوائد الحديث

ಜ್ಞಾನವನ್ನು ಕಲಿಯುವುದರಲ್ಲಿ 'ಇಖ್ಲಾಸ್' (ನಿಷ್ಕಳಂಕತೆ) ಕಡ್ಡಾಯವಾಗಿದೆಯೆಂದು ತಿಳಿಸಲಾದಿಗೆ, ಮತ್ತು ಅದಕ್ಕಾಗಿ ಪ್ರೋತ್ಸಾಹಿಸಲಾಗಿದೆ.

ಧಾರ್ಮಿಕ ಜ್ಞಾನವನ್ನು 'ರಿಯಾ' (ತೋರಿಕೆ) ಗಾಗಿ ಅಥವಾ ಇಹಲೋಕಕ್ಕೆ ಒಂದು ಉಪಾಧಿಯಾಗಿ ಬಳಸಿಕೊಳ್ಳುವುದರ ಬಗ್ಗೆ ತೀವ್ರವಾಗಿ ಎಚ್ಚರಿಸಲಾಗಿದೆ, ಮತ್ತು ಅದು ಮಹಾಪಾಪಗಳಲ್ಲಿ ಒಂದಾಗಿದೆ ಎಂದು ತಿಳಿಸಲಾಗಿದೆ..

ಅಲ್ಲಾಹನಿಗಾಗಿ ಜ್ಞಾನವನ್ನು ಕಲಿಯುವವನಿಗೆ, ಇಹಲೋಕವು (ಅದರ ಪ್ರಯೋಜನಗಳು) ತಾನಾಗಿಯೇ ಅವನ ಬಳಿ ಬಂದರೆ, ಅದನ್ನು ತೆಗೆದುಕೊಳ್ಳಲು ಅವನಿಗೆ ಅನುಮತಿಯಿದೆ. ಅದು ಅವನಿಗೆ ಹಾನಿ ಮಾಡುವುದಿಲ್ಲ.

ಅಸ್ಸಿಂದಿ ಹೇಳುತ್ತಾರೆ: "'ಅರ್ಫುಲ್-ಜನ್ನ' ಎಂದರೆ ಸ್ವರ್ಗದ ಸುವಾಸನೆ. ಇದು (ಅಂತಹವನಿಗೆ) ಸ್ವರ್ಗವನ್ನು ನಿಷಿದ್ಧಗೊಳಿಸಲಾಗಿದೆ ಎಂಬುದಕ್ಕೆ ಒಂದು ಉತ್ಪ್ರೇಕ್ಷೆಯಾಗಿದೆ. ಏಕೆಂದರೆ ಯಾರು ಒಂದು ವಸ್ತುವಿನ ಸುವಾಸನೆಯನ್ನು ಸಹ ಅಸ್ವಾದಿಸುವುದಿಲ್ಲವೋ, ಅವನು ಅದನ್ನು ಖಂಡಿತವಾಗಿಯೂ ಪಡೆಯುವುದಿಲ್ಲ.

ಯಾರು ಅಲ್ಲಾಹನ ಸಂತೃಪ್ತಿಗಾಗಿ ಕಲಿಯಬೇಕಾದ ಜ್ಞಾನವನ್ನು ಉದ್ಯೋಗಕ್ಕಾಗಿ, ಅಥವಾ ಇತರ ಉದ್ದೇಶಗಳಿಗಾಗಿ ಕಲಿಯುತ್ತಾನೋ; ಅವನು ಅದಕ್ಕಾಗಿ ಅಲ್ಲಾಹನಲ್ಲಿ ಪಶ್ಚಾತ್ತಾಪ ಪಡಬೇಕು. ಅಲ್ಲಾಹು ಅವನಿಗೆ ಉಂಟಾದ ಕೆಟ್ಟ ಉದ್ದೇಶವನ್ನು ಅವನಿಂದ ಅಳಿಸಿಹಾಕುತ್ತಾನೆ. ಅಲ್ಲಾಹು ಮಹಾನ್ ಅನುಗ್ರಹದ ಒಡೆಯನಾಗಿದ್ದಾನೆ.

ಈ ಎಚ್ಚರಿಕೆಯು ಶರೀಅತ್‌ನ (ಧಾರ್ಮಿಕ) ಜ್ಞಾನವನ್ನು ಕಲಿಯುವ ವಿದ್ಯಾರ್ಥಿಗೆ ಸಂಬಂಧಿಸಿದೆ. ಆದರೆ, ಯಾರು ಇಹಲೋಕದ ಸುಖಭೋಗಗಳಿಗಾಗಿ ಈ ಪ್ರಪಂಚದ ಜ್ಞಾನವನ್ನು, ಉದಾಹರಣೆಗೆ ಇಂಜಿನಿಯರಿಂಗ್, ಕೆಮಿಸ್ಟ್ರಿ ಇತ್ಯಾದಿಗಳನ್ನು, ಕಲಿಯುತ್ತಾನೋ, ಅವನಿಗೆ ಅವನ ಉದ್ದೇಶಕ್ಕೆ ತಕ್ಕ ಪ್ರತಿಫಲವಿದೆ (ಅಂದರೆ, ಈ ಎಚ್ಚರಿಕೆ ಅದಕ್ಕೆ ಅನ್ವಯಿಸುವುದಿಲ್ಲ).

التصنيفات

Blameworthy Morals, Manners of Scholars and Learners